Best time to have breakfast : ದಿನದ ಆರಂಭದಲ್ಲಿ ಮಾಡುವ ಉಪಹಾರಕ್ಕೆ ಬಹಳ ಮಹತ್ವವಿದೆ. ಬೆಳಗಿನ ಉಪಾಹಾರ ದೇಹಕ್ಕೆ ಶಕ್ತಿ ನೀಡುತ್ತದೆ. ದಿನವಿಡೀ ಕೆಲಸ ಮಾಡಲು ಉಪಹಾರ ಅವಶ್ಯಕವಾಗಿದೆ. ಇದು ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲದೆ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಬೆಳಗಿನ ಉಪಾಹಾರ ದೇಹಕ್ಕೆ ಗ್ಲೂಕೋಸ್ ಅನ್ನು ಪೂರೈಸುತ್ತದೆ. ಇದು ದೇಹದ ವಿವಿಧ ಭಾಗಗಳಿಗೆ ಶಕ್ತಿಯನ್ನು ನೀಡುತ್ತದೆ. ಈ ಕಾರಣದಿಂದಾಗಿ, ಮೆದುಳಿನ ಸರಿಯಾದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ಆದರೆ ಬೆಳಗಿನ ಉಪಹಾರದ ಸಮಯವನ್ನು ಜನ ನಿರ್ಲಕ್ಷಿಸಿ ಬಿಡುತ್ತಾರೆ. ಬೆಳಿಗ್ಗೆ ಉಪಹಾರ ಸೇವಿಸುವುದು ಮಾತ್ರವಲ್ಲ, ಉಪಹಾರದ ಸಮಯ ಕೂಡಾ ಬಹಳ ಮುಖ್ಯವಾಗಿರುತ್ತದೆ. 


COMMERCIAL BREAK
SCROLL TO CONTINUE READING

ಸರಿಯಾದ ಸಮಯಕ್ಕೆ ಉಪಹಾರ ಸೇವಿಸದಿದ್ದರೆ ಉಂಟಾಗುವ ಪರಿಣಾಮ : 
ಬೆಳಿಗ್ಗೆ ಸರಿಯಾದ ಸಮಯಕ್ಕೆ ಉಪಹಾರ ಸೇವಿಸದಿರುವುದು ದೇಹಕ್ಕೆ ಹಲವಾರು ಸಮಸ್ಯೆಗಳನ್ನು ಉಂಟುಮಾಡಬಹುದು. ದೇಹಕ್ಕೆ ಸರಿಯಾದ ಪ್ರಮಾಣದ ಶಕ್ತಿಯನ್ನು ಒದಗಿಸದಿದ್ದರೆ, ದಿನದ ಮೊದಲ ಭಾಗದಲ್ಲಿ ಆಯಾಸ ಮತ್ತು ಶಕ್ತಿಯ ಕೊರತೆ ದೇಹದಲ್ಲಿ ಕಾಣಿಸಿಕೊಳ್ಳಬಹುದು. ಇದರ ಹೊರತಾಗಿ, ಸರಿಯಾದ ಸಮಯದಲ್ಲಿ ಬೆಳಗಿನ ಉಪಹಾರವನ್ನು ಸೇವಿಸದಿರುವುದು ಹಸಿವನ್ನು ಹೆಚ್ಚಿಸುತ್ತದೆ. ಇದು ದೇಹದ ತೂಕವನ್ನು ಹೆಚ್ಚಿಸುತ್ತದೆ.


ಇದನ್ನೂ ಓದಿ : Health Care Tips: ಮಧುಮೇಹಿಗಳಿಗೆ ಇಲ್ಲಿವೆ ಕೆಲ ಸೂಪರ್ ಡ್ರಿಂಕ್ ಗಳು!


ಬೆಳಗಿನ ಉಪಹಾರಕ್ಕೆ ಸರಿಯಾದ ಸಮಯ ಯಾವುದು? :
ಬೆಳಗಿನ ಉಪಹಾರ ಮಾಡಲು ಬೆಳಿಗ್ಗೆ 7 ರಿಂದ 8 ರವರೆಗಿನ ಸಮಯ ಬೆಸ್ಟ್ ಆಗಿರುತ್ತದೆ. ಆದರೆ, ಯಾವುದೇ ಸಂದರ್ಭದಲ್ಲಿ 10 ಗಂಟೆವರೆಗೆ  ಉಪಹಾರವನ್ನು ವಿಳಂಬ ಮಾಡಬಾರದು. ಮತ್ತೊಂದೆಡೆ, ಬೆಳಿಗ್ಗೆ ಎದ್ದು ಒಂದು ಗಂಟೆಯೊಳಗೆ ಬೆಳಗಿನ ಉಪಾಹಾರ ಮುಗಿಸಿಕೊಳ್ಳಬೇಕು. ಏಕೆಂದರೆ, ರಾತ್ರಿ ಉಪವಾಸದ ನಂತರ ನಮ್ಮ ದೇಹಕ್ಕೆ ಎನರ್ಜಿ ಬೇಕಾಗುತ್ತದೆ. ಸಾಮಾನ್ಯವಾಗಿ ಬೆಳಿಗ್ಗೆ ಗ್ಲೂಕೋಸ್ ಮಟ್ಟವು ಕಡಿಮೆ ಇರುತ್ತದೆ. ಬೆಳಗಿನ ಉಪಹಾರವು ನಮ್ಮ ಚಯಾಪಚಯವನ್ನು ಪ್ರಾರಂಭಿಸಲು ಸಹಾಯ ಮಾಡುತ್ತದೆ. 


ಆರೋಗ್ಯಕರ ಉಪಹಾರ ಆಯ್ಕೆ : 
ಬೆಳಗಿನ ಉಪಹಾರದಲ್ಲಿ ಹಣ್ಣುಗಳು, ತರಕಾರಿಗಳು ಮತ್ತು ಸಿರಿಧಾನ್ಯಗಳನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯ ಫೈಬರ್ ಸಿಗುತ್ತದೆ. ಇದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಬೆಳಿಗ್ಗೆ ಉಪಹಾರದಲ್ಲಿ ಓಟ್ ಮೀಲ್, ಹಣ್ಣುಗಳು ಮತ್ತು ತರಕಾರಿಗಳ ಸ್ಮೂಥಿ, ಮೊಟ್ಟೆ ಮತ್ತು ಟೋಸ್ಟ್ ಇತ್ಯಾದಿಗಳನ್ನು ಸೇರಿಸಿಕೊಳ್ಳಬಹುದು. ಬೆಳಗಿನ ಉಪಾಹಾರ ಸೇವಿಸುವುದರಿಂದ ಹಸಿವು ಕಡಿಮೆಯಾಗುತ್ತದೆ. ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ ಮತ್ತು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ಕಾರಣದಿಂದ ಬೆಳಿಗ್ಗೆ ಉಪಹಾರವನ್ನು ಮಾಡುವುದು ಬಹಳ ಮುಖ್ಯ ಮತ್ತು ಅದನ್ನು ಮಾಡದಿರುವುದು ದೇಹಕ್ಕೆ ಹಾನಿಕಾರಕವಾಗಿದೆ.


ಇದನ್ನೂ ಓದಿ : ಈ 5 ಆಹಾರಗಳು ಪುರುಷರ ದೇಹಕ್ಕೆ ಹಾರ್ಸ್‌ ಪವರ್‌ ನೀಡುತ್ತವೆ..! ಯಾವುವು ಗೊತ್ತೇ..


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.