Benefits of lemon and coconut oil for hair : ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಬಿಳಿ ಕೂದಲು ಸಮಸ್ಯೆ, ಕೂದಲು ಉದುರುವಿಕೆ, ಬೋಲು ತಲೆ ಸೇರಿದಂತೆ ಅನೇಕ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇವುಗಳ ನಡುವೆ ಬಿಳಿ ಕೂದಲ ಸಮಸ್ಯೆ ಮತ್ತು ಕೂದಲು ಉದುರುವಿಕೆ ಗಂಭೀರ ಸಮಸ್ಯೆಯಾಗಿದೆ. 


COMMERCIAL BREAK
SCROLL TO CONTINUE READING

ಹೌದು.. ತಲೆ ತುಂಬಾ ಕಪ್ಪು ಕೂದಲು ಇದ್ರೆ ನೋಡೋಕೆ ಮನುಷ್ಯ ಚಂದವಾಗಿ ಕಾಣುತ್ತಾನೆ. ಇದು ಪುರುಷ ಮತ್ತು ಮಹಿಳೆಯರಿಯೂ ಅನ್ವಯವಾಗುತ್ತದೆ. ಅದರೆ ಅಧುನಿಕ ಜೀವನ ಶೈಲಿ, ಕಳಪೆ ಆಹಾರ ಪದ್ದತಿಯಿಂದಾಗಿ ಜನ ಹಲವಾರು ರೀತಿಯ ಕೂದಲು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬನ್ನಿ ದೃಢವಾದ ಕಪ್ಪು ಕೂದಲು ಪಡೆಯಲು ಅಡುಗೆ ಮನೆಯಲ್ಲಿ ಸಿಗುವ, ಈರುಳ್ಳಿ, ನಿಂಬೆಹಣ್ಣು, ತೆಂಗಿನ ಕಾಯಿ ಬಗ್ಗೆ ಅರಿತುಕೊಳ್ಳೋಣ..


ಇದನ್ನೂ ಓದಿ:ಹೃದಯದ ಆರೋಗ್ಯಕ್ಕಾಗಿ ಈ 5 ಡೈರಿ ಉತ್ಪನ್ನಗಳಿಗೆ 'NO' ಹೇಳಿ..!


ತೆಂಗಿನ ಎಣ್ಣೆ ಕೂದಲಿನ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತೆಂಗಿನ ಎಣ್ಣೆಯೊಂದಿಗೆ ನಿಂಬೆ ರಸವನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚುವುದರಿಂದ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ. ಅಲ್ಲದೆ, ನಿಂಬೆಹಣ್ಣು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದ್ದು, ಕೂದಲಿನ ಆರೋಗ್ಯ ಕಾಪಾಡುತ್ತದೆ. ತೆಂಗಿನ ಎಣ್ಣೆಯೊಂದಿಗೆ ನಿಂಬೆಹಣ್ಣನ್ನು ಮಿಶ್ರಣಮಾಡಿ ತಲೆ ಹಚ್ಚಿ..


ಇನ್ನು ನಿಂಬೆ ಹಣ್ಣು ಅಷ್ಟೇ ಅಲ್ಲದೆ, ತೆಂಗಿನ ಎಣ್ಣೆಯ ಜೊತೆಗೆ ಈರುಳ್ಳಿ ರಸವನ್ನೂ ಸಹ ಬಳಸಿ ಕೂದಲಿಗೆ ಹಚ್ಚಿಕೊಳ್ಳಬಹುದು. ತೆಂಗಿನೆಣ್ಣೆ ಮತ್ತು ಈರುಳ್ಳಿ ರಸವು ಉತ್ತಮ ಸಂಯೋಜನೆಯಾಗಿದ್ದು, ಎರಡೂ ಬ್ಯಾಕ್ಟೀರಿಯಾ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿವೆ. ಇದಲ್ಲದೆ, ಈರುಳ್ಳಿ ರಸವು ಸಲ್ಫರ್‌ನಲ್ಲಿ ಸಮೃದ್ಧವಾಗಿದ್ದು, ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.


ಇದನ್ನೂ ಓದಿ:ಇದೊಂದು ಡ್ರಿಂಕ್ ಸಾಕು, ಸಂಧು ಸಂಧುಗಳಲ್ಲಿ ಸೇರಿರುವ ಯೂರಿಕ್ ಆಸಿಡ್ ಕರಗಿಸಲು !


ಹಿಂದಿನ ಕಾಲದಿಂದಲೂ ಮಹಿಳೆಯರು ತಮ್ಮ ಕೂದಲನ್ನು ಪೋಷಿಸಲು ಈ ಎರಡು ಅದ್ಭುತ ಪದಾರ್ಥಗಳನ್ನು ಬಳಸುತ್ತಲೇ ಬಂದಿದ್ದಾರೆ. ನೀವು ಈರುಳ್ಳಿ ರಸ ಮತ್ತು ತೆಂಗಿನ ಎಣ್ಣೆ ಎರಡನ್ನೂ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿಕೊಳ್ಳಬಹುದು. ತೆಂಗಿನ ಎಣ್ಣೆ ತುರಿಕೆ, ಒಣ ನೆತ್ತಿ ಅಥವಾ ಸುಕ್ಕುಗಟ್ಟಿದ ಕೂದಲಿನ ಸಮಸ್ಯೆಗೆ ರಾಮಬಾಣ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.