ನವದೆಹಲಿ: ದೇಶದ ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಪಿಜಿಐ ಚಂಡೀಗಢ(PGI Chandigarh)ದಲ್ಲಿ ಹೆರಿಗೆಗೆ ಸಂಬಂಧಿಸಿದಂತೆ ಎಲ್ಲಾ ಸೇವೆಗಳನ್ನೂ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಈ ಹಿಂದೆ ಸಿಸೇರಿಯನ್ ಗೆ 1000 ರೂ. ಶುಲ್ಕ ವಿಧಿಸಲಾಗುತ್ತಿತ್ತು. ಅತೀ ಗಂಭೀರ ಹೆರಿಗೆ ಕೇಸ್ ಗಳನ್ನು ನಿಭಾಯಿಸುವುದಕ್ಕೆ ಪಿಜಿಐ ಪ್ರಸಿದ್ಧವಾಗಿದೆ. 


COMMERCIAL BREAK
SCROLL TO CONTINUE READING

ಜಿಲ್ಲಾ ಆಸ್ಪತ್ರೆಗಳಲ್ಲೂ ಈ ಸೌಲಭ್ಯ ಲಭ್ಯ
ಇತ್ತೀಚೆಗೆ www.zeebiz.com/hindiಯಲ್ಲಿ ಪ್ರಕಟವಾದ ವರದಿಯ ಪ್ರಕಾರ, "ಸರ್ಕಾರ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಹೆರಿಗೆಗೆ ಉಚಿತ ಸೇವೆಯನ್ನು ಒದಗಿಸಿದೆ. ಅಂತೆಯೇ ಈ ಆಸ್ಪತ್ರೆಯಲ್ಲಿಯೂ ಸಹ ಹೆರಿಗೆಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಎಲ್ಲವೂ ಉಚಿತ ಸೇವೆಯಾಗಲಿದೆ. ಪಿಜಿಐ ನಲ್ಲಿ ಒಂದು ತಿಂಗಳಿಗೆ 490 ಹೆರಿಗೆ ಗಳನ್ನೂ ಮಾಡಲಾಗುತ್ತದೆ. ಇದರಲ್ಲಿ ಬಹುತೇಕ ಹೆರಿಗೆಗೆಗಳು ಸಾಕಷ್ಟು ತೊಡಕುಗಳಿಂದಲೇ ಕೂಡಿರುತ್ತವೆ. ಆದರೆ ಜಿಲ್ಲಾ ಆಸ್ಪತ್ರೆಗಳಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಕಡಿಮೆ" ಎಂದು ಪಿಜಿಐ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಪ್ರೊ. ಎ.ಕೆ.ಗುಪ್ತಾ ಹೇಳಿದ್ದಾರೆ.


ಹೆರಿಗೆಗೆ ಸಂಬಂಧಿಸಿದ ಎಲ್ಲಾ ವೆಚ್ಚವನ್ನೂ ಆಸ್ಪತ್ರೆಯೇ ಭರಿಸಲಿದೆ
ಗರ್ಭಧಾರಣೆಯಾದ ಬಳಿಕದಿಂದ ಹೆರಿಗೆವರೆಗಿನ ಎಲ್ಲಾ ವೆಚ್ಚಗಳನ್ನೂ ಆಸ್ಪತ್ರೆಯೇ ಭರಿಸಲಿದೆ. ಸಾಮಾನ್ಯ, ಸಿಸೇರಿಯನ್ ಹೀಗೆ ಎಲ್ಲಾ ಹೆರಿಗೆಯನ್ನೂ ಜಿಲ್ಲಾ ಆಸ್ಪತ್ರೆಗಳಲ್ಲಿ ಜನನಿ ಶಿಶು ಸುರಕ್ಷಾ ಯೋಜನೆಯಡಿಯಲ್ಲಿ ಉಚಿತವಾಗಿ ಮಾಡಲಾಗುವುದು. ಶಿಶು ಮರಣ ಪ್ರಮಾಣ ಹೆಚ್ಚಳವನ್ನು ನಿಯಂತ್ರಿಸುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಸಕ್ತ, ಶಿಶು ಮರಣ ಪ್ರಮಾಣವು ವಾರ್ಷಿಕವಾಗಿ 56 ಸಾವಿರ ಇದೆ.


ಔಷಧಿ ಮತ್ತು ಇತರ ಎಲ್ಲ ಸೇವೆಗಳೂ ಉಚಿತ
ಈ ಯೋಜನೆಯಡಿಯಲ್ಲಿ ಕೇವಲ ಹೆರಿಗೆ ವೆಚ್ಚವಷ್ಟೇ ಅಲ್ಲ, ಇತರ ಎಲ್ಲಾ ಸೇವೆಗಳೂ ಉಚಿತ. ಅಂತೆಯೇ ಹೆರಿಗೆ ಬಳಿಕ ಉಚಿತವಾಗಿ ಊಟವನ್ನೂ ಸಹ ನೀಡಲಾಗುತ್ತದೆ. ಒಂದು ವೇಳೆ ಹೆರಿಗೆ ಸಂದರ್ಭದಲ್ಲಿ ರಕ್ತದ ಅಗತ್ಯವಿದ್ದಲ್ಲಿ ಆ ಸೌಲಭ್ಯವೂ ಸಹ ಉಚಿತ. ಅಷ್ಟೇ ಅಲ್ಲ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮನೆಗೆ ತಲುಪುಸುವ ಜವಾಬ್ದಾರಿಯನ್ನೂ ಸಹ ಆಸ್ಪತ್ರೆಯೇ ಹೊರಲಿದ್ದು, ಈ ಸೇವೆಯೂ ಸಹ ಉಚಿತವಾಗಿ ದೊರೆಯಲಿದೆ.