ಪರಂಗಿ ಬೀಜದ ಪ್ರಯೋಜನಗಳು: ಪರಂಗಿ ಹಣ್ಣು ಬಡವರು, ಶ್ರೀಮಂತರು ಎಲ್ಲಾ ವರ್ಗದವರಿಗೂ ಕೈಗೆಟುಕುವ ಬೆಲೆಗೆ ದೊರೆಯುವ ಹಣ್ಣು. ಪರಂಗಿ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಎಂದು ನಮಗೆ ತಿಳಿದೇ ಇದೆ. ಸಾಮಾನ್ಯವಾಗಿ ನಾವು ಪರಂಗಿಹಣ್ಣಿನ ಸಿಪ್ಪೆ ಸುಲಿದ ಬಳಿಕ ಅದರಲ್ಲಿರುವ ಬೀಜಗಳನ್ನು ನಿಷ್ಪ್ರಯೋಜಕವೆಂದು ಪರಿಗಣಿಸಿ ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ, ಪರಂಗಿ ಹಣ್ಣು ಮಾತ್ರವಲ್ಲ, ಅದರ ಬೀಜಗಳು ಸಹ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? 


COMMERCIAL BREAK
SCROLL TO CONTINUE READING

ಹೌದು, ಪರಂಗಿ ಹಣ್ಣಿನ ಬೀಜಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಭಾರತದ ಪ್ರಸಿದ್ಧ ಪೌಷ್ಟಿಕತಜ್ಞ ನಿಖಿಲ್ ವಾಟ್ಸ್ ಅವರು, ಪರಂಗಿಹಣ್ಣು ಮಾತ್ರವಲ್ಲ ಅವುಗಳ ಬೀಜಗಳು ಸಹ ನಮಗೆ ಹೇಗೆ ಪ್ರಯೋಜನಕಾರಿ ಆಗಿವೆ, ಪಪ್ಪಾಯಿ ಬೀಜಗಳನ್ನು ಏಕೆ ಸೇವಿಸಬೇಕು ಎಂದು ಮಾಹಿತಿ ನೀಡಿದ್ದಾರೆ.


ಪರಂಗಿಹಣ್ಣಿನ ಬೀಜಗಳ ಪ್ರಯೋಜನಗಳು: 
* ಶೀತದಿಂದ ರಕ್ಷಣೆ:

ಪರಂಗಿ ಹಣ್ಣಿನ ಬೀಜಗಳಲ್ಲಿ ಪಾಲಿಫಿನಾಲ್ಗಳು ಮತ್ತು ಫ್ಲೇವೊಲಾಯ್ಡ್ಗಳಂತಹ ಆಂಟಿ-ಆಕ್ಸಿಡೆಂಟ್ಗಳು ಕಂಡು ಬರುತ್ತವೆ. ಇದು ದೇಹದಲ್ಲಿನ ಸ್ವತಂತ್ರ ರಾಡಿಕಲ್ಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ.  ಇದು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಶೀತಗಳಂತಹ ಅನೇಕ ರೋಗಗಳ ಅಪಾಯದಿಂದ ನಿಮ್ಮನ್ನು ರಕ್ಷಿಸುತ್ತದೆ.


ಇದನ್ನೂ ಓದಿ- ಮನೆ ಮದ್ದಿನಿಂದಲೇ ಈ ತಲೆ ನೋವಿಗೆ ಗುಡ್ ಬೈ ಹೇಳಿ


* ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಆಗುತ್ತದೆ: 
ಪರಂಗಿ ಹಣ್ಣಿನ ಬೀಜಗಳು ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ. ಇದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಅಪಧಮನಿಗಳಲ್ಲಿ ಕಡಿಮೆ ಪ್ಲೇಕ್ ಇದ್ದಾಗ, ರಕ್ತದೊತ್ತಡ ಕಡಿಮೆಯಾಗುತ್ತದೆ. ಈ ರೀತಿಯಾಗಿ, ನೀವು ಹೃದಯಾಘಾತ, ಪರಿಧಮನಿಯ ಕಾಯಿಲೆ ಮತ್ತು ಟ್ರಿಪಲ್ ನಾಳೀಯ ಕಾಯಿಲೆಯಂತಹ ಹೃದಯ ಕಾಯಿಲೆಗಳನ್ನು ತಪ್ಪಿಸಬಹುದು.


* ತೂಕ ನಿಯಂತ್ರಣ:
ಪರಂಗಿ ಹಣ್ಣಿನ ಬೀಜಗಳಲ್ಲಿ ನಾರಿನಂಶ ಹೇರಳವಾಗಿದ್ದು ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಕಾರಿಯಾಗಿದೆ. ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿದ್ದರೆ ಸ್ಥೂಲಕಾಯಕ್ಕೆ ಬಲಿಯಾಗುವುದಿಲ್ಲ ಮತ್ತು ಹೆಚ್ಚುತ್ತಿರುವ ತೂಕವನ್ನೂ ನಿಯಂತ್ರಿಸಬಹುದು.


ಇದನ್ನೂ ಓದಿ- ಇದು ಖಂಡಿತಾ ಮಧುಮೇಹ ಬಂದಿರುವ ಸೂಚನೆ ಇರಬಹುದು...!


ಪರಂಗಿಹಣ್ಣಿನ ಬೀಜಗಳನ್ನು ಸೇವಿಸುವುದು ಹೇಗೆ?
ಪರಂಗಿಹಣ್ಣಿನ ಬೀಜಗಳನ್ನು ನೀರಿನಿಂದ ತೊಳೆಯಿರಿ ಮತ್ತು ನಂತರ ಅವುಗಳನ್ನು ಹಲವಾರು ದಿನಗಳವರೆಗೆ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಬಳಿಕ ಅದನ್ನು ಪುಡಿ ಮಾಡಿ ಇಡಿ. ಈ ಪುಡಿಯನ್ನು ಶೇಕರ್, ಡೆಸರ್ಟ್, ಜ್ಯೂಸ್ ಇತ್ಯಾದಿಗಳಲ್ಲಿ ಬೆರೆಸಿ ಸೇವಿಸಬಹುದು. ಇದರ ರುಚಿ ಕಹಿಯಾಗಿರುವುದರಿಂದ ಸಿಹಿ ಪದಾರ್ಥಗಳೊಂದಿಗೆ ಬೆರೆಸಿ ತಿನ್ನಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.