Food To Increase Memory: ನೆನಪಿನ ಶಕ್ತಿಯನ್ನು ಹೆಚ್ಚಿಸಲು ಈ 5 ಆಹಾರವನ್ನು ತಪ್ಪದೇ ಸೇವಿಸಿ

Food To Increase Memory: ಸೊಪ್ಪು, ತರಕಾರಿಗಳು ಮೆದುಳನ್ನು ರಕ್ಷಿಸುತ್ತವೆ. ಇದಲ್ಲದೆ ಬೀಜಗಳು ಮತ್ತು ದ್ವಿದಳ ಧಾನ್ಯಗಳು ಸಹ ಉತ್ತಮ ಮೆದುಳಿನ ಆಹಾರಗಳಾಗಿವೆ.

Written by - Yashaswini V | Last Updated : Jul 22, 2021, 07:25 AM IST
  • ಮೆದುಳಿಗೆ ಸಾಕಷ್ಟು ಶಕ್ತಿಯ ಅಗತ್ಯವಿರುತ್ತದೆ
  • ನಿಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸಲು, ನೀವು ಸಾಕಷ್ಟು ಹಣ್ಣುಗಳು, ಸೊಪ್ಪು ಮತ್ತು ತರಕಾರಿಗಳನ್ನು ತಿನ್ನುವುದರ ಬಗ್ಗೆ ಗಮನಹರಿಸಬೇಕು
  • ಮೆದುಳಿಗೆ ಸೂಪರ್‌ಫುಡ್ ಎಂದು ಪರಿಗಣಿಸಲಾಗಿರುವ ವಾಲ್ನಟ್ಸ್ ಉತ್ತಮ ಪೋಷಕಾಂಶಗಳಿಂದ ಕೂಡಿದ ಆಹಾರ
Food To Increase Memory: ನೆನಪಿನ ಶಕ್ತಿಯನ್ನು ಹೆಚ್ಚಿಸಲು ಈ 5 ಆಹಾರವನ್ನು ತಪ್ಪದೇ ಸೇವಿಸಿ title=
Food To Increase Memory

ಬೆಂಗಳೂರು: ನಿಮ್ಮ ಸ್ಮರಣಾ ಶಕ್ತಿ ಉತ್ತಮವಾಗಿದ್ದರೆ ನಿಮ್ಮ ಮನಸ್ಸು ಕೂಡ ತೀಕ್ಷ್ಣವಾಗಿ ಚಲಿಸುತ್ತದೆ. ಈ ಲೇಖನದಲ್ಲಿ ನಾವು ಅಂತಹ ಕೆಲವು ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಅದರ ಮೂಲಕ ನೀವು ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಬಹುದು. ಆಹಾರ ತಜ್ಞರಾದ ರಂಜನಾ ಸಿಂಗ್ ಅವರ ಪ್ರಕಾರ, ಉತ್ತಮ ಆಹಾರ ಸೇವಿಸದಿದ್ದರೆ ಸ್ಮರಣ ಶಕ್ತಿ ದುರ್ಬಲಗೊಳ್ಳುತ್ತದೆ.

ಆಹಾರ ತಜ್ಞರಾದ ಡಾ.ರಂಜನಾ ಸಿಂಗ್ ಅವರ ಪ್ರಕಾರ, ಮೆದುಳಿಗೆ ಸಾಕಷ್ಟು ಶಕ್ತಿಯ ಅಗತ್ಯವಿರುತ್ತದೆ, ಏಕೆಂದರೆ ಇದು ದೇಹದ ಕ್ಯಾಲೊರಿಗಳನ್ನು ಬಳಸುತ್ತದೆ. ನಿಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸಲು ಉತ್ತಮ ಆಹಾರ ಸೇವನೆ ಅತ್ಯಗತ್ಯ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಆಹಾರದಲ್ಲಿ ಸಾಕಷ್ಟು ಹಣ್ಣುಗಳು, ಸೊಪ್ಪು ಮತ್ತು ತರಕಾರಿಗಳನ್ನು ಸೇವಿಸಲು ಗಮನ ಹರಿಸಬೇಕು ಮತ್ತು ಸಾಲ್ಮನ್ ನಂತಹ ಒಮೆಗಾ -3 ಕೊಬ್ಬಿನಾಮ್ಲಗಳಿಂದ ಕೂಡಿದ ಆಹಾರವನ್ನು ಸೇವಿಸಬೇಕು. ವಿಶೇಷವಾಗಿ ಕಡು ಹಸಿರು ಎಲೆಗಳ ತರಕಾರಿಗಳು ಮೆದುಳನ್ನು ರಕ್ಷಿಸುತ್ತವೆ. ಇದಲ್ಲದೆ ಬೀಜಗಳು ಮತ್ತು ದ್ವಿದಳ ಧಾನ್ಯಗಳು ಸಹ ಉತ್ತಮ ಮೆದುಳಿನ ಆಹಾರಗಳಾಗಿವೆ.

ಮೆಮೊರಿ ಪವರ್ ಹೆಚ್ಚಿಸಲು ಈ 5 ಸೂಪರ್ ಫುಡ್ ಸೇವಿಸಿ:
ವಾಲ್ನಟ್ (Walnut) :

ಮೆದುಳಿಗೆ ಸೂಪರ್‌ಫುಡ್ ಎಂದು ಪರಿಗಣಿಸಲಾಗಿರುವ ವಾಲ್ನಟ್ಸ್ ಉತ್ತಮ ಪೋಷಕಾಂಶಗಳಿಂದ ಕೂಡಿದ ಆಹಾರವಾಗಿದ್ದು ಅದು ನಿಮ್ಮ ಮೆದುಳಿಗೆ ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ವಾಲ್ನಟ್ಸ್ (Walnut) ಆಲ್ಫಾ-ಲಿನೋಲೆನಿಕ್ ಆಮ್ಲ (ಸಸ್ಯ ಆಧಾರಿತ ಒಮೆಗಾ -3 ಕೊಬ್ಬಿನಾಮ್ಲ), ಪಾಲಿಫಿನೋಲಿಕ್ ಸಂಯುಕ್ತಗಳಲ್ಲಿ ಸಮೃದ್ಧವಾಗಿದೆ. ಒಮೆಗಾ -3 (Omega-3) ಕೊಬ್ಬಿನಾಮ್ಲಗಳು ಮತ್ತು ಪಾಲಿಫಿನಾಲ್‌ಗಳನ್ನು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತದ ವಿರುದ್ಧ ಹೋರಾಡುವಾಗ ಮೆದುಳಿನ ಪ್ರಮುಖ ಆಹಾರವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ- Lemon Benefits For Face: ಚರ್ಮದ ಹಲವು ಸಮಸ್ಯೆಗಳಿಗೆ ರಾಮಬಾಣ ನಿಂಬೆ

ಅಗಸೆಬೀಜ ಮತ್ತು ಕುಂಬಳಕಾಯಿ ಬೀಜಗಳು (Flaxseed and Pumpkin Seeds):
ಕುಂಬಳಕಾಯಿ ಮತ್ತು ಅಗಸೆಬೀಜಗಳು ಮೆದುಳಿನ ಆರೋಗ್ಯಕ್ಕೆ ಅದ್ಭುತವಾಗಿದೆ. ಈ ಬೀಜಗಳಲ್ಲಿರುವ ಸತು, ಮೆಗ್ನೀಸಿಯಮ್, ವಿಟಮಿನ್ ಬಿ ಯೋಚಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತದೆ, ಇದರಿಂದ ಮೆಮೊರಿ ಶಕ್ತಿ (Memory Power) ಹೆಚ್ಚಾಗುತ್ತದೆ.

ಬೀಜಗಳ ಬಳಕೆ (Consumption Of Seeds):
ಆಹಾರ ತಜ್ಞರಾದ ಡಾ.ರಂಜನಾ ಸಿಂಗ್ ಅವರ ಪ್ರಕಾರ, ಬೀಜಗಳ ಸೇವನೆಯು ಸ್ಮರಣೆಯನ್ನು (Memory) ಸುಧಾರಿಸುತ್ತದೆ, ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ಇದರೊಂದಿಗೆ ಜಾಗರೂಕತೆ ಮತ್ತು ಏಕಾಗ್ರತೆಯ ಶಕ್ತಿಯನ್ನು ಖಾತ್ರಿಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಬೀಜಗಳು ವಿಟಮಿನ್ ಕೆ, ಎ, ಸಿ, ಬಿ 6, ಇ, ಕ್ಯಾಲ್ಸಿಯಂ, ಮ್ಯಾಂಗನೀಸ್, ಕಬ್ಬಿಣ, ಸತು, ತಾಮ್ರವನ್ನು ಒಳಗೊಂಡಿರುವ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ, ಇದು ನಿಮ್ಮ ಮೆಮೊರಿ ಶಕ್ತಿಯನ್ನು ಸುಧಾರಿಸಲು ಕೆಲಸ ಮಾಡುತ್ತದೆ.

ಗೋಡಂಬಿ (Cashew) :
ಗೋಡಂಬಿ (Cashew) ಉತ್ತಮ ಮೆಮೊರಿ ಬೂಸ್ಟರ್ ಆಗಿದೆ. ಇದರಲ್ಲಿರುವ ಪಾಲಿ-ಸ್ಯಾಚುರೇಟೆಡ್ ಮತ್ತು ಮೊನೊ-ಸ್ಯಾಚುರೇಟೆಡ್ ಕೊಬ್ಬುಗಳು ಮೆದುಳಿನ ಕೋಶಗಳ ಉತ್ಪಾದನೆಗೆ ಬಹಳ ಮುಖ್ಯವಾಗುತ್ತವೆ ಮತ್ತು ಇದರಿಂದಾಗಿ ಅದರ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ- Fish Oil Benefits: ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಮೀನಿನ ಎಣ್ಣೆ

ಬಾದಾಮಿ (Almond) :
ಮೆದುಳಿನಲ್ಲಿ ಅಸೆಟೈಲ್ಕೋಲಿನ್ ಮಟ್ಟವನ್ನು ಹೆಚ್ಚಿಸಲು ಬಾದಾಮಿ (Almond) ಸಹಾಯ ಮಾಡುತ್ತದೆ. ವಿಟಮಿನ್ ಬಿ 6, ಇ, ಸತು ಮತ್ತು ಅದರಲ್ಲಿ ಕಂಡುಬರುವ ಪ್ರೋಟೀನ್‌ಗಳಿಂದಾಗಿ ಹೆಚ್ಚಿನ ನರಪ್ರೇಕ್ಷಕ ರಾಸಾಯನಿಕ ಉತ್ಪಾದನೆಯಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News