Okra Water For Weight Loss : ಬೆಂಡೆಕಾಯಿ ಹೆಚ್ಚಿನ ಜನರು ತಿನ್ನಲು ಇಷ್ಟಪಡುವ ತರಕಾರಿ. ಬೆಂಡೆಕಾಯಿ ಪಲ್ಯ, ತಂಬಳಿ, ಹುಳಿ, ಸ್ಟಫ್ಡ್ ಭಿಂಡಿ ಹೀಗೆ ಅನೇಕ ರೀತಿಯಲ್ಲಿ ಈ ತರಕಾರಿಯನ್ನು ತಿನ್ನುತ್ತೇವೆ. ಆದರೆ ಯಾವತ್ತಾದರೂ ಬೆಂಡೆಕಾಯಿ ನೀರನ್ನು ಸೇವಿಸಿದ್ದೀರಾ?ಹೌದು,ಇದರ ನೀರು ಪೋಷಕಾಂಶಗಳಿಂದ ಸಮೃದ್ಧವಾಗಿದೆ.ಇದು ವಿಟಮಿನ್ ಸಿ,ವಿಟಮಿನ್ ಬಿ 6,ಫೈಬರ್,ಪ್ರೋಟೀನ್, ಪೊಟ್ಯಾಸಿಯಮ್, ಫೋಲೇಟ್ ಮತ್ತು ಮೆಗ್ನೀಸಿಯಮ್ ನಂಥಹ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ.


COMMERCIAL BREAK
SCROLL TO CONTINUE READING

ಇದು ಅಧಿಕ ಕೊಲೆಸ್ಟ್ರಾಲ್, ಮಧುಮೇಹ ಮತ್ತು ಜೀರ್ಣಕಾರಿ ಕಾಯಿಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.ಬೆಂಡೆಕಾಯಿ ನೀರನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬಂದರೆ ಹೃದಯ ಆರೋಗ್ಯವಾಗಿರುತ್ತದೆ.ಜೊತೆಗೆ, ಇದು ತೂಕ ನಷ್ಟದಲ್ಲಿಯೂ ಬಹಳ ಸಹಕಾರಿಯಾಗಿದೆ. ಪ್ರತಿನಿತ್ಯ ಇದನ್ನು ಸೇವಿಸುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ಹಠಮಾರಿ ಕೊಬ್ಬನ್ನು ಕರಗಿಸಬಹುದು.


ಇದನ್ನೂ ನೋಡಿ : ಈ ಸಣ್ಣ ಕಾಳನ್ನು ಊಟ, ತಿಂಡಿಯ ನಂತರ ಹೀಗೆ ಸೇವಿಸಿ !ತಕ್ಷಣ ಕಂಟ್ರೋಲ್ ಆಗುವುದು ಬ್ಲಡ್ ಶುಗರ್ !


ತೂಕ ನಷ್ಟಕ್ಕೆ ಬೆಂಡೆಕಾಯಿ ನೀರು ಹೇಗೆ ಪ್ರಯೋಜನಕಾರಿಯಾಗಿದೆ? :
ತೂಕ ನಷ್ಟಕ್ಕೆ ಬೆಂಡೆಕಾಯಿ ನೀರು ತುಂಬಾ ಪ್ರಯೋಜನಕಾರಿ. ಏಕೆಂದರೆ ಇದು ಕಡಿಮೆ ಕ್ಯಾಲೋರಿ ಆಹಾರವಾಗಿದೆ.100 ಗ್ರಾಂ ಬೆಂಡೆಕಾಯಿಯಲ್ಲಿ ಸುಮಾರು 30 ಕ್ಯಾಲೋರಿಗಳು ಕಂಡುಬರುತ್ತವೆ.ಇದಲ್ಲದೆ,ಇದರಲ್ಲಿ ಫೈಬರ್ ಹೇರಳವಾಗಿ ಇರುತ್ತದೆ. ಇದು ದೀರ್ಘಕಾಲದವರೆಗೆ ಹೊಟ್ಟೆಯನ್ನು ತುಂಬಲು ಸಹಾಯ ಮಾಡುತ್ತದೆ. ಬೆಂಡೆಕಾಯಿ ನೀರನ್ನು ಸೇವಿಸುವುದರ ಪರಿಣಾಮ ಪದೇ ಪದೇ ತಿನ್ನುವ ಹವ್ಯಾಸ ಕಡಿಮೆಯಾಗುತ್ತದೆ. ಅಲ್ಲದೆ, ಇದು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ಬರ್ನ್ ಮಾಡುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಂಡೆಕಾಯಿ ನೀರನ್ನು ಕುಡಿಯುವುದು ತ್ವರಿತ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.


ಬೆಂಡೆಕಾಯಿ ನೀರನ್ನು ಹೇಗೆ ತಯಾರಿಸುವುದು?:
ಬೆಂಡೆಕಾಯಿ ನೀರನ್ನು ತಯಾರಿಸಲು,ಮೊದಲು 6-7 ಮಧ್ಯಮ ಗಾತ್ರದ ಬೆಂಡೆಕಾಯಿಗಳನ್ನು ತೆಗೆದುಕೊಂಡು ಅವುಗಳ ತುದಿಯನ್ನು ಕತ್ತರಿಸಿ.ಈಗ ಎಲ್ಲಾ ಬೆಂಡೆಕಾಯಿಗಳನ್ನು ಎರಡು ಕಪ್ ನೀರಿನಲ್ಲಿ ನೆನೆಸಿ.ರಾತ್ರಿಯಿಡೀ ಈ ಬೆಂಡೆಕಾಯಿಗಳನ್ನು ಹಾಗೆಯೇ ಬಿಡಿ.ಮರುದಿನ ಬೆಳಿಗ್ಗೆ,ಆ ಬೆಂಡೆಕಾಯಿಗಳನ್ನು ಚೆನ್ನಾಗಿ ಹಿಸುಕಿ. ಈಗ ಈ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.


ಇದನ್ನೂ ನೋಡಿ : ಹಾಲಿನ ಜೊತೆ ಗುಲ್ಕಂದ್‌ ಬೆರೆಸಿ ಕುಡಿಯುವುದರ ಆರೋಗ್ಯ ಪ್ರಯೋಜನ


ಬೆಂಡೆಕಾಯಿ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕವನ್ನು ಕಳೆದುಕೊಳ್ಳಲು ಬಹಳಷ್ಟು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಕೊಬ್ಬನ್ನು ಸುಡುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಈ ಮೂಲಕ ತೂಕವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.