ನವದೆಹಲಿ : ಸಾಮಾನ್ಯವಾಗಿ ಮಹಿಳೆಯರು ದಿನಪೂರ್ತಿ ಕೆಲಸ ಮಾಡಿಕೊಂಡು ಇರುತ್ತಾರೆ. ಹೀಗಾಗಿ ಅವರಿಗೆ ವಿಶ್ರಾಂತಿಗೆ ಸಮಯ ಸಿಗವುದು ಬಹಳ ಕಡಿಮೆ. ದಿನಪೂರ್ತಿ ಕೆಲಸ ಎಂದು ಓಡಾಡುವ ಮಹಿಳೆಯರಿಗೆ ರಾತ್ರಿ ಒಮ್ಮೆ ಮಲಗಿಕೊಂಡರೆ ಸಾಕು ಎಂಬಂತೆ ಆಗಿರುತ್ತದೆ. ಇವತ್ತು ನಾವು ಹೇಳುವ ಪರಿಹಾರದಿಂದ ಮಹಿಳೆಯರಿಗೆ ಆರಾಮದಾಯಕವಾಗಿರುತ್ತದೆ. ಮಲಗುವ ಮುನ್ನ 5 ನಿಮಿಷಗಳ ಮೊದಲು ಈ ಕೆಲಸವನ್ನುಮಾಡಿದರೆ ಸಾಕು.  


COMMERCIAL BREAK
SCROLL TO CONTINUE READING

ಇದಕ್ಕಾಗಿ ನಿಮಗೆ ಸಾಸಿವೆ ಎಣ್ಣೆ (Mustard oil) ಬೇಕಾಗುತ್ತದೆ. ಸಾಸಿವೆ ಎಣ್ಣೆ ಆರೋಗ್ಯಕ್ಕೆ (Health Benefits of mustard oil) ತುಂಬಾ ಪ್ರಯೋಜನಕಾರಿ ಎನ್ನುವುದು ಈಗಾಗಲೇ ಸಾಬೀತಾಗಿದೆ. ಇದನ್ನು ದೇಹದ ಕೆಲವು ಭಾಗಗಳಿಗೆ ಹಚ್ಚುವುದರಿಂದ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಈ ಎಣ್ಣೆಯಿಂದ ಮಸಾಜ್ (Mustard oil massage) ಮಾಡುವುದರಿಂದ ನಿಮ್ಮ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ.  


ಇದನ್ನೂ ಓದಿ : Papaya Juice Benefits: ಪರಂಗಿ ಹಣ್ಣಿನ ಜ್ಯೂಸ್ ಸೇವಿಸಿ, ಉತ್ತಮ ಆರೋಗ್ಯ ನಿಮ್ಮದಾಗಿಸಿ


ಪಾದದ ಮಸಾಜ್  :
ರಾತ್ರಿ ನಿದ್ದೆ ಮಾಡುವ ಮೊದಲು ಸಾಸಿವೆ ಎಣ್ಣೆಯಿಂದ ಪಾದದ ಅಡಿಭಾಗದಲ್ಲಿ (mustard oil massage on feet) ಮಸಾಜ್ ಮಾಡಿದರೆ,  ದೃಷ್ಟಿ ಚುರುಕಾಗುತ್ತದೆ. ಚೆನ್ನಾಗಿ ನಿದ್ರೆ ಮಾಡದಿದ್ದರೂ ಇದು ದೇಹವನ್ನು ಆರೋಗ್ಯಕರವಾಗಿ ಮತ್ತು ಸದೃಢವಾಗಿರಿಸಲು ಸಹಾಯ ಮಾಡುತ್ತದೆ. ಇನ್ನು ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆ ಎಂದರೆ ತೂಕ ಹೆಚ್ಚಳ (weight gain). ರಾತ್ರಿ ಮಲಗುವ ಮೊದಲು ನಿಮ್ಮ ಪಾದದ ಅಡಿಭಾಗವನ್ನು ಮಸಾಜ್ ಮಾಡಿದರೆ, ದೇಹದಲ್ಲಿರುವ ಕೊಬ್ಬಿನ ಜೊತೆಗೆ, ನಿಮ್ಮ ತೂಕವನ್ನು ಸಹ ಕಡಿಮೆ (weight loss) ಮಾಡಬಹುದು.


ಹೊಕ್ಕುಳು :
ರಾತ್ರಿಯಲ್ಲಿ ಮಲಗುವ 5 ನಿಮಿಷಗಳ ಮೊದಲು ನಿಮ್ಮ ಹೊಕ್ಕುಳಿಗೆ ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡಿದರೆ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು.  ಹೀಗೆ ಮಾಡುವುದರಿಂದ ಹೊಟ್ಟೆ ನೋವು ಮತ್ತು ಜೀರ್ಣಕಾರಿ ತೊಂದರೆಗಳು (Digestion problem) ದೂರವಾಗುತ್ತವೆ. ಇದಲ್ಲದೆ ಇದು ಕಣ್ಣು ಉರಿ, ತುರಿಕೆ ಮತ್ತು ಡ್ರೈ ನೆಸ್ ಸಮಸ್ಯೆಯನ್ನು ನಿವಾರಿಸುತ್ತದೆ. 


ಇದನ್ನೂ ಓದಿ : ವರ್ಷಗಳು ಕಳೆದರೂ ಈ ಐದು ವಸ್ತುಗಳು ಕೆಡುವುದೇ ಇಲ್ಲ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ