Acidity Remedies: ಅಸಿಡಿಟಿಯಿಂದ ಎದೆ ಉರಿಯುತ್ತಿದೆಯೇ? ಇಲ್ಲಿದೆ ಪರಿಣಾಮಕಾರಿ ಮನೆಮದ್ದು

Home Remedies for Heartburn: ಕಳಪೆ ಆಹಾರ ಪದ್ಧತಿ ಮತ್ತು ಅನಾರೋಗ್ಯಕರ ಜೀವನಶೈಲಿಯಿಂದ ಇಂದು ಅನೇಕರು ಅಸಿಡಿಟಿ ಸಮಸ್ಯೆಯಿಂದ ಬಳುತ್ತಿದ್ದಾರೆ.

ನವದೆಹಲಿ: ಕಳಪೆ ಆಹಾರ ಪದ್ಧತಿ ಮತ್ತು ಅನಾರೋಗ್ಯಕರ ಜೀವನಶೈಲಿಯಿಂದ ಇಂದು ಅನೇಕರು ಅಸಿಡಿಟಿ ಸಮಸ್ಯೆಯಿಂದ ಬಳುತ್ತಿದ್ದಾರೆ. ಹಲವಾರು ರೀತಿಯ ಔಷಧಿಗಳನ್ನು ಸೇವಿಸಿದ್ರೂ ಅಸಿಡಿಟಿ ಸಮಸ್ಯೆಗೆ ಪರಿಹಾರ ಸಿಗದೆ ಪರದಾಡುತ್ತಿರುತ್ತಾರೆ. ಹೈಪರ್ ಅಸಿಡಿಟಿಯಿಂದ ಅನೇಕರು ಎದೆಯುರಿ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದಕ್ಕೆ ಪರಿಣಾಮಕಾರಿ ಮನೆಮದ್ದುಗಳು ಇಲ್ಲಿವೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ತುಳಸಿ ಎಲೆಯು ಆಮ್ಲೀಯತೆ ತಡೆಯುವ ಸಾಮರ್ಥ್ಯ ಹೊಂದಿದೆ. ಇದು ಆಂಟಿಲ್ಸರ್ ಪರಿಣಾಮವನ್ನು ಹೊಂದಿರುತ್ತದೆ ಮತ್ತು ಹೊಟ್ಟೆಯ ಆಮ್ಲಗಳ ಕ್ರಿಯೆಯನ್ನು ತಡೆಯುತ್ತದೆ. ತುಳಸಿ ಎಲೆಗಳು ಹೊಟ್ಟೆಯಲ್ಲಿ ಲೋಳೆಯ ಉತ್ಪಾದನೆಯನ್ನು ಪ್ರೇರೇಪಿಸುತ್ತದೆ. ನೀವು ಅಸಿಡಿಟಿಯಿಂದ ಬಳಲುತ್ತಿರುವಾಗ, 5-6 ತುಳಸಿ ಎಲೆಗಳನ್ನು ಅಗಿಯುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.

2 /5

ಅತಿಯಾದ ಅಸಿಡಿಟಿಯಿಂದ ಬಳಲುತ್ತಿದ್ದರೆ ಬಾಳೆಹಣ್ಣುಗಳು ಈ ಸಮಸ್ಯೆಗೆ ಮುಕ್ತಿ ನೀಡಬಹುದು. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಂ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇದು ನಿಮ್ಮ ಹೊಟ್ಟೆಯಲ್ಲಿ ಆಮ್ಲ ಉತ್ಪಾದನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ನಾರಿನಂಶ ಹೆಚ್ಚಿದ್ದು, ಜೀರ್ಣಕ್ರಿಯೆಗೆ ನೆರವಾಗುತ್ತದೆ.

3 /5

ಹಾಲು ಹೆಚ್ಚಿನ ಕ್ಯಾಲ್ಸಿಯಂ ಹೊಂದಿರುತ್ತದೆ. ಇದು ಆಮ್ಲದ ರಚನೆ ತಡೆಯಲು & ಹೆಚ್ಚುವರಿ ಆಮ್ಲವನ್ನು ಹೀರಿಕೊಳ್ಳಲು ಸಹಕಾರಿ. ನೀವು ಅಸಿಡಿಟಿಯಿಂದ ಬಳಲುತ್ತಿದ್ದರೆ ಸಕ್ಕರೆ ರಹಿತ ತಣ್ಣಗಿರುವ ಹಾಲು ಸೇವಿಸಬೇಕು.   

4 /5

ಜೀರಿಗೆ ಪ್ರತಿಯೊಬ್ಬರ ಮನೆಯ ಅಡುಗೆ ಮನೆಯಲ್ಲಿಯೂ ಇರುತ್ತದೆ. ಇದು ಲಾಲಾರಸದ ಉತ್ಪಾದನೆಯನ್ನು ಉತ್ತೇಜಿಸುವ ಗುಣ ಹೊಂದಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಜೀರಿಗೆಯನ್ನು ಪುಡಿ ಮಾಡಿ ನೀರಿನಲ್ಲಿ ಹಾಕಿ ಕುದಿಸಿ ಕುಡಿದರೆ ನಿಮ್ಮ ಅಸಿಡಿಟಿ ದೂರವಾಗುತ್ತದೆ.  

5 /5

ಲವಂಗ ಜೀರ್ಣಕ್ರಿಯೆಗೆ ಉತ್ತಮ ಮನೆಮದ್ದು. ಇದು ಆಮ್ಲೀಯತೆಯ ಸಂವೇದನೆಗಳನ್ನು ನಿವಾರಿಸುತ್ತದೆ. ಜೊತೆಗೆ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ನಿಯಮಿತವಾಗಿ ಲವಂಗ ಸೇವನೆಯಿಂದ ಹಲವಾರು ಆರೋಗ್ಯರಕ ಪ್ರಯೋಜನಗಳು ದೊರೆಯುತ್ತದೆ.