Tomato Health Benefits: ಹಲವು ಆರೋಗ್ಯ ಸಮಸ್ಯೆಗಳಿಗೆ ಈ ಹಣ್ಣು ತರಕಾರಿ ಒಂದು ವರದಾನ!

Health Benefits Of Tomato -  ಟೊಮೆಟೊ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಟೊಮ್ಯಾಟೊ ಸೇವಿಸುವುದರಿಂದ ಅದ್ಭುತವಾದ ಲಾಭಗಳು ಸಿಗುತ್ತವೆ (Amazing benefits of tomato). ನೀವು ಕೂಡ ಟೊಮ್ಯಾಟೊದಂತೆ ಕೆಂಪಾದ ಹಾಗೂ ಹೊಳೆಯುವ ತ್ವಚೆಯನ್ನು ಪಡೆಯಲು ಬಯಸುತ್ತಿದ್ದರೆ, ಪ್ರತಿದಿನ ಟೊಮೆಟೊಗಳನ್ನು ಸೇವಿಸಿ.(Health News In Kannada)  

Written by - Nitin Tabib | Last Updated : Mar 25, 2024, 11:08 PM IST
  • ಟೊಮೇಟೊ ತಿನ್ನುವುದಲ್ಲದೆ ಇದನ್ನು ಮುಖಕ್ಕೆ ಹಚ್ಚುವುದರಿಂದ ಮುಖ ಕಾಂತಿಯುತವಾಗುತ್ತದೆ.
  • ಇದಕ್ಕಾಗಿ ಟೊಮೇಟೊ ತಿರುಳನ್ನು ಮುಖಕ್ಕೆ ಉಜ್ಜಿ, ಹೊಳಪು ಪಡೆಯಿರಿ
  • ನಿತ್ಯ ಹಸಿ ಟೊಮೇಟೊ ತಿಂದರೆ ಮುಖದಲ್ಲಿ ಹೊಳಪು ಕಾಣಿಸಿಕೊಳ್ಳುತ್ತದೆ.
Tomato Health Benefits: ಹಲವು ಆರೋಗ್ಯ ಸಮಸ್ಯೆಗಳಿಗೆ ಈ ಹಣ್ಣು ತರಕಾರಿ ಒಂದು ವರದಾನ! title=

Amazing benefits of tomato: ಮನೆಯಲ್ಲಿ ತರಕಾರಿ ಮತ್ತು ದಾಲ್ ರುಚಿಯನ್ನು ಹೆಚ್ಚಿಸಲು ಬಳಸಲಾಗುವ ಟೊಮೆಟೊಗಳನ್ನು ತಿನ್ನುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಟೊಮೆಟೊ ಅನ್ನು ಕರ್ರಿ, ಬೆಳೆ, ಸಲಾಡ್‌, ಸೂಪ್‌ ಮತ್ತು ಚಟ್ನಿಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಟೊಮ್ಯಾಟೋ ತ್ವಚೆಯ ಆರೋಗ್ಯಕ್ಕೆ ತುಂಬಾ ಹಿತಕಾರಿ ಎಂದು ಪರಿಗಣಿಸಲಾಗಿದೆ. ಸೌಂದರ್ಯಕ್ಕಾಗಿ ಬಳಸುವ ಅನೇಕ ಮನೆಮದ್ದುಗಳಲ್ಲಿ ಇದನ್ನು ಬಳಸಲಾಗುತ್ತದೆ. ಅಷ್ಟೇ ಅಲ್ಲ, ಟೊಮೇಟೊವನ್ನು ಹಲವು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿಯೂ ಬಳಸುತ್ತಾರೆ. ಟೊಮೆಟೊ ವಿಟಮಿನ್ ಸಿ, ಲೈಕೋಪೀನ್, ವಿಟಮಿನ್ ಕೆ, ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಟೊಮೆಟೊ  ತೂಕ ಇಳಿಸಲು ಕೂಡ ಸಹಾಯ ಮಾಡುತ್ತದೆ. ಟೊಮ್ಯಾಟೋ ಸೇವನೆಯಿಂದ ಆಗುವ ಲಾಭಗಳೇನು ತಿಳಿದುಕೊಳ್ಳೋಣ ಬನ್ನಿ.(Health News In Kannada)

ಇದನ್ನೂ ಓದಿ-Bad Cholesterol ವಿರುದ್ಧ ಹೋರಾಡುವ ಶಕ್ತಿ ನೀಡುತ್ತವೆ ಈ ವಿಟಮಿನ್ ಡಿ ಯುಕ್ತ ಆಹಾರಗಳು!

ಟೊಮ್ಯಾಟೊ ತಿನ್ನುವುದರಿನ್ದಾಗುವ ಪ್ರಯೋಜನಗಳು
1- ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯದೆ ಮಾಗಿದ ಟೊಮೆಟೊವನ್ನು ಸೇವಿಸಿದರೆ, ಅದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
2- ರಿಕೆಟ್ಸ್‌ನಿಂದ ಬಳಲುತ್ತಿರುವ ಮಕ್ಕಳಿಗೆ ದಿನಕ್ಕೆ ಒಂದು ಲೋಟ ಟೊಮೆಟೊ ರಸವನ್ನು ನೀಡಬೇಕು. ಇದರಿಂದ ಅವರಿಗೆ ತುಂಬಾ ಪ್ರಯೋಜನ ಸಿಗುತ್ತದೆ. (Tomato Benefits For Rickets)
3- ಟೊಮೆಟೊ ತಿನ್ನುವುದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಉತ್ತಮವಾಗುತ್ತದೆ.
4- ತೂಕವನ್ನು ಇಳಿಕೆ ಮಾಡಿಕೊಳ್ಳಲು, ನೀವು ಟೊಮೆಟೊಗಳನ್ನು ಸೇವಿಸಿ. ನೀವು ಸಲಾಡ್‌ನಲ್ಲಿ ಟೊಮೆಟೊ ತಿನ್ನಬಹುದು ಅಥವಾ 1-2 ಗ್ಲಾಸ್ ಟೊಮೆಟೊ ರಸವನ್ನು ಕುಡಿಯಬಹುದು.(Tomato Juice For Weight Loss)
5- ಸಂಧಿವಾತದಿಂದ ತೊಂದರೆ ಇರುವವರು ಟೊಮೆಟೊವನ್ನು ಸೇವಿಸಬೇಕು. ಸೆಲರಿಯನ್ನು ಟೊಮೆಟೊ ರಸದೊಂದಿಗೆ ಬೆರೆಸಿ ಕುಡಿಯುವುದರಿಂದ ಪರಿಹಾರ ಸಿಗುತ್ತದೆ.
6- ಗರ್ಭಿಣಿಯಾಗಿದ್ದರೆ ನೀವು ಟೊಮೆಟೊ ಸೇವಿಸಬೇಕು. ಈ ಕಾರಣದಿಂದಾಗಿ ದೇಹವು ವಿಟಮಿನ್ ಸಿ ಅನ್ನು ಪಡೆಯುತ್ತದೆ ಮತ್ತು ಇದು ಗರ್ಭಾವಸ್ಥೆಯಲ್ಲಿ ದೇಹಕ್ಕೆ ತುಂಬಾ ಲಾಭಕಾರಿಯಾಗಿದೆ.
7- ಹೊಟ್ಟೆ ಹುಳುಗಳ ಸಮಸ್ಯೆ ಇದ್ದರೆ ಖಾಲಿ ಹೊಟ್ಟೆಯಲ್ಲಿ ಟೊಮೆಟೊವನ್ನು ಕರಿಮೆಣಸಿನೊಂದಿಗೆ ಬೆರೆಸಿ ತಿನ್ನುವುದು ಒಳ್ಳೆಯದು.
8- ನಿತ್ಯವೂ ಹಸಿ ಟೊಮೇಟೊ ತಿಂದರೆ ಮುಖದಲ್ಲಿ ಹೊಳಪು ಕಾಣಿಸಿಕೊಳ್ಳುತ್ತದೆ.
9- ಟೊಮೇಟೊ ತಿನ್ನುವುದಲ್ಲದೆ ಇದನ್ನು ಮುಖಕ್ಕೆ ಹಚ್ಚುವುದರಿಂದ ಮುಖ ಕಾಂತಿಯುತವಾಗುತ್ತದೆ. ಇದಕ್ಕಾಗಿ ಟೊಮೇಟೊ ತಿರುಳನ್ನು ಮುಖಕ್ಕೆ ಉಜ್ಜಿ, ಹೊಳಪು ಪಡೆಯಿರಿ. (tomato benefits for skin)
10- ಮಧುಮೇಹದಲ್ಲಿ ಟೊಮ್ಯಾಟೊ ತಿನ್ನುವುದು ಪ್ರಯೋಜನಕಾರಿಯಾಗಿದೆ ಮತ್ತು ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ. (Tomato Benefits for diabetes)

ಇದನ್ನೂ ಓದಿ-Obesity Home Remedies :ಬೊಜ್ಜು ಕಡಿಮೆ ಮಾಡಲು ಜಿಮ್ ಗೆ ಹೋಗಲು ಸಮಯವಿಲ್ಲವೇ? ಬೆಳಗ್ಗೆ ಈ ಒಂದು ಕೆಲಸ ಮಾಡಿ ಸಾಕು!

(Disclaimer- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News