National Refreshment Day 2021: ಮಳೆಗಾಲದಲ್ಲಿ ಟ್ರೈ ಮಾಡಿ ನೋಡಿ ದಾಲ್ಚಿನಿ- ಶುಂಠಿ ಮಿಶ್ರಿತ ಟೀ
National Refreshment Day: ಮಳೆಗಾಲ (Monsoon) ಆರಂಭವಾಗುತ್ತಿದ್ದಂತೆ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ಕಾಡಲಾರಂಭಿಸುತ್ತವೆ. ಮಳೆಗಾಲದ ಋತುವಿನಲ್ಲಿ ವಾತಾವರಣದಲ್ಲಿರುವ ತೇವಾಂಶದಿಂದಾಗಿ ಬ್ಯಾಕ್ಟೀರಿಯಾಗಳು ಹೆಚ್ಚು ಸಕ್ರೀಯಗೊಳ್ಳುತ್ತವೆ.
National Refreshment Day: ಮಳೆಗಾಲ (Monsoon) ಆರಂಭವಾಗುತ್ತಿದ್ದಂತೆ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ಕಾಡಲಾರಂಭಿಸುತ್ತವೆ. ಮಳೆಗಾಲದ ಋತುವಿನಲ್ಲಿ ವಾತಾವರಣದಲ್ಲಿರುವ ತೇವಾಂಶದಿಂದಾಗಿ ಬ್ಯಾಕ್ಟೀರಿಯಾಗಳು ಹೆಚ್ಚು ಸಕ್ರೀಯಗೊಳ್ಳುತ್ತವೆ. ಬಳಿಕ ಬ್ಯಾಕ್ಟೀರಿಯಾ ಸೋಂಕಿನಿಂದ ಉದ್ಭವಿಸುವ ರೋಗಗಳು ವೇಗವಾಗಿ ಹರಡಲು ಆರಂಭಿಸುತ್ತವೆ. ಹೀಗಿರುವಾಗ ಇಂತಹ ಕಾಯಿಲೆಗಳಿಂದ ಪಾರಾಗಲು ಸ್ವಚ್ಚತೆಯ ಬಗ್ಗೆ ಮಾತ್ರವಲ್ಲದೆ ಆಹಾರ ಮತ್ತು ಪಾನೀಯಗಳ ಕಡೆಯೂ ಕೂಡ ಗಮನಹರಿಸಬೇಕಾದ ಅವಶ್ಯಕತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಒಂದು ವೇಳೆ ನೀವೂ ಕೂಡ ಮಳೆಯಲ್ಲಿ ಎಂದಾದರು ನೆನೆದರೆ, ಅದರಿಂದಾಗುವ ಅನಾರೋಗ್ಯದಿಂದ (Health Problem) ತಪ್ಪಿಸಿ ಕೊಳ್ಳಲು ದಾಲ್ಚಿನಿ- ಶುಂಠಿ ಚಹಾ (Ginger-Cinnamon Tea) ಟ್ರೈ ಮಾಡಿ ನೋಡಿ. ಏಕೆಂದರೆ, ಈ ಚಹಾ ನಿಮ್ಮನ್ನು ಅನೇಕ ರೋಗಗಳಿಂದ ರಕ್ಷಣೆ ಒದಗಿಸಲಿದೆ. ಜೊತೆಗೆ ಕೆಮ್ಮು, ಶೀತದಂತಹ ಅಪಾಯಗಳನ್ನು ಕಡಿಮೆ ಮಾಡುತ್ತದೆ. ಹಾಗಾದರೆ ಬನ್ನಿ ರಾಷ್ಟೀಯ ಉಲ್ಲಾಸ ದಿನ 2021ರ ಪ್ರಯುಕ್ತ ಈ ಚಹಾ ಹೇಗೆ ತಯಾರಿಸುತ್ತಾರೆ ಎಂಬುದನ್ನು ತಿಳಿದುಕೊಂಡು ರೀಫ್ರೆಶ್ ಆಗೋಣ.
ಇದನ್ನೂ ಓದಿ- ಈ ವಸ್ತುಗಳಲ್ಲಿ ಹಾಲಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿದೆ ಕ್ಯಾಲ್ಸಿಯಂ
ದಾಲ್ಚಿನಿ - ಶುಂಠಿ ಚಹಾ ತಯಾರಿಸುವ ವಿಧಾನ
ಈ ಚಹಾ ತಯಾರಿಸಲು 1/2ಚ. ಒಣಗಿದ ಶುಂಠಿ ಪೌಡರ್ ಹಾಗೂ 1/2 ಚ. ದಾಲ್ಚಿನಿ ಪೌಡರ್ ಅನ್ನು 1 ಗ್ಲಾಸ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ನೀವು ಹಾಕಿರುವ ನೀರು ಅರ್ಧದಷ್ಟು ಉಳಿದಾಗ ಗ್ಯಾಸ್ ಸ್ಟೋವ್ ಆಫ್ ಮಾಡಿ ಚಹಾ ಸೇವಿಸಿ. ಒಂದು ವೇಳೆ ನಿಮ್ಮ ಬಳಿ ದಾಲ್ಚಿನಿ ಅಥವಾ ಶುಂಠಿ ಪೌಡರ್ ಇಲ್ಲ ಎಂದಾದಲ್ಲಿ, ಇವುಗಳ ಬದಲಾಗಿ ನೀವು ತಾಜಾ ಶುಂಠಿ ಮತ್ತು ದಾಲ್ಚಿನಿ ಚಕ್ಕೆಯನ್ನು ಕೂಡ ಬಳಸಬಹುದು. ಈ ಚಹಾ ಸೇವನೆಯಿಂದ ಶರೀರಕ್ಕೆ ತಕ್ಷಣದಿಂದಲೇ ಶಕ್ತಿ ಸಿಗುವುದರ ಜೊತೆಗೆ ಕಾಯಿಲೆಗಳ ಅಪಾಯ ಕೂಡ ಕಡಿಮೆಯಾಗುತ್ತದೆ.
ಇದನ್ನೂ ಓದಿ- Food To Increase Memory: ನೆನಪಿನ ಶಕ್ತಿಯನ್ನು ಹೆಚ್ಚಿಸಲು ಈ 5 ಆಹಾರವನ್ನು ತಪ್ಪದೇ ಸೇವಿಸಿ
ದಾಲ್ಚಿನಿ-ಶುಂಠಿ ಚಹಾ ಸೇವನೆಯ ಲಾಭಗಳು (Health Benefits Of Ginger-Cinnamon Tea)
>> ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆ ಹಾಗೂ ರಾತ್ರಿ ಊಟದ ಬಳಿಕ ಈ ಚಹಾ ಸೇವಿಸುವುದರಿಂದ ಜನರಿಗೆ ಶರೀರದ ಕ್ಯಾಲರಿ ಬರ್ನ್ ಮಾಡುವಲ್ಲಿ ಸಹಾಯವಾಗುತ್ತದೆ. ಇದಲ್ಲದೆ ಶರೀರದ ಮೆಟಾಬಾಲಿಸಂ ಕೂಡ ಉತ್ತಮವಾಗಿರುವುದರ ಜೊತೆಗೆ ತೂಕ ಇಳಿಕೆಗೂ ಕೂಡ ಇದು ಅನುಕೂಲಕರವಾಗಿದೆ.
>> ಮಾಸಿಕ ಪಾಳಿಯಲ್ಲಿ ಉಂಟಾಗುವ ನೋವಿನಿಂದಲೂ ಕೂಡ ಇದು ಪರಿಹಾರ ಒದಗಿಸುತ್ತದೆ. ಇದು ಬಾವು ಇಳಿಕೆ ಮಾಡಿ ಕ್ರ್ಯಾಂಪ್ಸ್ ನಿವಾರಣೆಗೂ ಕೂಡ ಸಹಕಾರಿಯಾಗಿದೆ.
>> ಇದು ಹೊಟ್ಟೆಯೊಳಗಿನ ಆಸಿಡ್ ಪ್ರಮಾಣವನ್ನು ನಿಯಂತ್ರಿಸಿ, ಅಜೀರ್ಣದ ಸಮಸ್ಯೆ ನಿವಾರಿಸುತ್ತದೆ.
>> ಈ ನೈಸರ್ಗಿಕ ಡ್ರಿಂಕ್ ಶರೀರದಲ್ಲಿ ಬ್ಲಡ್ ಶುಗರ್ ಪ್ರಮಾಣವನ್ನು ನಿಯಂತ್ರಿಸುತ್ತದೆ ಮತ್ತು ಮಧುಮೇಹದ ಲಕ್ಷಣಗಳನ್ನು ನಿವಾರಿಸಲು ಸಹಕಾರಿಯಾಗಿದೆ.
>> ಈ ಹರ್ಬಲ್ ಟೀ ಶರೀರವನ್ನು ಆಂತರಿಕವಾಗಿ ಸ್ವಚ್ಛಗೊಳಿಸುತ್ತದೆ. ಅಂದರೆ, ಶರೀರವನ್ನು ಡಿಟಾಕ್ಸಿಕೆಟ್ ಮಾಡುತ್ತದೆ. ಶರೀರದಿಂದ ವಿಷಕಾರಿ ಪದಾರ್ಥಗಳು ಹೊರಹೋದಾಗ ನಮ್ಮ ಶರೀರ ಕೂಡ ಆರೋಗ್ಯವಂತವಾಗಿರುತ್ತದೆ.
ಇದನ್ನೂ ಓದಿ-Tulsi Face Pack : ಕೆಲವೇ ದಿನಗಳಲ್ಲಿ ಪಡೆಯಬಹುದು ಹೊಳೆಯುವ ತ್ವಚೆ , ಈ ರೀತಿ ಬಳಸಿ ತುಳಸಿ ಪ್ಯಾಕ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ