ಹಾಲಿನ ಜೊತೆ ತಪ್ಪಿಯೂ ಈ ಏಳು ತಪ್ಪು ಮಾಡಬೇಡಿ..!
ಯಾವುದೇ ಹುಳಿಯುಕ್ತ ಆಹಾರದ ಜೊತೆ ಹಾಲು ಕುಡಿಯುವುದು ಸಂಪೂರ್ಣ ವರ್ಜ್ಯ. ಸಲಾಡ್ ತಿಂದ ಕೂಡಲೇ ಹಾಲು ಕುಡಿಯುವುದು ಸರಿಯಲ್ಲ. ಹೀಗೆ ಮಾಡಿದರೆ ಹಾಲು ವಿಷಾಹಾರವಾಗುವ ಸಾಧ್ಯತೆಯೂ ಇದೆ ಎಂದು ತಜ್ಞರು ಹೇಳುತ್ತಾರೆ.
ನವದೆಹಲಿ : ಹಾಲು (Milk) ಒಂದು ಪರಿಪೂರ್ಣ ಆಹಾರ ಎನ್ನುವುದರಲ್ಲಿ ಎರಡು ಮಾತಿಲ್ಲ. ಎಲ್ಲಾ ವಯೋಮಾನದವರಿಗೂ ಹಾಲು ಲಾಭದಾಯಕ ಪೇಯ. ಹಾಲಿನಲ್ಲಿ ಕ್ಯಾಲ್ಸಿಯಂ, ಅಯೋಡಿನ್, ಪೊಟ್ಯಾಶಿಯಂ, ಪಾಸ್ಪರಸ್, ವಿಟಮಿನ್ ಡಿ ಇತ್ಯಾದಿ ಸಮೃದ್ಧವಾಗಿರುತ್ತದೆ. ಹಾಲು ಆರೋಗ್ಯಕ್ಕೆಷ್ಟು ಲಾಭದಾಯಕ (Benefits of Milk) ಎಂದು ಬೇರೆ ಹೇಳಬೇಕಿಲ್ಲ. ಆದರೆ, ಹಾಲಿನ ಜೊತೆ ಕೆಲವು ಆಹಾರಗಳನ್ನು ಸೇವಿಸಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ. ಅವು ಯಾವುದು ಎಂಬುದನ್ನು ನೋಡೋಣ
1. ಮೊಸರು
ಮೊಸರು (Curd) ಮತ್ತು ಹಾಲಿನ ಕಾಂಬಿನೇಷನ್ ಯಾವತ್ತಿಗೂ ಒಳ್ಳೆಯದಲ್ಲ. ಹಾಲು ಮತ್ತು ಮೊಸರು ಒಟ್ಟಿಗೆ ಸೇವಿಸುವುದು ತರವಲ್ಲ. ಕೆಲವರಿಗೆ ಹಾಲು, ಮೊಸರು ಸೇರಿಸಿ ಶರಬತ್ತು ಮಾಡಿಕುಡಿಯುವ ಅಭ್ಯಾಸವಿದೆ. ಇದು ದೇಹಕ್ಕೆ ಒಳ್ಳೆಯದಲ್ಲ.
ಇದನ್ನೂ ಓದಿ : Sleeping Tips: ರಾತ್ರಿ ಮಲಗುವಾಗ ನೀವೂ ಈ ರೀತಿಯ ಒಳಉಡುಪು ಧರಿಸುತ್ತಿದ್ದರೆ ಎಚ್ಚರ!
2. ಹುಳಿ ಆಹಾರದ ಜೊತೆ ಹಾಲು ಬೇಡ
ಯಾವುದೇ ಹುಳಿಯುಕ್ತ ಆಹಾರದ ಜೊತೆ ಹಾಲು ಕುಡಿಯುವುದು ಸಂಪೂರ್ಣ ವರ್ಜ್ಯ. ಸಲಾಡ್ ತಿಂದ ಕೂಡಲೇ ಹಾಲು (Milk)ಕುಡಿಯುವುದು ಸರಿಯಲ್ಲ. ಹೀಗೆ ಮಾಡಿದರೆ ಹಾಲು ವಿಷಾಹಾರವಾಗುವ ಸಾಧ್ಯತೆಯೂ ಇದೆ ಎಂದು ತಜ್ಞರು ಹೇಳುತ್ತಾರೆ. ಹುಳಿಯುಕ್ತ ಆಹಾರ ತಿಂದು 2 ಅಥವಾ ಮೂರು ಗಂಟೆಯ ಬಳಿಕ ಹಾಲು ಕುಡಿಯಬಹುದಂತೆ.
3. ಮೀನು:
ಮೀನು (fish) ಮತ್ತು ಹಾಲು ಒಳ್ಳೆಯ ಕಾಂಬಿನೇಶನ್ ಅಲ್ಲ. ಮೀನು ಉಷ್ಣ ಪ್ರವೃತ್ತಿಯದ್ದು . ಅದೇ ರೀತಿ ಹಾಲು ತಂಪು ಪ್ರವೃತ್ತಿ ಉಂಟುಮಾಡುತ್ತದೆ. ಹಾಗಾಗಿ ಮೀನಿನ ಊಟದ ಜೊತೆ ಹಾಲು ಕುಡಿಯಬಾರದು ಎಂದು ಹೇಳುತ್ತಾರೆ. ತಿಂದರೆ, ಗ್ಯಾಸ್, ಅಲರ್ಜಿ (Allergy), ಹಾಗೂ ತ್ವಚೆ ಸಂಬಂಧಿ ಕಾಯಿಲೆಗಳು ಉಂಟಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಇದನ್ನೂ ಓದಿ : Sleeping Tips: ರಾತ್ರಿ ಮಲಗುವಾಗ ನೀವೂ ಈ ರೀತಿಯ ಒಳಉಡುಪು ಧರಿಸುತ್ತಿದ್ದರೆ ಎಚ್ಚರ!
4. ಹಾಲು, ಲಿಂಬೆ(Lemon), ಹಾಗಲಕಾಯಿ, ಹಲಸಿನ ಕಾಯಿ ಕಾಂಬಿನೇಶನ್ ಒಳ್ಳೆಯದಲ್ಲ.
ಯಾವತ್ತಿಗೂ ಲಿಂಬೆ, ಹಾಗಲಕಾಯಿ, ಹಲಸಿನಕಾಯಿ ಜೊತೆ ಹಾಲು ಸೇವಿಸುವುದು ಒಳ್ಳೆಯ ಪದ್ದತಿ ಅಲ್ಲ. ಇದರಿಂದ ಸೋಂಕು ಉಂಟಾಗಬಹುದು. ತುರಿಕೆ. ಅಲರ್ಜಿ ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳಬಹುದು.
5. ಉದ್ದಿನ ಬೇಳೆ, ಹೆಸರು ಬೇಳೆ ಜೊತೆ ಹಾಲು ಸಲ್ಲದು.!
ನೆನಪಿರಲಿ, ಉದ್ದಿನ ಬೇಳೆ, ಹೆಸರು ಬೇಳೆ ಜೊತೆ ಕೂಡಾ ಹಾಲು ಸೇವಿಸುವುದು ಸಲ್ಲದು. ಇದು ವರ್ಜ್ಯ ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ : ಈ ಏಳು ಆರೋಗ್ಯ ಲಾಭಕ್ಕಾಗಿ ಬೇಸಿಗೆಯಲ್ಲಿ ದಿನಕ್ಕೊಂದು ಕಪ್ ದ್ರಾಕ್ಷಿ ತಿನ್ನಿ
6. ಗೆಣಸು, ಅಲೂಗಡ್ಡೆ, ಜೇನು..!
ಗೆಣಸು, ಅಲೂಗಡ್ಡೆ, ಜೇನು (Honey), ಬೆಲ್ಲ, ಬೆಳ್ಳುಳ್ಳಿ (garlic) ಜೊತೆ ಹಾಲು ಕುಡಿಯಬಾರದು ಎಂದು ಸಲಹೆ ನೀಡಲಾಗುತ್ತದೆ. ಇವೆಲ್ಲದರ ಜೊತೆ ಹಾಲು ಕುಡಿಯುವಾಗ ಕನಿಷ್ಠ 2 ಗಂಟೆಗಳಅಂತರ ಇರಬೇಕು.
7. ಕಲ್ಲಂಗಡಿ ಜೊತೆ ಹಾಲು ಕುಡಿಯುವುದು ಸಲ್ಲದು :
ಬೇಸಿಗೆಯಲ್ಲಿ ಕಲ್ಲಂಗಡಿ ಪೇಯ ಕುಡಿಯುವುದು ಸಹಜ. ಆದರೆ, ಅದರ ಜೊತೆ ಹಾಲು ಮಿಕ್ಸ್ ಮಾಡಿ ಕುಡಿಯುವುದು ಸಲ್ಲದು. ಅಥವಾ ತರ್ಬೂಜ ಜ್ಯೂಸ್ ಕುಡಿದ ತಕ್ಷಣ ಹಾಲು ಕುಡಿಯುವುದು ಕೂಡಾ ಸರಿಯಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.