ವರ್ಷಗಳು ಕಳೆದರೂ ಈ ಐದು ವಸ್ತುಗಳು ಕೆಡುವುದೇ ಇಲ್ಲ

ಮಾರುಕಟ್ಟೆಯಿಂದ ಯಾವುದೇ ವಸ್ತುವನ್ನು ತಂದರು ಅದಕ್ಕೆ  ಎಕ್ಸ್ ಪೈರಿ ಡೇಟ್ ಅನ್ನುವುದು ಇರುತ್ತೆ. ನಿಗಧಿತ ಅವಧಿ ಮುಗಿದ ನಂತರ ಆ ಆಹಾರವನ್ನು ಸೇವಿಸುವಂತಿಲ್ಲ. 

Written by - Ranjitha R K | Last Updated : Jul 2, 2021, 01:13 PM IST
  • ಯಾವುದೇ ವಸ್ತುಗಳನ್ನು ನಿಗಧಿತ ಸಮಯದ ಒಳಗೆ ಬಳಸಲೇಬೇಕು
    ಇಲ್ಲವಾದರೆ ನಂತರ ಉಪಯೋಗಕ್ಕೆ ಬರುವುದಿಲ್ಲ
    ಈ ಐದು ವಸ್ತುಗಳು ವರ್ಷಗಳು ಕಳೆದರು ಬಳಕೆಗೆ ಯೋಗ್ಯವಾಗಿರುತ್ತವೆ
ವರ್ಷಗಳು ಕಳೆದರೂ ಈ ಐದು ವಸ್ತುಗಳು  ಕೆಡುವುದೇ ಇಲ್ಲ title=
ಈ ಐದು ವಸ್ತುಗಳು ವರ್ಷಗಳು ಕಳೆದರು ಬಳಕೆಗೆ ಯೋಗ್ಯವಾಗಿರುತ್ತವೆ (photo zee news)

ನವದೆಹಲಿ : ಮಾರುಕಟ್ಟೆಯಿಂದ ಯಾವುದೇ ವಸ್ತುವನ್ನು ತಂದರೂ ಅದಕ್ಕೆ  ಎಕ್ಸ್ ಪೈರಿ ಡೇಟ್ (EXpiry date) ಅನ್ನುವುದು ಇರುತ್ತೆ. ನಿಗಧಿತ ಅವಧಿ ಮುಗಿದ ನಂತರ ಆ ಆಹಾರವನ್ನು ಸೇವಿಸುವಂತಿಲ್ಲ.  ಆದರೆ ಯಾವತ್ತೂ ಕೆಡದಂಥಹ ಐದು ವಸ್ತುಗಳು ನಿಮ್ಮ ಅಡುಗೆ ಮನೆಯಲ್ಲಿ ಇರುತ್ತವೆ. ಒಂದು ವರ್ಷದ ನಂತರವೂ ನೀವು ಆ ವಸ್ತುಗಳನ್ನು ಸೇವಿಸಿದರೂ ಅವುಗಳ ರುಚಿಯಲ್ಲಿ ಯಾವ ಬದಲಾವಣೆಯು ಆಗುವುದಿಲ್ಲ. 

ಈ ವಸ್ತುಗಳಿಗೆ ಎಕ್ಸ್ ಪೈರಿ ಡೇಟ್ ಇರುವುದಿಲ್ಲ:
ಇಲ್ಲಿ ಉಲ್ಲೇಖಿಸಲಾದ ಐದು ಪದಾರ್ಥಗಳನ್ನು ಗಾಳಿ, ನೀರು (water) ಮುಂತಾದ ವಸ್ತುಗಳೊಂದಿಗೆ ಸಂಪರ್ಕಕ್ಕೆ ಬಾರದಂತೆ ಇಟ್ಟರೆ  ಒಂದು ವರ್ಷದ ನಂತರವೂ ಅವುಗಳನ್ನು ಆರಾಮವಾಗಿ ತಿನ್ನಬಹುದು.

ಇದನ್ನೂ ಓದಿ:  ಸೋಫಾದ ಮೇಲೆ ಮಲಗುವ ಅಭ್ಯಾಸ ನಿಮಗೂ ಇದೆಯಾ ? ಹಾಗಿದ್ದರೆ ಇಂದೇ ಎಚ್ಚೆತ್ತುಕೊಳ್ಳಿ

1. ಬೇಳೆ :
ದ್ವಿದಳ ಧಾನ್ಯಗಳನ್ನು ಬಳಸದ ಮನೆ ಇರುವುದಿಲ್ಲ. ಬೇಳೆ ಅಂದರೆ ಪ್ರೋಟೀನ್‌ನ ಮುಖ್ಯ ಮೂಲವಾಗಿದೆ. ಬೇಳೆಗಳನ್ನು ತಿನ್ನುವುದರಿಂದ ಮಿನರಲ್ ಗಳು ಮತ್ತು ಖನಿಜಗಳನ್ನು ಹೇರಳವಾಗಿ ಪಡೆಯಲಾಗುತ್ತದೆ. ಬೇಳೆಯನ್ನು ಕಾಲಕಾಲಕ್ಕೆ ಬಿಸಿಲಿನಲ್ಲಿ ಇಟ್ಟುಕೊಂಡರೆ, ಅದನ್ನು ದೀರ್ಘಕಾಲದವರೆಗೆ ಬಳಸಬಹುದು. 

2. ಉಪ್ಪು :
ಉಪ್ಪು (Salt) ಇಲ್ಲದ ಆಹಾರವನ್ನು ಕಲ್ಪಿಸುವುದು ಕೂಡಾ ಸಾಧ್ಯವಿಲ್ಲ.  ಉಪ್ಪಿನ ಬಳಕೆಯಿಂದ, ಇತರ ಆಹಾರ ಪದಾರ್ಥಗಳನ್ನು ಹಾಳಾಗದಂತೆ ಕಾಪಾಡಲಾಗುತ್ತದೆ. ಉಪ್ಪು ಫೋಟ್ರೀಫೈಡ ಮತ್ತು ಅಯೋಡಿನ್ ಯುಕ್ತ ಅಲ್ಲದೆ ಹೋದರೆ ದೀರ್ಘಕಾಲದವರೆಗೆ ಬಳಸಬಹುದು. ಆದರೆ ನೆನಪಿಡಿ, ಅದನ್ನು ನೀರು ಮತ್ತು ತೇವಾಂಶದಿಂದ ದೂರವಿಡಬೇಕು.

ಇದನ್ನೂ ಓದಿ: Onion Oil Benefits For Hairs: ಕೂದಲಿಗೆ ಈರುಳ್ಳಿ ಎಣ್ಣೆಯನ್ನು ಬಳಸಿ ಈ ರೀತಿ ಪ್ರಯೋಜನ ಪಡೆಯಿರಿ

3. ಸಕ್ಕರೆ :
ಉಪ್ಪಿನಂತೆ, ಸಕ್ಕರೆಯ (sugar) ಕೊರತೆಯೂ ನಿಮ್ಮ ರುಚಿಯನ್ನು ಹಾಳು ಮಾಡುತ್ತದೆ. ಗಾಳಿಯಾಡದ ಡಬ್ಬದಲ್ಲಿ ಹಾಕಿ ಸಕ್ಕರೆಯನ್ನು ಶೇಖರಿಸಿಟ್ಟರೆ ಒಂದು ವರ್ಷದವರೆಗೆ ಇಡಬಹುದು. ಒಂದು ವರ್ಷದ ನಂತರವೂ ಅದರ ರುಚಿಯಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ. 

4. ಬಿಳಿ ಅಕ್ಕಿ : 
ಬಿಳಿ ಅಕ್ಕಿಯಲ್ಲಿ (white rice) ಫೈಬರ್ ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ. ಇದು ಆರೋಗ್ಯಕ್ಕೂ ಒಳ್ಳೆಯದು. ಅಕ್ಕಿಯನ್ನು ಕೂಡಾ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ, ದೀರ್ಘಕಾಲದವರೆಗೆ ಶೇಖರಿಸಿ ಇಡಬಹುದು.  ಹೀಗೆ  ಮಾಡುವುದರಿಂದ, ಅದರ ರುಚಿ ದೀರ್ಘಕಾಲದವರೆಗೆ ಬದಲಾಗುವುದಿಲ್ಲ.

ಇದನ್ನೂ ಓದಿ: face hair removal tips:ಮುಖದ ಮೇಲಿನ ಕೂದಲಿನ ಸಮಸ್ಯೆಗೆ ಈ ಸುಲಭ ಪರಿಹಾರ ಟ್ರೈ ಮಾಡಿ

5. ವಿನೆಗರ್ :
ಈ ಪಟ್ಟಿಯಲ್ಲಿ ಐದನೇ ವಿಷಯ ವಿನೆಗರ್. ಇದನ್ನು ದೀರ್ಘಕಾಲದವರೆಗೆ ಇಟ್ಟರು  ಹಾಳಾಗುವುದಿಲ್ಲ.  ಅವುಗಳನ್ನು ಫ್ರಿಜ್ ಹೊರಗೆ ಇಟ್ಟುಕೊಂಡರೂ ಸಹ, ಅವು ವರ್ಷಗಳ ಕಾಲ ಉಳಿಯುತ್ತವೆ. ನೀವು ಬಿಳಿ ವಿನೆಗರ್, ಆಪಲ್ ವಿನೆಗರ್ ಮತ್ತು ಅಕ್ಕಿ ವಿನೆಗರ್ ಅನ್ನು ಬಹಳ ಸಮಯದವರೆಗೆ ಇಡಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News