ನವದೆಹಲಿ : ಆಯುರ್ವೇದವು ಅನೇಕ ಆಹಾರಗಳ ಬಗ್ಗೆ ಎಚ್ಚರಿಕೆ ಸಂದೇಶ್ ನೀಡಿದೆ, ಕೆಲವು ವಿಶೇಷ ಆಹಾರಗಳನ್ನ ಹಾಲಿ ಜೊತೆ ಎಂದು ಸೇವಿಸಬಾರದು, ಇದರಿಂದ ನೀವು ಪಶ್ಚಾತ್ತಾಪ ಪಡಬೇಕಾಗಬಹುದು. ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಹಾಲಿನಲ್ಲಿ ಹೇರಳವಾಗಿ ಕಂಡುಬರುತ್ತವೆ, ಇದು ದೇಹ ಮತ್ತು ಮೂಳೆಗಳಿಗೆ ಬಹಳ ಮುಖ್ಯವಾಗಿದೆ. ಆದರೆ ಇಲ್ಲಿ ಉಲ್ಲೇಖಿಸಲಾದ 4 ಆಹಾರಗಳನ್ನ ಹಾಲಿನ ಜೊತೆ ಸೇವಿಸುವುದರಿಂದ ಆಗುವ ನಷ್ಟಗಳ ಬಗ್ಗೆ ಹೇಳುತ್ತಿದ್ದೇವೆ.


COMMERCIAL BREAK
SCROLL TO CONTINUE READING

ಹಾಲಿನೊಂದಿಗೆ ಸಹ ಇವುಗಳನ್ನು ತಿನ್ನಬೇಡಿ: 


ಆಯುರ್ವೇದ ತಜ್ಞ ಡಾ.ಅಬ್ರಾರ್ ಮುಲ್ತಾನಿ ಅವರ ಪ್ರಕಾರ, ಹಾಲು(Milk) ತಂಪಾಗಿಸುವ ಪರಿಣಾಮವನ್ನು ಹೊಂದಿದೆ. ನೀವು ಹುಳಿ ಆಹಾರವನ್ನು ಸೇವಿಸಿದರೆ, ನೀವು ವಾಂತಿ ಮಾಡಬೇಕಾಗುತ್ತದೆ.


ಇದನ್ನೂ ಓದಿ : Cloves Benefits : ಪುರುಷರ ಆರೋಗ್ಯಕ್ಕೆ 2 ಲವಂಗ : ಈ ಸಮಯದಲ್ಲಿ ತಪ್ಪದೆ ಸೇವಿಸಿ


ಸಿಟ್ರಸ್ ಹಣ್ಣುಗಳು ಹಾಲಿನೊಂದಿಗೆ ಸೇವಿಸಬೇಡಿ :


ನೀವು ಸಿಟ್ರಸ್ ಹಣ್ಣುಗಳನ್ನು ಹಾಲಿನೊಂದಿಗೆ ಸೇವಿಸಿದರೆ, ನಿಮಗೆ ಹೊಟ್ಟೆಯ ತೊಂದರೆ ಅನುಭವಿಸಬೇಕಾಗುತ್ತದೆ. ಏಕೆಂದರೆ, ಸಿಟ್ರಸ್ ಹಣ್ಣುಗಳಲ್ಲಿ ಸಿಟ್ರಿಕ್ ಆಮ್ಲ ಇರುವುದರಿಂದ ಇದು ಹಾಲಿನ ಜೀರ್ಣಕ್ರಿಯೆ(Digestion)ಯನ್ನು ತಡೆಯುತ್ತದೆ.


ಹಾಲಿನೊಂದಿಗೆ ಮೀನು ಸೇವಿಸಬೇಡಿ :


ನೀವು ಹಾಲಿನೊಂದಿಗೆ ಅಥವಾ ಹಾಲು ಕುಡಿದ ತಕ್ಷಣವೇ ಮೀನು(Fish) ಸೇವಿಸಿದರೆ, ಅದು ಆಹಾರ ವಿಷಕ್ಕೆ ಕಾರಣವಾಗಬಹುದು. ಇದಲ್ಲದೆ ಇದು ಚರ್ಮದ ಅಲರ್ಜಿಯನ್ನು ಸಹ ಉಂಟುಮಾಡುತ್ತದೆ.


ಹಾಲಿನೊಂದಿಗೆ ಹಣ್ಣುಗಳ ಬಳಕೆ :


ಸ್ಟ್ರಾಬೆರಿ, ಬೆರಿಹಣ್ಣುಗಳು ಇತ್ಯಾದಿಗಳನ್ನು ಹಾಲಿನೊಂದಿಗೆ ತಿನ್ನಬಾರದು. ಆಯುರ್ವೇದ(Ayurveda)ದ ಪ್ರಕಾರ, ಇದು ನಿಮ್ಮ ಜೀರ್ಣಕ್ರಿಯೆಯನ್ನು ಹಾಳು ಮಾಡುತ್ತದೆ. ನೀವು ಇದನ್ನು ಮಾಡಲು ಬಯಸಿದರೆ, ಹಾಲು ಸೇವಿಸಿದ ಸುಮಾರು 1 ಗಂಟೆಯ ನಂತರ ಮಾತ್ರ ಹಣ್ಣುಗಳನ್ನು ಸೇವಿಸಿ.


ಇದನ್ನೂ ಓದಿ : Belly Fat ಕರಗಿಸಲು ತಪ್ಪದೆ ಸೇವಿಸಿ ಈ 2 ಪದಾರ್ಥಗಳನ್ನು!


ಹಾಲಿನೊಂದಿಗೆ ಮೊಸರು : 


ಹಾಲಿನೊಂದಿಗೆ ಮೊಸರು ಸೇವಿಸುವುದರಿಂದ ಅಜೀರ್ಣ ಉಂಟಾಗುತ್ತದೆ. ಇದರಿಂದಾಗಿ ಅನಿಲ, ಹೊಟ್ಟೆ ನೋವು(Stomach Problems) ಮತ್ತು ವಾಂತಿ ಇರಬಹುದು. ಹಾಲು ಸೇವಿಸಿದ ನಂತರ 1 ಗಂಟೆ ಮೇಲೆ ಮೊಸರು ಸೇವಿಸಿದರೆ ಉತ್ತಮ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.