ನಿರ್ಜೀವವಾಗಿರುವ ಕೂದಲಿಗೆ ಜೀವ ತುಂಬುತ್ತದೆ ಈ ಪ್ರಕೃತಿ ದತ್ತ ಚಿಕಿತ್ಸೆ
Naturopathy for hair loss : . ಈ ಚಿಕಿತ್ಸೆಯ ವಿಧಾನಗಳಿಂದ ಸಮಸ್ಯೆಯನ್ನು ಪತ್ತೆಹಚ್ಚಿ ಗುಣಪಡಿಸಲಾಗುತ್ತದೆ. ಇದರಲ್ಲಿ ಒಂದೇ ರೀತಿಯ ಸಮಸ್ಯೆ ಇದ್ದರೂ, ಚಿಕಿತ್ಸೆಯ ವಿಧಾನವು ವಿಭಿನ್ನವಾಗಿರುತ್ತದೆ.
Naturopathy for hair loss : ಕೆಲಸದ ಒತ್ತಡ, ಮಾಲಿನ್ಯ ಮತ್ತು ಕೆಟ್ಟ ಆಹಾರ ಪದ್ಧತಿಗಳು ಆರೋಗ್ಯದ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ, ಕೂದಲಿನ ಮೇಲೆ ಕೂಡಾ ಪ್ರತಿಕೂಲ ಪರಿಣಾಮ ಬೀರುತ್ತವೆ. ನೀವು ಸೇವಿಸುವ ಆಹಾರದ ಪರಿಣಾಮ ಕೂದಲಿನ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಗೋಚರಿಸುತ್ತದೆ. ಕೂದಲಿನ ಆರೋಗ್ಯಕ್ಕಾಗಿ, ಕೆಲವರು ದುಬಾರಿ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ, ಆ ಉತ್ಪನ್ನಗಳು ಲಾಭದ ಬದಲಿಗೆ, ನಷ್ಟವನ್ನೇ ಹೆಚ್ಚಾಗಿಸುತ್ತದೆ. ಹೀಗೆ ಕೂದಲಿನ ಸಮಸ್ಯೆಗಳಿಂದ ಬಳಲುತ್ತಿದ್ದರೆ ಪ್ರಕೃತಿ ಚಿಕಿತ್ಸೆಯ ಮೊರೆ ಹೋಗಬಹುದು.
ಕೂದಲು ಉದುರುವಿಕೆಗೆ ಪ್ರಕೃತಿ ಚಿಕಿತ್ಸೆ :
ಇತರ ಔಷಧಿಗಳಂತೆ ಪ್ರಕೃತಿ ಚಿಕಿತ್ಸೆಯು ಯಾವುದೇ ಅಡ್ಡ-ಪರಿಣಾಮಗಳನ್ನು ಬೀರುವುದಿಲ್ಲ. ಬದಲಿಗೆ ರೋಗಲಕ್ಷಣಗಳನ್ನು ನಿವಾರಿಸುವುದರ ಮೇಲೆಯೇ ಕೇಂದ್ರೀಕೃತವಾಗಿರುತ್ತದೆ. ಈ ಚಿಕಿತ್ಸೆಯ ವಿಧಾನಗಳಿಂದ ಸಮಸ್ಯೆಯನ್ನು ಪತ್ತೆಹಚ್ಚಿ ಗುಣಪಡಿಸಲಾಗುತ್ತದೆ. ಇದರಲ್ಲಿ ಒಂದೇ ರೀತಿಯ ಸಮಸ್ಯೆ ಇದ್ದರೂ, ಚಿಕಿತ್ಸೆಯ ವಿಧಾನವು ವಿಭಿನ್ನವಾಗಿರುತ್ತದೆ.
ಇದನ್ನೂ ಓದಿ : ಈ ಮೂರು ಸಮಸ್ಯೆಗಳಿದ್ದಲ್ಲಿ ಸ್ನಾನ ಮಾಡಬಾರದು! ಇದರಿಂದ ಅಪಾಯವನ್ನು ತಪ್ಪಿಸಬಹುದು
ಪಾಲಕ್ ಸೇವಿಸಿ :
ಪಾಲಕ್‌ನಲ್ಲಿರುವ ಕಬ್ಬಿಣದ ಪ್ರಮಾಣವು ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಕೂದಲು ಉದುರಲು ಕಬ್ಬಿಣದ ಕೊರತೆಯೇ ದೊಡ್ಡ ಕಾರಣ. ಕಬ್ಬಿಣವು ಕೂದಲಿಗೆ ಆಮ್ಲಜನಕವನ್ನು ತಲುಪಿಸುವ ಜೊತೆಗೆ ಉತ್ತಮ ರಕ್ತ ಪರಿಚಲನೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕೂದಲಿಗೆ ರಕ್ತ ಪೂರೈಕೆ ಸರಿಯಾಗಿಲ್ಲದಿದ್ದರೆ, ಅದು ಕೂದಲಿನ ಬೇರುಗಳನ್ನು ಹಾನಿಗೊಳಿಸಿ ದುರ್ಬಲಗೊಳಿಸುತ್ತದೆ.
ಜಿಂಕ್ ತೆಗೆದುಕೊಳ್ಳಿ :
ಕೂದಲು ಆರೋಗ್ಯಕರವಾಗಿರಲು ಸತುವು ಬಹಳ ಮುಖ್ಯ. ಅದರ ಕೊರತೆಯು ಕೂದಲನ್ನು ಹಾನಿಗೊಳಿಸುವುದಲ್ಲದೆ ಅವುಗಳನ್ನು ದುರ್ಬಲಗೊಳಿಸುತ್ತದೆ. ದೇಹದಲ್ಲಿ ಜಿಂಕ್ ಕೊರತೆ ನೀಗಿಸಲು ಜಿಂಕ್ ಭರಿತ ಆಹಾರವನ್ನು ಸೇವಿಸಬೇಕು. ಇದಕ್ಕಾಗಿ ಗೋಡಂಬಿ, ಕಡಲೆ, ಮೊಸರು ಸೇವಿಸಬಹುದು. ಇದು ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ : Summer Drinks: ಬೇಸಿಗೆಯಲ್ಲಿ ಸಿಹಿಯಾದ ಲಸ್ಸಿ ಸೇವನೆಯಿಂದ ದೇಹಕ್ಕೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ?
ಬಯೋಟಿನ್ :
ಆರೋಗ್ಯಕರ ಕೂದಲಿಗೆ ಬಯೋಟಿನ್ ಕೂಡಾ ಬಹಳ ಮುಖ್ಯ. ಇದರ ಕೊರತೆಯು ಕೂದಲು ಒಡೆಯುವುದು ಮತ್ತು ಕೂದಲ ನಿಧಾನ ಬೆಳವಣಿಗೆಗೆ ಕಾರಣವಾಗುತ್ತದೆ. ಬಯೋಟಿನ್ ಕೊರತೆಯನ್ನು ಸಪ್ಲಿಮೆಂಟ್‌ಗಳಿಂದ ಅಥವಾ ನೈಸರ್ಗಿಕವಾಗಿ ನೀಗಿಸಬಹುದು. ಬಯೋಟಿನ್ ಗಾಗಿ ಧಾನ್ಯಗಳು, ಕಡಲೆಕಾಯಿಗಳು ಮತ್ತು ಮೊಟ್ಟೆ ಸೇವಿಸಬಹುದು.
ಮಸಾಜ್ :
ಮಸಾಜ್ ಅನ್ನು ಕೂದಲಿನ ಸಮಸ್ಯೆಗೆ ಅತ್ಯಂತ ಪ್ರಯೋಜನಕಾರಿ ವಿಧಾನಗಳಲ್ಲಿ ಒಂದು ಎನ್ನಲಾಗಿದೆ. ಈ ರೀತಿಯ ಮಸಾಜ್ ಗಾಗಿ ಕೂದಲಿಗೆ ತೆಂಗಿನ ಎಣ್ಣೆಯನ್ನು ಬಳಸಬಹುದು. ಇದು ಕೂದಲು ಒಡೆಯುವುದನ್ನು ತಡೆಯುತ್ತದೆ ಮತ್ತು ಕೂದಲಿಗೆ ತೇವಾಂಶ ನೀಡುತ್ತದೆ. ರಾತ್ರಿ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ ಬೆಳಿಗ್ಗೆ ಎದ್ದು ಕೂದಲನ್ನು ತೊಳೆಯಬಹುದು. ಇನ್ನು ಮಸಾಜ್ ಮಾಡಲು ಈರುಳ್ಳಿ ಎಣ್ಣೆಯನ್ನು ಕೂಡಾ ಬಳಸಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.