ಯೂರಿಕ್ ಆಸಿಡ್ ಸಮಸ್ಯೆಗೆ ನೈಸರ್ಗಿಕ ಪರಿಹಾರ ಪಡೆಯಲು ನಿಮ್ಮ ಡಯಟ್ನಲ್ಲಿರಲಿ ಈ ಆಹಾರ
Remedies for High uric acid: ಬದಲಾದ ಜೀವನ ಶೈಲಿಯಿಂದಾಗಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಸಹ ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ ಯೂರಿಕ್ ಆಸಿಡ್ ಸಮಸ್ಯೆಯೂ ಒಂದು. ಇದು ರಕ್ತದಲ್ಲಿ ಕಂಡುಬರುವ ತ್ಯಾಜ್ಯ ಉತ್ಪನ್ನವಾಗಿದೆ. ಯೂರಿಕ್ ಆಸಿಡ್ ಸಮಸ್ಯೆಗಳಿಗೆ ಕೆಲವು ಮನೆಮದ್ದುಗಳು ಸಹ ಸಹಕಾರಿ ಆಗಿವೆ.
ಯೂರಿಕ್ ಆಸಿಡ್ ಸಮಸ್ಯೆಗಳಿಗೆ ಮನೆಮದ್ದು: ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಯೂರಿಕ್ ಆಸಿಡ್ ಕೂಡ ಒಂದಾಗಿದೆ. ಯೂರಿಕ್ ಆಸಿಡ್ ರಕ್ತದಲ್ಲಿ ಕಂಡುಬರುವ ತ್ಯಾಜ್ಯ ಉತ್ಪನ್ನವಾಗಿದೆ. ದೇಹವು ಪ್ಯೂರಿನ್ ಎಂದು ಕರೆಯಲ್ಪಡುವ ರಾಸಾಯನಿಕಗಳನ್ನು ವಿಭಜಿಸಿದಾಗ ಅದು ರಚಿಸಲ್ಪಡುತ್ತದೆ. ಯೂರಿಕ್ ಆಸಿಡ್ ಹೆಚ್ಚಳವಾಗುವುದರಿಂದ ದೇಹದಲ್ಲಿ ಹಲವು ರೀತಿಯ ತೊಂದರೆಗಳು ಕಾಣಿಸಿಕೊಳ್ಳಬಹುದು.
ಯೂರಿಕ್ ಆಸಿಡ್ ಹೆಚ್ಚಾದಾಗ ಕೀಲು ನೋವು, ಕಾಲುಗಳಲ್ಲಿ ಊತ ಸೇರಿದಂತೆ ಇನ್ನಿತರ ಸಮಸ್ಯೆಗಳು ಉಂಟಾಗುತ್ತವೆ. ಇದಕ್ಕಾಗಿ ಚಿಂತಿಸಬೇಕಿಲ್ಲ, ನಿಮ್ಮ ನಿತ್ಯದ ಆಹಾರದಲ್ಲಿ ಕೆಲವು ಆಹಾರಗಳನ್ನು ಸೇರಿಸುವುದರಿಂದ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳು:
ಸಾಮಾನ್ಯವಾಗಿ ಯಾವುದೇ ಆರೋಗ್ಯ ಸಮಸ್ಯೆಗಳು ಕಂಡು ಬಂದಾಗ ನಾವು ಡೈರಿ ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡುತ್ತೇವೆ. ಆದರೆ, ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳು ದೇಹಕ್ಕೆ ಅಗತ್ಯವಾಗಿದ್ದು ಇವು ನಿಮಗೆ ಯೂರಿಕ್ ಆಸಿಡ್ ಸಮಸ್ಯೆಯಿಂದಲೂ ಪರಿಹಾರ ನೀಡುತ್ತವೆ.
ಇದನ್ನೂ ಓದಿ- ಕಲೆ ರಹಿತ ತ್ವಚೆಗಾಗಿ ನಿತ್ಯ ರಾತ್ರಿ ಮಲಗುವ ಮೊದಲು ಇದನ್ನು ಮುಖಕ್ಕೆ ಹಚ್ಚಿ
ಹಸಿರು ಚಹಾ:
ನಮ್ಮಲ್ಲಿ ಬಹುತೇಕ ಜನರು ತೂಕ ಇಳಿಸಲು ಗ್ರೀನ್ ಟೀ ಬಳಸುತ್ತಾರೆ, ಆದರೆ, ಈ ಗ್ರೀನ್ ಟೀ ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ನಿಯಮಿತವಾಗಿ ಹಸಿರು ಚಹಾ ಸೇವಿಸುವುದರಿಂದ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಅಜ್ವೈನ್:
ಒಮೆಗಾ -6 ಕೊಬ್ಬಿನಾಮ್ಲಗಳು ಮತ್ತು ಇತರ ಮೂತ್ರವರ್ಧಕ ತೈಲಗಳು ಈ ಮಸಾಲೆಯಲ್ಲಿ ಕಂಡುಬರುತ್ತವೆ, ಇದು ದೇಹದಿಂದ ಹೆಚ್ಚುವರಿ ದ್ರವವನ್ನು ಹೊರಹಾಕುತ್ತದೆ. ಅಜ್ವೈನ್ ಬಳಕೆಯೂ ಮೂತ್ರಪಿಂಡದಲ್ಲಿ ಇರುವ ಯೂರಿಕ್ ಆಮ್ಲವನ್ನು ಹೊರಹಾಕುತ್ತದೆ. ಇದಕ್ಕಾಗಿ ಒಂದು ಚಮಚ ಅಜ್ವೈನ್ ಅನ್ನು ಒಂದು ಗ್ಲಾಸ್ ನೀರಿನಲ್ಲಿ ರಾತ್ರಿ ನೆನೆಸಿಡಿ. ಬೆಳಿಗ್ಗೆ ನೀರನ್ನು ಫಿಲ್ಟರ್ ಮಾಡಿ ಕುಡಿಯಿರಿ. ಇದು ನಿಮಗೆ ತೂಕ ಇಳಿಸುವಲ್ಲಿಯೂ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.
ಇದನ್ನೂ ಓದಿ- ಡಯಾಬಿಟೀಸ್ ನಿಯಂತ್ರಣಕ್ಕೆ ತರಲು ಈ ಒಂದು ಸೊಪ್ಪು ತಿಂದರೆ ಸಾಕು .!
ಆಪಲ್ ಸೈಡರ್ ವಿನೆಗರ್:
ಹೈ ಯೂರಿಕ್ ಆಸಿಡ್ ಸಮಸ್ಯೆ ಇರುವವರಿಗೆ ಆಪಲ್ ಸೈಡರ್ ವಿನೆಗರ್ ಪ್ರಯೋಜನಕಾರಿ ಆಗಿದೆ. ಇದಕ್ಕಾಗಿ, ಬೆಳಿಗ್ಗೆ ಹೊತ್ತು ಒಂದು ಲೋಟ ನೀರಿನಲ್ಲಿ 3 ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಮಿಶ್ರಣ ಮಾಡಿ ಕುಡಿಯಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.