Right time for breakfast : ಕೆಲವರು ಬೆಳಗ್ಗೆ ಎದ್ದ ಕೂಡಲೇ ಉಪಹಾರ ಮುಗಿಸಿಕೊಳ್ಳುತ್ತಾರೆ. ಇನ್ನು ಕೆಲವರು ಮನೆಯ ಎಲ್ಲ ಕೆಲಸಗಳನ್ನು ಮುಗಿಸಿ ಮತ್ತೆ ತಿಂಡಿ ತಿನ್ನಲು ಕುಳಿತುಕೊಳ್ಳುತ್ತಾರೆ. ಮತ್ತೆ ಕೆಲವರಿಗೆ ಬೆಳಿಗ್ಗೆ ಏನನ್ನೂ ತಿನ್ನುವ ಅಭ್ಯಾಸವೇ ಇರುವುದಿಲ್ಲ.  ಹೀಗೆ ಮನ ಬಂದಂತೆ ಬೆಳಗಿನ ಉಪಹಾರ ಸೇವಿಸುವ ಕ್ರಮ ಸರಿಯಲ್ಲ. ಬೆಳಗಿನ ಉಪಾಹಾರವನ್ನು ತಿನ್ನಲು ಸರಿಯಾದ ಸಮಯವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಆ ಸಮಯದಲ್ಲಿ ನಾವು ಉಪಾಹಾರ ಸೇವಿಸದಿದ್ದರೆ, ನಮ್ಮ ದೇಹದ ಮೇಲೆ ಕೆಲವು ನಕಾರಾತ್ಮಕ ಪರಿಣಾಮಗಳು ಉಂಟಾಗಬಹುದು. ಸಮಯಕ್ಕೆ ಸರಿಯಾಗಿ ಬೆಳಗಿನ ಉಪಾಹಾರವನ್ನು ಸೇವಿಸದಿರುವುದು ನಮ್ಮ ದೇಹದ ಶಕ್ತಿಯ ಮಟ್ಟವನ್ನು ಕಡಿಮೆ ಮಾಡುತ್ತದೆ. ನಾವು ದಿನವಿಡೀ ದಣಿವು ಮತ್ತು ದುರ್ಬಲತೆ ಅನುಭವಿಸಬೇಕಾಗಬಹುದು. ಇದು ನಮ್ಮ ಮಾನಸಿಕ ಒತ್ತಡ ಮತ್ತು ಆತಂಕವನ್ನು ಹೆಚ್ಚಿಸಬಹುದು. ಮತ್ತೊಂದೆಡೆ, ಬೆಳಗಿನ ಉಪಹಾರವನ್ನು  ಮಾಡದೇ ಹೋದರೆ ನಮ್ಮ ರೋಗನಿರೋಧಕ ವ್ಯವಸ್ಥೆಯ ಮೇಲೆ ಅದು  ಪರಿಣಾಮ ಬೀರುತ್ತದೆ. ರಕ್ತದೊತ್ತಡ ಮತ್ತು ಮಧುಮೇಹದ ಅಪಾಯ ಹೆಚ್ಚಾಗುತ್ತದೆ. ಉತ್ತಮ ಆರೋಗ್ಯ ಮತ್ತು ಸಮತೋಲಿತ ಜೀವನಶೈಲಿಗೆ  ಸರಿಯಾದ ಸಮಯದಲ್ಲಿ ಬೆಳಗಿನ ಉಪಾಹಾರ ಸೇವಿಸುವುದು ಬಹಳ ಮುಖ್ಯವಾಗಿದೆ.


COMMERCIAL BREAK
SCROLL TO CONTINUE READING

ಬೆಳಿಗ್ಗೆ ಸರಿಯಾದ ಸಮಯಕ್ಕೆ ಉಪಹಾರ ಸೇವಿಸದಿರುವುದು ದೇಹದಲ್ಲಿ ಹಲವಾರು ಸಮಸ್ಯೆಗಳನ್ನು ಉಂಟುಮಾಡಬಹುದು. ನಿಮ್ಮ ದೇಹಕ್ಕೆ ಸರಿಯಾದ ಶಕ್ತಿಯನ್ನು ಒದಗಿಸದಿದ್ದರೆ, ಬೆಳಿಗ್ಗೆಯಿಂದಲೇ ದಣಿದ ಮತ್ತು ದುರ್ಬಲತೆಯನ್ನು ಅನುಭವಿಸಬಹುದು. ಇದರೊಂದಿಗೆ ಸರಿಯಾದ ಸಮಯಕ್ಕೆ ಬೆಳಗಿನ ಉಪಾಹಾರವನ್ನು ಸೇವಿಸದಿರುವುದರಿಂದ  ಹಸಿವೂ ಹೆಚ್ಚಾಗುತ್ತದೆ. ಸರಿಯಾದ ಸಮಯಕ್ಕೆ ಉಪಹಾರ ಸೇವಿಸದೇ ಹೋದರೆ ಅದು ದೇಹ ತೂಕದ ಮೇಲೆ ಪರಿಣಾಮ ಬೀರುತ್ತದೆ. 


ಇದನ್ನೂ ಓದಿ : Curd Benefits: ಮಳೆಗಾಲದಲ್ಲಿ ʼಮೊಸರುʼ ಸೇವನೆ ಆರೋಗ್ಯಕ್ಕೆ ಒಳ್ಳೆಯದೇ..?


ಬೆಳಗಿನ ಉಪಹಾರಕ್ಕೆ ಸರಿಯಾದ ಸಮಯ ಯಾವುದು? : 
ಬೆಳಿಗ್ಗೆ 7 ರಿಂದ 8 ಗಂಟೆಯೊಳಗೆ ಬೆಳಗಿನ ಉಪಹಾರವನ್ನು ಪೂರೈಸಿಕೊಳ್ಳಬೇಕು. ವಿಜ್ಞಾನಿಗಳ ಪ್ರಕಾರ, ನೀವು ತಡವಾಗಿ ಎದ್ದರೆ, ಎದ್ದ ಒಂದು ಗಂಟೆಯೊಳಗೆ ಉಪಹಾರವನ್ನು ಸೇವಿಸುವುದು ಉತ್ತಮ ಸಮಯ. ಏಕೆಂದರೆ ರಾತ್ರಿ ಭೋಜನ ಮುಗಿಸಿದ ಬೆಳಗ್ಗಿನವರೆಗೆ ಅಂದರೆ ದೀರ್ಘ ಕಾಲದವರೆಗೆ ಏನನ್ನೂ ಸೇವಿಸಿರುವುದಿಲ್ಲ. ಹೊಟ್ಟೆ ದೀರ್ಘ ಕಾಲದವರೆಗೆ ಖಾಲಿ ಇರುವ ಕಾರಣ ನಮ್ಮ ದೇಹಕ್ಕೆ ಶಕ್ತಿಯ ಅಗತ್ಯವಿರುತ್ತದೆ. ಬೆಳಿಗ್ಗೆ ಗ್ಲೂಕೋಸ್ ಮಟ್ಟವು ಸಾಮಾನ್ಯವಾಗಿ ಕಡಿಮೆಯಾಗುತ್ತದೆ. ಬೆಳಗಿನ ಉಪಾಹಾರವು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ದಿನವನ್ನು ಪ್ರಾರಂಭಿಸಲು ನಮಗೆ ಶಕ್ತಿಯನ್ನು ನೀಡುತ್ತದೆ.


ಆರೋಗ್ಯಕರ ಉಪಹಾರ ಆಯ್ಕೆ : 
ಬೆಳಗಿನ ಉಪಹಾರದಲ್ಲಿ ಹಣ್ಣುಗಳು, ತರಕಾರಿಗಳು ಮತ್ತು ಸಿರಿಧಾನ್ಯಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಉತ್ತಮವಾದ ಫೈಬರ್ ದೇಹಕ್ಕೆ ಸಿಗುತ್ತದೆ. ಓಟ್ ಮೀಲ್, ಹಣ್ಣು ಮತ್ತು ತರಕಾರಿ ಸ್ಮೂಥಿ, ಮೊಟ್ಟೆ  ಹೀಗೆ ಆರೋಗ್ಯಕರ ಆಹಾರಗಳನ್ನು ಬೆಳಗಿನ ಉಪಹಾರದಲ್ಲಿ ಸೇವಿಸಬೇಕು. ಬೆಳಗಿನ ಉಪಾಹಾರವನ್ನು ಸರಿಯಾದ ಸಮಯಕ್ಕೆ ಸೇವಿಸುವುದರಿಂದ ಹಸಿವು ಕಡಿಮೆಯಾಗುತ್ತದೆ. ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ ಮತ್ತು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಬೆಳಿಗ್ಗೆ ಉಪಹಾರವನ್ನು ಸೇವಿಸುವುದು ಬಹಳ ಮುಖ್ಯ.  


ಇದನ್ನೂ ಓದಿ : Cocoa Fruit: ಈ ರೋಗಗಳನ್ನು ಬುಡ ಸಮೇತ ಕಿತ್ತು ಹಾಕಲು ʼಕೊಕೊ ಹಣ್ಣುʼ ಸಹಾಯಕ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.