Garlic: ತಿಳಿಯಿರಿ ಪುರುಷರಲ್ಲಿ ಒಂದು ಎಸಳು ಬೆಳ್ಳುಳ್ಳಿಯ ಪ್ರಯೋಜನ.!

ಪರಂಪರೆಯಿಂದ ಬಂದಿರುವ ಜ್ಞಾನದ ಪ್ರಕಾರ ಮನೆಯ ಅಡುಗೆ ಮೂಲೆಯಲ್ಲಿರುವ ಬೆಳ್ಳುಳ್ಳಿಯಿಂದ  ನಮ್ಮ ಆರೋಗ್ಯಕ್ಕೆ ಸಾಕಷ್ಟು  ಪ್ರಯೋಜನ ಇದೆ. ಬೆಳ್ಳುಳ್ಳಿಯ ಎಸಳು ಸಾಕಷ್ಟು ಪ್ರಯೋಜನಕಾರಿ.

Written by - Ranjitha R K | Last Updated : Mar 5, 2021, 11:50 AM IST
  • ಬೆಳ್ಳುಳ್ಳಿಯಲ್ಲಿ ಎಲಿಸಿನ್ ಎಂಬ ಔಷಧೀಯ ತತ್ವ ಇದೆ.
  • ಬೆಳ್ಳುಳ್ಳಿ ಆಂಟಿಆಕ್ಸಿಡೆಂಟ್, ಆಂಟಿಫಂಗಲ್ ಮತ್ತು ಅಂಟಿ ವೈರಲ್ ಗುಣ ಹೊಂದಿದೆ.
  • ಪರಂಪರೆಯಿಂದ ಬಂದಿರುವಂತೆ ಬೆಳ್ಳುಳ್ಳಿಯ ಔಷಧೀಯ ಗುಣ ತಿಳಿಯಿರಿ.
Garlic: ತಿಳಿಯಿರಿ ಪುರುಷರಲ್ಲಿ ಒಂದು ಎಸಳು ಬೆಳ್ಳುಳ್ಳಿಯ ಪ್ರಯೋಜನ.! title=
ಬೆಳ್ಳುಳ್ಳಿಯಲ್ಲಿ ಎಲಿಸಿನ್ ಎಂಬ ಔಷಧೀಯ ತತ್ವ ಇದೆ. (file photo)

ನವದೆಹಲಿ : ಬದಲಾಗುತ್ತಿರುವ ಜೀವನಕ್ರಮ (Lifestyle) ಪುರುಷರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ದಿನವಿಡಿ ಚಟುವಟಿಕೆಯಿಂದಿರಲು ಹಾಗೂ ಎನರ್ಜಿಗಾಗಿ (energy) ಗಂಡಸರು ದುಬಾರಿ ವಸ್ತುಗಳ ಮೊರೆ ಹೋಗಬಹುದು. ಇವತ್ತು ನಮಗೆ ಮನೆಯಲ್ಲೇ ಸಿಗೋ ಬೆಳ್ಳುಳ್ಳಿಯಿಂದ  (Garlic) ಪುರುಷರ ಆರೋಗ್ಯ ಹೇಗೆ ಕಾಪಾಡಿಕೊಳ್ಳಬಹುದು ನೋಡೋಣ. 

ಬೆಳ್ಳುಳ್ಳಿಯ ಲಾಭ ಏನೆಲ್ಲಾ ಇದೆ ಗೊತ್ತಾ..?
ಪರಂಪರೆಯಿಂದ ಬಂದಿರುವ ಜ್ಞಾನದ ಪ್ರಕಾರ ಮನೆಯ ಅಡುಗೆ ಮೂಲೆಯಲ್ಲಿರುವ ಬೆಳ್ಳುಳ್ಳಿಯಿಂದ (Garlic) ನಮ್ಮ ಆರೋಗ್ಯಕ್ಕೆ ಸಾಕಷ್ಟು  ಪ್ರಯೋಜನ ಇದೆ. ಬೆಳ್ಳುಳ್ಳಿಯ ಎಸಳು ಸಾಕಷ್ಟು ಪ್ರಯೋಜನಕಾರಿ. ಬೆಳ್ಳುಳ್ಳಿಯಲ್ಲಿ ಎಲಿಸಿನ್ ಎಂಬ ಔಷಧೀಯ ವಸ್ತು ಲಭ್ಯವಿರುತ್ತದೆ. ಜೊತೆಗೆ ಬೆಳ್ಳುಳ್ಳಿ ಆಂಟಿಆಕ್ಸಿಡೆಂಟ್ (antioxidant) , ಆಂಟಿಫಂಗಲ್ (anti-fungal) ಮತ್ತು ಅಂಟಿ ವೈರಲ್ (anti viral) ಗುಣ ಹೊಂದಿದೆ. ಬೆಳ್ಳುಳ್ಳಿಯಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಬಿ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತದೆ ಎಂದು ಆಹಾರ ತಜ್ಞರು ಹೇಳುತ್ತಾರೆ. ಇದಲ್ಲದೆ ಬೆಳ್ಳುಳ್ಳಿಯಲ್ಲಿ ಸೆಲೇನಿಯಂ,ಮೆಗ್ನೇಶಿಯಂ,  ಕ್ಯಾಲ್ಸಿಯಂ ಅಂಶಗಳೂ ಸಾಕಷ್ಟು ಸಿಗುತ್ತದೆ.  ಇದೇ ಕಾರಣಕ್ಕೆ  ಹಸಿ ಬೆಳ್ಳುಳ್ಳಿ ಅಥವಾ ಹುರಿದ ಬೆಳ್ಳುಳ್ಳಿ (Fried garlic) ಆರೋಗ್ಯಕ್ಕೆ (Health) ತುಂಬಾ ಒಳ್ಳೆಯದು ಎಂದು ಆಹಾರ ತಜ್ಞರು ಸಲಹೆ ನೀಡುತ್ತಾರೆ. ಪುರುಷರು ಬೆಳ್ಳುಳ್ಳು ಹೆಚ್ಚು ತಿನ್ನಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. 

ಇದನ್ನೂ ಓದಿ : Tender Coconut: ನಿತ್ಯ ಸಂಜೀವಿನಿ ಈ ಎಳನೀರು.! ಈ ಹತ್ತು ಅದ್ಭುತ ಲಾಭ ನೋಡಿ.!

ಬಿಪಿ ಕಂಟೋಲ್ ಮಾಡುತ್ತದೆ :
ಬೆಳ್ಳುಳ್ಳಿ ತಿಂದರೆ ಪುರುಷರಲ್ಲಿ ರಕ್ತದೊತ್ತಡ (Blood pressure) ಕಡಿಮೆಯಾಗುತ್ತದೆಯಂತೆ. ಹಾಗಾಗಿ ಆಯುರ್ವೇದ ಪಂಡಿತರು ಬೆಳ್ಳುಳ್ಳಿಯ ಸೇವನೆಗೆ ಪ್ರಾಮುಖ್ಯತೆ ನೀಡುತ್ತಾರೆ.

ಪುರುಷರು ರಾತ್ರಿ ಮಲಗುವ ಮುನ್ನ ಬೆಳ್ಳುಳ್ಳಿ ತಿಂದರೆ ಒಳ್ಳೆಯದು :
ಬೆಳ್ಳುಳ್ಳಿಯಲ್ಲಿ ಎಲಿಸಿನ್ ಅಂಶವಿದೆ. ಇದು ಪುರುಷ ಹಾರ್ಮೊನ್ ಬೆಳವಣಿಗೆಗೆ ಸಹಾಯಕವಾಗುತ್ತದೆ. ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಸಿಗುತ್ತದೆ. ಹಾಗಾಗಿ ಇದು ಶಕ್ತಿವರ್ಧಕ ಕೂಡಾ ಹೌದು. 

ಹೊಟ್ಟೆ ನೋವಿಗೆ ರಾಮಬಾಣ :
ಬೆಳ್ಳುಳ್ಳಿ ತಿಂದರೆ ಹೊಟ್ಟೆ ನೋವು (Stamock ache) ಉಪಶಮನ ಆಗುತ್ತದೆ ಎಂದು ಹಿರಿಯರು ಹೇಳುತ್ತಾರೆ.  ಬೆಳ್ಳುಳ್ಳಿ ಎಸಳುಗಳನ್ನು ತಿಂದರೆ ಹೊಟ್ಟೆ ಸ್ವಚ್ಛವಾಗುತ್ತದೆ. 

ಇದನ್ನೂ ಓದಿ : ಪುರುಷರು ಬೇಸಿಗೆಯಲ್ಲಿ ತಪ್ಪದೇ ಈ Fruit ಸೇವಿಸಿದರೆ ಸಿಗುತ್ತೆ ಹಲವು ಪ್ರಯೋಜನ

ದೇಹವನ್ನು ಟಾಕ್ಸಿಕ್ ಫ್ರೀ ಮಾಡುತ್ತದೆ :
ದೇಹದಲ್ಲಿರುವ ವಿಷಯುಕ್ತ ವಸ್ತಗಳನ್ನು ಹೊರಗೆ ಕಳುಹಿಸುತ್ತದೆ ಬೆಳ್ಳುಳ್ಳಿ. ಮಲಗುವ ಮುನ್ನ ಹುರಿದ ಬೆಳ್ಳುಳ್ಳಿ ತಿಂದರೆ, ದೇಹ ಟಾಕ್ಸಿಕ್ ಪ್ರೀ (Toxic free) ಆಗುತ್ತದೆ. ಮೂತ್ರದ (Urine) ಮೂಲಕ ದೇಹದಲ್ಲಿರುವ ವಿಷಯುಕ್ತ ಅಂಶ ಹೊರಗೆ ಹೋಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News