ಈ ನಾಲ್ಕು ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿದರೆ ತಕ್ಷಣ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್

Healthy Leaves For Diabetes: ಮಧುಮೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಇದಕ್ಕಾಗಿ  ಹಲವಾರು ಕ್ರಮಗಳನ್ನು ಕೈಗೊಳ್ಳಬೇಕು. ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಈ ಎಲೆಗಳು ಕೂಡಾರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.    

Written by - Ranjitha R K | Last Updated : Sep 13, 2022, 12:34 PM IST
  • ಮಧುಮೇಹವಿದ್ದಾಗ ಜೀವನಶೈಲಿಯನ್ನು ಸುಧಾರಿಸಿಕೊಳ್ಳಬೇಕು
  • ಈ ನಾಲ್ಕು ಎಲೆಗಳ ಬಳಕೆಯಿಂದ ಮಧುಮೇಹ ನಿಯಂತ್ರಿಸಬಹುದು
  • ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿಡಲು ಸಹಕಾರಿ
ಈ ನಾಲ್ಕು ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿದರೆ ತಕ್ಷಣ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್  title=
Diabetes control tips (file photo)

Healthy Leaves For Diabetes : ಒಬ್ಬ ವ್ಯಕ್ತಿಯಲ್ಲಿ ಒಮ್ಮೆ ಮಧುಮೇಹ ಕಾಣಿಸಿಕೊಂಡರೆ, ಜೀವನ ಪರ್ಯಂತ ಅದು ಬೆನ್ನು ಬಿಡುವುದಿಲ್ಲ. ಪ್ಈರತಿ ದಿನ ಮಾತ್ರೆ ತಪ್ಪಿಸುವಂತಿಲ್ಲ. ಆಹಾರ ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಅಗತ್ಯವಾಗಿರುತ್ತದೆ. ಈ ರೋಗ ನಾನಾ ಕಾರಣಗಳಿಂದ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಅನುವಂಶಿಕ ಕಾರಣವೂ ಒಂದು. ಮಧುಮೇಹ ಸಾಮಾನ್ಯವಾಗಿ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಲೇ ಬರುತ್ತದೆ. ಈ ರೋಗ ಬಂತೆಂದರೆ ವಿಪರೀತ ಕಾಳಜಿ ವಹಿಸಬೇಕಾಗುತ್ತದೆ. ಇಲ್ಲವಾದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣ ತಪ್ಕ್ಕೆಪುವ ಅಪಾಯವಿರುತ್ತದೆ. ಒಂದು ವೇಳೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರದಿದ್ದರೆ ಕಿಡ್ನಿ ರೋಗ, ಹೃದಯಾಘಾತ ಹೀಗೆ  ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೆಲವೊಂದು ಮನೆಮದ್ದುಗಳ ಸೇವನೆ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು. 

ಈ 4 ಎಲೆಗಳು ಮಧುಮೇಹದಲ್ಲಿ ಪರಿಣಾಮಕಾರಿ : 
1. ಅಶ್ವಗಂಧ 
ಅಶ್ವಗಂಧವನ್ನು ಆಯುರ್ವೇದದ ನಿಧಿ ಎಂದು ಕರೆಯಲಾಗುತ್ತದೆ. ಆದ್ದರಿಂದ ಇದು ಅನೇಕ ರೋಗಗಳಲ್ಲಿ ರಾಮಬಾಣದಂತೆ ಕೆಲಸ ಮಾಡುತ್ತದೆ. ಇದರ ಎಲೆಗಳು ಮತ್ತು ಬೇರಿನ ಸಹಾಯದಿಂದ ಮಧುಮೇಹದ  ಪರಿಣಾಮಗಳನ್ನು ನಿಯಂತ್ರಿಸಬಹುದು.

ಇದನ್ನೂ ಓದಿ : ದೇಹದಲ್ಲಿ ಕಂಡು ಬರುವ ಈ ಲಕ್ಷಣಗಳು ವಿಟಮಿನ್ ಬಿ 12 ಕೊರತೆಯ ಚಿಹ್ನೆಗಳು

2. ಬೇವಿನ ಎಲೆಗಳು
ಬೇವಿನ ಎಲೆಗಳ ಔಷಧೀಯ ಬಳಕೆ ಅತಿ ಹೆಚ್ಚು. ಇದು ಮಧುಮೇಹದಲ್ಲಿ  ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ಹೈಪರ್ಗ್ಲೈಸೆಮಿಕ್ ಆಗಿರುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಬಹುದು.

3. ಅಮೃತ ಬಳ್ಳಿ : 
ಅಮೃತ ಬಳ್ಳಿ ಎಲೆಗಳು ಮಧುಮೇಹ ರೋಗಿಗಳಿಗೆ  ಸಂಜೀವಿನಿ ಇದ್ದಂತೆ. ಇದು ಹೈಪರ್ಗ್ಲೈಸೆಮಿಕ್ ಆಗಿರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

4.  ನುಗ್ಗೆ ಸೊಪ್ಪು : 
ನುಗ್ಗೆ ಸೊಪ್ಪಿನಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಅಲ್ಲದೆ ಇದು ಮಧುಮೇಹ ವಿರೋಧಿ ಗುಣಗಳಲ್ಲಿ ಸಮೃದ್ಧವಾಗಿದೆ. ಮಧುಮೇಹಿಗಳು ಇದನ್ನು ಹೆಚ್ಚಾಗಿ ತಿನ್ನಬೇಕು ಎಂದು ಹೇಳಲಾಗುತ್ತದೆ. ಇದು ಮಧುಮೇಹ ರೋಗಿಗಳಿಗೆ ಇನ್ಸುಲಿನ್‌ನಂತೆ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ : Heart attack: ಹೃದಯಾಘಾತದ ಈ ಎಚ್ಚರಿಕೆಯ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ..!

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News