ಟೈಪ್ 2 ಡಯಾಬಿಟಿಸ್ನಲ್ಲಿ ವೈಟ್ ರೈಸ್ ಸೇವಿಸುವ ತಪ್ಪನ್ನು ಎಂದಿಗೂ ಮಾಡಬೇಡಿ
Rice For Type 2 Diabetes: ನಮ್ಮಲ್ಲಿ ಕೆಲವರಿಗೆ ಅನ್ನ ತಿನ್ನದೆ ಊಟ ಮಾಡಿದಂತೆ ಅನಿಸುವುದೇ ಇಲ್ಲ. ಆದರೆ, ಆರೋಗ್ಯ ಸರಿಯಾಗಿಲ್ಲದಿದ್ದಾಗ, ಅದರಲ್ಲೂ ಡಯಾಬಿಟಿಸ್ನಂತಹ ರೋಗಕ್ಕೆ ಬಲಿಯಾದಾಗ ಕೆಲವು ಆಹಾರಗಳಿಂದ ಅಂತರ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ, ಖಾಯಿಲೆಯು ಉಲ್ಬಣಿಸಬಹುದು. ವಾಸ್ತವವಾಗಿ, ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ಬಿಳಿ ಅನ್ನ ವಿಷವಿದ್ದಂತೆ. ಅದು ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.
ಮಧುಮೇಹಕ್ಕೆ ಬ್ರೌನ್ ರೈಸ್: ವಿಶ್ವದಾದ್ಯಂತ ಸಾಮಾನ್ಯವಾಗಿ ಹೆಚ್ಚಾಗಿ ಬಳಸುವ ಏಕದಳ ಧಾನ್ಯ ಎಂದರೆ ಅಕ್ಕಿ. ಆದರೆ, ಮಧುಮೇಹಿಗಳಿಗೆ ಅಕ್ಕಿಯಿಂದ ತಯಾರಿಸಿದ ಆಹಾರಗಳನ್ನು ಸೇವಿಸದಂತೆ ಸಲಹೆ ನೀಡಲಾಗುತ್ತದೆ. ಅನ್ನವಿಲ್ಲದ ದೈನಂದಿನ ಆಹಾರವನ್ನು ಕಲ್ಪಿಸಿಕೊಳ್ಳುವುದು ಕಷ್ಟ, ಆದರೆ ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ಇದು ವಿಷವಿದ್ದಂತೆ. ಅದು ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಿದ್ದರೆ, ಮಧುಮೇಹಿಗಳು ಅನ್ನ ತಿನ್ನಲೇಬಾರದೇ? ಡಯಾಬಿಟಿಸ್ ಸಮಸ್ಯೆ ಇರುವವರು ಯಾವ ಅಕ್ಕಿಯನ್ನು ಬಳಸುವುದು ಒಳ್ಳೆಯದು ಎಂದು ತಿಳಿಯೋಣ...
ಮಧುಮೇಹ ರೋಗಿಗಳಿಗೆ ಬಿಳಿ ಅಕ್ಕಿಯನ್ನು ತಿನ್ನುವುದನ್ನು ನಿಯಂತ್ರಿಸುವಂತೆ ಸಲಹೆ ನೀಡಲಾಗುತ್ತದೆ. ಏಕೆಂದರೆ ಅಕ್ಕಿಯು ಪಿಷ್ಟ ಮತ್ತು ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಬಿಳಿ ಅಕ್ಕಿಯು ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ, ಇದು ಮಧುಮೇಹ ರೋಗಿಗಳಿಗೆ ಉತ್ತಮವಲ್ಲ ಎಂದು ಪರಿಗಣಿಸಲಾಗುತ್ತದೆ. ಆದರೆ, ಟೈಪ್ 2 ಡಯಾಬಿಟಿಸ್ ರೋಗಿಗಳು ಬಿಳಿ ಅಕ್ಕಿ ಅಂದರೆ ವೈಟ್ ರೈಸ್ ಬದಲಿಗೆ ಪರ್ಯಾಯವಾದ ರೈಸ್ ಬಳಸಬಹುದು. ಅದಕ್ಕೂ ಮೊದಲು ವೈಟ್ ರೈಸ್ ಸೇವನೆಯಿಂದ ಆಗುವ ಅನಾನುಕೂಲಗಳ ಬಗ್ಗೆ ತಿಳಿಯೋಣ...
ಇದನ್ನೂ ಓದಿ- Diabetes : ಈ ಎಲೆಯನ್ನು ಅಂಗಾಲಿಗೆ ಕಟ್ಟಿಕೊಂಡರೆ ಶುಗರ್ ಲೆವಲ್ ನಿಯಂತ್ರಿಸಬಹುದು
ಮಧುಮೇಹಿಗಳಿಗೆ ವೈಟ್ ರೈಸ್ ಸೇವನೆಯ ಅನಾನುಕೂಲಗಳು?
ಸ್ವಾಭಾವಿಕವಾಗಿ ಬೆಳೆದ ಅಕ್ಕಿ ಆರೋಗ್ಯಕ್ಕೆ ಅಷ್ಟೊಂದು ಅಪಾಯಕಾರಿಯಲ್ಲ, ಆದರೆ ಭತ್ತದಿಂದ ಅಕ್ಕಿ ತೆಗೆಯಲು ಗಿರಣಿಗೆ ತೆಗೆದುಕೊಂಡು ಹೋಗಿ ಪಾಲಿಷ್ ಮಾಡುವುದರಿಂದ ಅದು ಬಿಳಿಯಾಗಿ ಹೊಳೆಯುತ್ತದೆ. ಇದನ್ನು ಪಾಲಿಶ್ ರೈಸ್ ಎಂತಲೂ ಕರೆಯಲಾಗುತ್ತದೆ. ಆದರೆ ಇದು ಅದರ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ, ವಿಟಮಿನ್ ಬಿ ಬಿಡುಗಡೆಯಾಗಲು ಪ್ರಾರಂಭವಾಗುತ್ತದೆ ಮತ್ತು ಅದರ ಗ್ಲೈಸೆಮಿಕ್ ಸೂಚ್ಯಂಕವೂ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ, ಗ್ಲೂಕೋಸ್ ಮಟ್ಟವು ಹೆಚ್ಚಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕಲಬೆರಕೆ ಅಕ್ಕಿ ಕೂಡ ಮಾರುಕಟ್ಟೆಯಲ್ಲಿ ಸಾಕಷ್ಟು ಬಂದಿದ್ದು, ಇದು ಆರೋಗ್ಯಕ್ಕೆ ಇನ್ನಷ್ಟು ಅಪಾಯಕಾರಿ ಎಂದು ಸಾಬೀತುಪಡಿಸಬಹುದು.
ಮಧುಮೇಹಿಗಳಿಗೆ ಯಾವ ರೈಸ್ ಉತ್ತಮ ಆಯ್ಕೆಯಾಗಿದೆ?
ಟೈಪ್ -2 ಮಧುಮೇಹ ಹೊಂದಿರುವ ರೋಗಿಗಳು ಬಿಳಿ ಅಕ್ಕಿಯನ್ನು ತಿನ್ನುವ ಬದಲಿಗೆ ಬ್ರೌನ್ ರೈಸ್ ಉತ್ತಮ ಆಯ್ಕೆ ಆಗಿದೆ. ಬ್ರೌನ್ ರೈಸ್ ಹೆಚ್ಚು ಪೋಷಕಾಂಶಗಳು, ಹೆಚ್ಚು ಫೈಬರ್, ಹೆಚ್ಚು ಜೀವಸತ್ವಗಳು ಮತ್ತು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಸ್ಕೋರ್ ಅನ್ನು ಹೊಂದಿರುತ್ತದೆ. ಹಾಗಾಗಿಯೇ ಬ್ರೌನ್ ರೈಸ್ ಅನ್ನು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ- ಟೊಮ್ಯಾಟೊ-ಬದನೆ-ಪಾಲಕ್ ಸೊಪ್ಪು ಸೇವನೆಯಿಂದ ಕಿಡ್ನಿ ಸ್ಟೋನ್ ಸಮಸ್ಯೆ ಉಂಟಾಗುತ್ತಾ?
ಬಿಳಿ ಅಕ್ಕಿಯ ಗ್ಲೈಸೆಮಿಕ್ ಇಂಡೆಕ್ಸ್ ಸ್ಕೋರ್ 70 ರ ಸಮೀಪದಲ್ಲಿದೆ, ಅಂದರೆ ಟೈಪ್ 2 ಮಧುಮೇಹ ಹೊಂದಿರುವ ರೋಗಿಗಳಿಗೆ ಇದು ಅಪಾಯಕಾರಿ ಅಂಶವಾಗಿದೆ. ಮತ್ತೊಂದೆಡೆ, ಬ್ರೌನ್ ರೈಸ್ ನಲ್ಲಿ, ಅದರ ಜಿಐ ಸ್ಕೋರ್ 50 ಕ್ಕೆ ಹತ್ತಿರದಲ್ಲಿದೆ, ಆದ್ದರಿಂದ ಹೆಚ್ಚಿನ ಆರೋಗ್ಯ ತಜ್ಞರು ಮಧುಮೇಹಿಗಳಿಗೆ ಬ್ರೌನ್ ರೈಸ್ ತಿನ್ನಲು ಶಿಫಾರಸು ಮಾಡುತ್ತಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.