ಬೆಂಗಳೂರು : ದೇಹದ ಶುಚಿತ್ವ ಮತ್ತು ಆರೋಗ್ಯ ಕಾಪಾಡಿಕೊಳ್ಳಲು ನಿತ್ಯ ಸ್ನಾನ ಮಾಡುವಂತೆ ಹೇಳಲಾಗುತ್ತದೆ. ಸ್ನಾನ ಮಾಡುವುದರಿಂದ ಆಯಾಸ ದೂರವಾಗುತ್ತದೆ ಮತ್ತು ಒಳ್ಳೆಯ ನಿದ್ದೆ ಬರುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಕೆಲವೊಂದು ಸಮಯದಲ್ಲಿ ಸ್ನಾನ ಮಾಡಿದರೆ ನಮ್ಮ ಆರೋಗ್ಯ ಮತ್ತಷ್ಟು ಬಿಗಡಾಯಿಸಬಹುದು. ಹೀಗಾಗಿ ಮೂರು ಸಂದರ್ಭಗಳಲ್ಲಿ ಯಾವುದೇ ಕಾರಣಕ್ಕೂ ಸ್ನಾನ ಮಾಡಬಾರದು ಎಂದು ಹೇಳಲಾಗುತ್ತದೆ.
1. ಆಹಾರವನ್ನು ಸೇವಿಸಿದ ತಕ್ಷಣ :
ಊಟ ಮಾಡಿದ ತಕ್ಷಣ ಸ್ನಾನಕ್ಕೆ ಹೋಗಬಾರದು. “ಜೀರ್ಣಕ್ರಿಯೆಗೆ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ. ನೀವು ತಿನ್ನುವಾಗ, ದೇಹದ ಉಷ್ಣತೆಯು ಸ್ವಲ್ಪ ಹೆಚ್ಚಾಗುತ್ತದೆ. ಏಕೆಂದರೆ ಈ ಸಂದರ್ಭದಲ್ಲಿ ರಕ್ತವು ಜೀರ್ಣಕಾರಿ ಅಂಗಗಳತ್ತ ಹರಿಯುತ್ತದೆ. ''ಆದರೆ, ಊಟವಾದ ತಕ್ಷಣ ಸ್ನಾನ ಮಾಡಿದರೆ ರಕ್ತ ಸಂಚಾರದಲ್ಲಿ ಬದಲಾವಣೆಯಾಗುತ್ತದೆ. ಜೀರ್ಣಕ್ರಿಯೆಯ ಪ್ರಕ್ರಿಯೆಯ ಕಡೆಗೆ ಹರಿಯುವ ರಕ್ತವು ದೇಹದ ಇತರ ಭಾಗಗಳಿಗೆ ಹರಿಯಲು ಪ್ರಾರಂಭಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ವಿಳಂಬಗೊಳಿಸುತ್ತದೆ. ಅಲ್ಲದೆ, ಆಹಾರವನ್ನು ಜೀರ್ಣಿಸಿಕೊಳ್ಳಲು, ತಾಪಮಾನ ನಮ್ಮ ದೇಹದೊಳಗೆ ಉಳಿಯಬೇಕು. ಆದರೆ, ಸ್ನಾನವು ಆ ತಾಪಮಾನವನ್ನು ಹೊಟ್ಟೆಯಿಂದ ಬಾಹ್ಯ ಅಂಗಗಳ ಕಡೆಗೆ ತಳ್ಳುತ್ತದೆ.
ಇದನ್ನೂ ಓದಿ : Summer Drinks: ಬೇಸಿಗೆಯಲ್ಲಿ ಸಿಹಿಯಾದ ಲಸ್ಸಿ ಸೇವನೆಯಿಂದ ದೇಹಕ್ಕೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ?
2. ಜ್ವರ :
ಜ್ವರದಿಂದ ಬಳಲುತ್ತಿರುವಾಗ, ಸ್ನಾನ ಮಾಡಬಾರದು. ನಿಮಗೆ ಮೈ ಕೈ ನೋವಿದ್ದು, ಶೀತ ಜ್ವರವು ನಿಮ್ಮನ್ನು ಬಾಧಿಸುತ್ತಿದ್ದರೆ ಸ್ನಾನ ಮಾಡಬಾರದು. ಆಯುರ್ವೇದದ ಪ್ರಕಾರ, ಜ್ವರ ಬಂದಾಗ ದೇಹದ ತಾಪಮಾನದಲ್ಲಿ ಏರುಪೇರಾಗುತ್ತದೆ. ಈ ಸಮಯದಲ್ಲಿ ಸ್ನಾನ ಮಾಡುವುದರಿಂದ ದೇಹ ತಾಪಮಾನದ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ.
3. ಅಜೀರ್ಣ :
ಅಜೀರ್ಣ ಸಮಸ್ಯೆಯಿದ್ದಲ್ಲಿ ಕೂಡಾ ಸ್ನಾನ ಮಾಡಬಾರದು. ಅಜೀರ್ಣವಾದಾಗ ಮಲಬದ್ಧತೆಯ ಸಮಸ್ಯೆ ಎದುರಾಗುತ್ತದೆ. ಮಲಬದ್ಧತೆಯ ಇರುವಾಗ ಸ್ನಾನ ಮಾಡುವುದು ಒಳ್ಳೆಯದಲ್ಲ. ಸ್ನಾನದ ನಂತರ, ನಿಮ್ಮ ದೇಹದ ಉಷ್ಣತೆಯು ಕಡಿಮೆಯಾಗುತ್ತದೆ. ದೇಹವು ತಣ್ಣಗಾಗಲು ಪ್ರಾರಂಭಿಸಿದಾಗ, ಜೀರ್ಣಕ್ರಿಯೆಗೆ ಬೇಕಾಗಿರುವ ತಾಪಮಾನವನ್ನು ಕಾಪಾಡಿಕೊಳ್ಳಲು ಹೆಚ್ಚು ಶ್ರಮಿಸಬೇಕಾಗುತ್ತದೆ. ಇದರಿಂದ ಊಟದ ನಂತರ ಸ್ನಾನ ಮಾಡುವುದು ಹೊಟ್ಟೆ ಸೆಳೆತ ಮತ್ತು ಅಜೀರ್ಣಕ್ಕೆ ಕಾರಣವಾಗಬಹುದು.
ಇದನ್ನೂ ಓದಿ : Coronavirus updates: ಪೋಷಕರೇ ಎಚ್ಚರ.. ಮಕ್ಕಳೇ ಈ ಬಾರಿ ಕೊರೊನಾ ಟಾರ್ಗೆಟ್? ಆರೋಗ್ಯ ಇಲಾಖೆಯಿಂದ ಮಹತ್ವದ ಅಪ್ಡೇಟ್!!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.