Obesity- ವಿಶ್ವದ ದೊಡ್ಡ ವರ್ಗ ಇಂದು ಬೊಜ್ಜಿನ ಸಮಸ್ಯೆಯನ್ನು ಎದುರಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಜೀವನಶೈಲಿಯಲ್ಲಿನ ಬದಲಾವಣೆ, ಆಹಾರ ಪದ್ಧತಿ, ಯೋಗ-ವ್ಯಾಯಾಮ ಮಾಡದಿರುವುದು ಇತ್ಯಾದಿ. ಸ್ಥೂಲಕಾಯತೆಯಿಂದಾಗಿ, ವ್ಯಕ್ತಿಯು ಆಕರ್ಷಣೆಯನ್ನು ಕಳೆದುಕೊಳ್ಳುತ್ತಾನೆ. ಅಷ್ಟು ಮಾತ್ರವಲ್ಲ ಇದರಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕೂಡ ತಲೆದೂರುತ್ತವೆ. ಬೊಜ್ಜು ಹೋಗಲಾಡಿಸಲು ಜನರು ಅನೇಕ ರೀತಿಯ ಔಷಧಗಳನ್ನು ತೆಗೆದುಕೊಳ್ಳುತ್ತಾರೆ, ಹಾಗೆಯೇ ಕೊನೆಯ ಅಸ್ತ್ರವಾಗಿ ಶಸ್ತ್ರಚಿಕಿತ್ಸೆಯನ್ನು ಆಶ್ರಯಿಸುತ್ತಾರೆ. ಏನೇ ಮಾಡಿದರೂ ನಿರೀಕ್ಷೆಗೆ ತಕ್ಕಂತೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಕೊರಗುವವರನ್ನು ನಮ್ಮ ಸುತ್ತಲೂ ಕಾಣಬಹದು. ಏತನ್ಮಧ್ಯೆ, ಭಾರತೀಯ ಆಹಾರದಲ್ಲಿ ಬಳಸುವ ಸಾಸಿವೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಎಂದು ಸಂಶೋಧನೆಯೊಂದು ಕಂಡುಹಿಡಿದಿದೆ.  


COMMERCIAL BREAK
SCROLL TO CONTINUE READING

ಹೌದು, ಸ್ಥೂಲಕಾಯತೆಯ (Obesity) ಗಂಭೀರ ಸಮಸ್ಯೆಯನ್ನು ಹೋಗಲಾಡಿಸಲು ಭಾರತೀಯ ಆಹಾರದಲ್ಲಿ ಬಳಸಲಾಗುವ ವಿಶೇಷ ಮಸಾಲೆ ಸಹಕಾರಿ ಎಂಬುದನ್ನು ಸಂಶೋಧನೆಯೊಂದು ಕಂಡು ಹಿಡಿದಿದೆ.  ಅದರ ಸೇವನೆಯು ಸ್ಥೂಲಕಾಯದ ಗಂಭೀರ ಸಮಸ್ಯೆಯನ್ನು ತೊಡೆದುಹಾಕಲು ಸಹಾಯಕವಾಗಿದೆಯೆಂದು ಸಾಬೀತುಪಡಿಸುತ್ತದೆ. ಅದು ನಮ್ಮ ಅಡುಗೆ ಮನೆಯಲ್ಲಿ ಒಗ್ಗರಣೆಗಾಗಿ ಬಳಸುವ 'ಸಾಸಿವೆ'. 


ಮಾನವನ ಆಹಾರದಿಂದ ಉಂಟಾಗುವ ಸ್ಥೂಲಕಾಯತೆಯ ಕುರಿತಾದ ಸಂಶೋಧನೆಯಲ್ಲಿ, ಗೋಧಿ ಮತ್ತು ಸಾಸಿವೆ ತೂಕವನ್ನು ಕಡಿಮೆ (Weight Loss) ಮಾಡಲು ಪ್ರಯೋಜನಕಾರಿ ಎಂದು ತಿಳಿದುಬಂದಿದೆ. ಈ ಸಂಶೋಧನೆಯನ್ನು 30 ರಿಂದ 70 ವರ್ಷ ವಯಸ್ಸಿನ ಪುರುಷರು ಮತ್ತು ಮಹಿಳೆಯರಲ್ಲಿ ಮಾಡಲಾಗಿದೆ. ಈ ಸಮಯದಲ್ಲಿ, ಜನರ ಆಹಾರ ಪದ್ಧತಿಯನ್ನು ಬದಲಾಯಿಸಲಾಯಿತು. ಇದರ ಅಡಿಯಲ್ಲಿ, ಚಾಲ್ಮರ್ಸ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ಸಂಶೋಧಕರು ಸಾಸಿವೆಯಿಂದ ತಯಾರಿಸಿದ ಆಹಾರಗಳು ತೂಕ ನಷ್ಟಕ್ಕೆ ಸಹಾಯಕವಾಗಿವೆ ಎಂದು ಹೇಳಿದ್ದಾರೆ. ಇದರ ಸೇವನೆಯು ಹಸಿವು ಮತ್ತು ಚಯಾಪಚಯ ಕ್ರಿಯೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸಂಶೋಧನೆಯಲ್ಲಿ ಕಂಡು ಹಿಡಿಯಲಾಗಿದೆ.


ಇದನ್ನೂ ಓದಿ-  High Blood Pressure: ಅಧಿಕ ರಕ್ತದೊತ್ತಡದಲ್ಲಿ ಹಾಲು ಕುಡಿಯಬೇಕೇ? ಇದರ ಪರಿಣಾಮವೇನು?


ಈ ಸಂಶೋಧನೆಯಲ್ಲಿ ಭಾಗಿಯಾಗಿದ್ದ ಜನರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ಸಮಯದಲ್ಲಿ, ಒಂದು ಗುಂಪಿನ ಆಹಾರದಲ್ಲಿ ಗೋಧಿಯನ್ನು ಸೇರಿಸಲಾಯಿತು ಮತ್ತು ಇನ್ನೊಂದು ಗುಂಪಿನಲ್ಲಿ ಗೋಧಿಯೊಂದಿಗೆ ಸಾಸಿವೆಯಿಂದ ತಯಾರಿಸಿದ ಉತ್ಪನ್ನಗಳನ್ನು ಸಹ ಸೇರಿಸಲಾಗಿದೆ. ಈ ವೇಳೆ ಆಘಾತಕಾರಿ ಫಲಿತಾಂಶ ಹೊರಬಿದ್ದಿದೆ. ಗೋಧಿಯಿಂದ ತಯಾರಿಸಿದ ಆಹಾರವನ್ನು ಸೇವಿಸುವವರಲ್ಲಿಯೂ ಇದರ ಪರಿಣಾಮ ಕಂಡುಬಂದಿದೆ, ಆದರೆ ಕೇವಲ ಗೋಧಿಯಿಂದ ಮಾಡಿದ ಆಹಾರವನ್ನು ಸೇವಿಸುವವರಿಗೆ ಹೋಲಿಸಿದರೆ ಗೋಧಿ ಮತ್ತು ಸಾಸಿವೆಯೊಂದಿಗೆ ಮಾಡಿದ ಆಹಾರವನ್ನು ಸೇವಿಸಿದವರಲ್ಲಿ ಒಂದು ಕಿಲೋಗ್ರಾಂ ಹೆಚ್ಚು ತೂಕ ಕಡಿಮೆಯಾಗಿರುವುದು ಕಂಡುಬಂದಿದೆ.


ಸಾಸಿವೆಯ ಬಳಕೆಯು ತೂಕ ನಷ್ಟದ ಜೊತೆಗೆ ದೇಹದ ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ: 
ಗೋಧಿಯೊಂದಿಗೆ ಸಾಸಿವೆ (Mustard Seeds) ಹೊಂದಿರುವ ಆಹಾರವನ್ನು ಸೇವಿಸಿದವರಿಗೆ ಈ ಆಹಾರವು ದೇಹದ ಕೊಬ್ಬಿನ ಮಟ್ಟಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸಂಶೋಧನೆಯು ಕಂಡುಹಿಡಿದಿದೆ. ಅದೇ ಸಮಯದಲ್ಲಿ, ಸಾಸಿವೆ ಬಳಕೆಯು ತೂಕ ನಷ್ಟದ ಜೊತೆಗೆ ದೇಹದ ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸಾಸಿವೆ ಬಳಕೆಯು ತೂಕ ನಷ್ಟಕ್ಕೆ ಕಾರಣವಾಗುತ್ತದೆಯೇ. ಇದಕ್ಕೆ ಕಾರಣವಾದ ಕರುಳಿನಲ್ಲಿ ಯಾವುದೇ ನಿರ್ದಿಷ್ಟ ರೀತಿಯ ಬ್ಯಾಕ್ಟೀರಿಯಾವಿದೆಯೇ?  ಎಂದು ಈಗ ಸಂಶೋಧಕರು ತನಿಖೆ ನಡೆಸುತ್ತಿದ್ದಾರೆ.


ಇದನ್ನೂ ಓದಿ- Omicron Symptoms: ಚಿಕ್ಕ ಮಕ್ಕಳು ಮತ್ತು ಕಿಶೋರರಲ್ಲಿ ಭಿನ್ನವಾಗಿವೆ ಓಮಿಕ್ರಾನ್ ಲಕ್ಷಣಗಳು, ಈ ರೀತಿ ಗುರುತಿಸಿ


ಸಾಸಿವೆಯ ನಿಯಮಿತ ಸೇವನೆಯಿಂದ ದೇಹದಲ್ಲಿ ಫೈಬರ್ ಪ್ರಮಾಣವು ಉತ್ತಮವಾಗಿರುತ್ತದೆ:
ಸಾಸಿವೆಯ ಸೇವನೆಯಿಂದಾಗುವ ಪ್ರಯೋಜನಗಳ ಬಗ್ಗೆ ಈ ಹಿಂದೆಯೂ ಹಲವು ಸಂಶೋಧನೆಗಳು ನಡೆದಿವೆ. ಅವುಗಳಿಂದ ಪಡೆದ ಫಲಿತಾಂಶಗಳು ಸಹ ಬಹಳ ಸಕಾರಾತ್ಮಕವಾಗಿವೆ. ಸಂಶೋಧನೆಗಳ ಪ್ರಕಾರ, ಸಾಸಿವೆಯ ನಿಯಮಿತ ಸೇವನೆಯಿಂದ ದೇಹದಲ್ಲಿ ಫೈಬರ್ ಪ್ರಮಾಣವು ಉತ್ತಮವಾಗಿರುತ್ತದೆ. ಜನರಲ್ಲಿ ಉತ್ತಮ ಶಕ್ತಿ ಹರಡುತ್ತದೆ ಎಂದು ತಿಳಿದುಬಂದಿದೆ. ಇನ್ನೊಂದು ಮುಖ್ಯವಾದ ವಿಷಯವೆಂದರೆ ಇದು ದೇಹಕ್ಕೆ ಹಾನಿ ಮಾಡುವುದಿಲ್ಲ, ಆದರೆ ಇದು ಖಂಡಿತವಾಗಿಯೂ ಪ್ರಯೋಜನವನ್ನು ನೀಡುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.