Omicron Health Tips: ಪ್ರಪಂಚದಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿವೆ. ಭಾರತದಲ್ಲಿಯೂ ಸಕ್ರಿಯ ಪ್ರಕರಣಗಳ ಸಂಖ್ಯೆ 3 ಲಕ್ಷ ಮೀರಿದೆ. ವೈದ್ಯರು ಮತ್ತು ತಜ್ಞರು ಕರೋನಾ ಹೊಸ ರೂಪಾಂತರ ಓಮಿಕ್ರಾನ್ ಅನ್ನು ಹೆಚ್ಚು ಸಾಂಕ್ರಾಮಿಕ ಎಂದು ವಿವರಿಸುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಓಮಿಕ್ರಾನ್‌ನ ಯಾವುದೇ ರೋಗಲಕ್ಷಣವನ್ನು ಕಂಡರೆ, ಗಾಬರಿ ಮತ್ತು ಭಯ ಪಡುವ ಬದಲಿಗೆ, ಇಲ್ಲಿ ನೀಡಲಾದ ಕೆಲವು ಪರಿಹಾರಗಳನ್ನು ಪ್ರಯತ್ನಿಸಿ. ಇದು ತ್ವರಿತ ಪರಿಹಾರವನ್ನು ನೀಡುತ್ತದೆ. 


COMMERCIAL BREAK
SCROLL TO CONTINUE READING

ಇಲ್ಲಿ ಕೆಳಗೆ ನೀಡಲಾದ ಕ್ರಮಗಳನ್ನು ತಜ್ಞರು ಕರೋನಾ ಮಣಿಸುವಲ್ಲಿ ಪರಿಣಾಮಕಾರಿ  ಎಂದು ವಿವರಿಸಿದ್ದಾರೆ:-
1. ನೀವು ರೋಗಲಕ್ಷಣಗಳನ್ನು ಕಂಡ ತಕ್ಷಣ ಪರೀಕ್ಷೆಯನ್ನು ಮಾಡಿ:

ನೀವು ಓಮಿಕ್ರಾನ್ ರೋಗಲಕ್ಷಣಗಳನ್ನು (Omicron Symptoms) ಕಂಡ ತಕ್ಷಣ ಮೊದಲು ಪರೀಕ್ಷಿಸಿ. ವಿಶೇಷವಾಗಿ ನೀವು ಕಿಕ್ಕಿರಿದ ಜನಸಮೂಹವಿರುವ ಸ್ಥಳದಿಂದ ಬಂದಿದ್ದರೆ ಅಂತಹ ಪರಿಸ್ಥಿತಿಯಲ್ಲಿ, ಪರೀಕ್ಷೆಯನ್ನು ಮಾಡಲು ವಿಳಂಬ ಮಾಡಬೇಡಿ.


ಇದನ್ನೂ ಓದಿ- ಪ್ರತಿನಿತ್ಯ ಅರಿಶಿನ ಹಾಲು ಕುಡಿಯುತ್ತೀರಾ? ಮೊದಲು ಈ ಸುದ್ದಿ ಓದಿ


2. ನಿಮ್ಮನ್ನು ಕ್ವಾರಂಟೈನ್ ಮಾಡಿಕೊಳ್ಳಿ:
ಕರೋನಾ ಪರೀಕ್ಷೆಯನ್ನು ಮಾಡಿದ ನಂತರ ಪಾಸಿಟಿವ್ ಎಂದು ಕಂಡುಬಂದರೆ, ಮೊದಲು ನೀವು ನಿಮ್ಮನ್ನು ಕ್ವಾರಂಟೈನ್ ಮಾಡಿಕೊಳ್ಳಬೇಕು. ಇದರಿಂದ ಮನೆಯಲ್ಲಿ ಇತರರಿಗೆ ಸೋಂಕು ತಗುಲುವ ಅಪಾಯ ಕಡಿಮೆ ಆಗಲಿದೆ.


3. ಆರೋಗ್ಯಕರ ಆಹಾರ ಮತ್ತು ಔಷಧ:
ಕೋವಿಡ್ ಪಾಸಿಟಿವ್ (Covid Positive) ಇರುವ ವ್ಯಕ್ತಿಗೆ ಸಮತೋಲಿತ ಆಹಾರ ಸೇವಿಸಲು ಸಲಹೆ ನೀಡಲಾಗುತ್ತದೆ. ಆಹಾರದೊಂದಿಗೆ ಹಣ್ಣುಗಳು, ತಾಜಾ ರಸಗಳು ಇತ್ಯಾದಿಗಳನ್ನು ತೆಗೆದುಕೊಳ್ಳುವುದು ಅವಶ್ಯಕ, ಇದರಿಂದ ನಿಮ್ಮ ರೋಗನಿರೋಧಕ ಶಕ್ತಿ ನೈಸರ್ಗಿಕವಾಗಿ ಹೆಚ್ಚಾಗುತ್ತದೆ. ಇದರೊಂದಿಗೆ ವೈದ್ಯರು ಸೂಚಿಸಿದ ಔಷಧಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಿ.


ಇದನ್ನೂ ಓದಿ- Papaya Side Effects: ಇಂತಹ ಜನರು ಪಪ್ಪಾಯಿ ಸೇವನೆಯಿಂದ ದೂರ ಉಳಿಯಬೇಕು, ಲಾಭದ ಬದಲು ಹಾನಿ ಸಾಧ್ಯತೆ


4. ಸ್ಟೀಮ್ ತೆಗೆದುಕೊಳ್ಳಿ:
ಹಬೆಯನ್ನು ತೆಗೆದುಕೊಳ್ಳುವುದರಿಂದ ಮೂಗು ಮತ್ತು ಗಂಟಲಿನಲ್ಲಿ ಸಂಗ್ರಹವಾಗಿರುವ ಲೋಳೆಯು ತೆರವುಗೊಳ್ಳುತ್ತದೆ ಎಂದು ವೈದ್ಯರು ನಂಬುತ್ತಾರೆ. ಇದರಿಂದ ಸಮಸ್ಯೆ ಅರ್ಧದಷ್ಟು ಕಡಿಮೆಯಾಗುತ್ತದೆ. ನೀವು ಕರೋನಾ ಪೊಸಿಟಿಸ್ ಹೊಂದಿರುವಾಗ ಮೊದಲು ಹಬೆಯನ್ನು ಪ್ರಾರಂಭಿಸಿ. ಇದು ನಿಮಗೆ ಶೀಘ್ರದಲ್ಲೇ ಪರಿಹಾರವನ್ನು ನೀಡುತ್ತದೆ.


ಇವೆಲ್ಲದರ ಜೊತೆಗೆ ಕರೋನಾ ಲಕ್ಷಣಗಳಿರಲಿ ಅಥವಾ ಇಲ್ಲದಿರಲಿ ಮನೆಯಿಂದ ಹೊರ ಹೋಗುವಾಗ ತಪ್ಪದೇ ಮಾಸ್ಕ್ ಧರಿಸಿ, ಆಗಾಗ್ಗೆ ನಿಮ್ಮ ಕೈಗಳನ್ನು ಸ್ಯಾನಿಟೈಜ್ ಮಾಡಿಕೊಳ್ಳಿ. ಜೊತೆಗೆ ಕರೋನಾ ತಡೆಗಟ್ಟುವ ಸಲುವಾಗಿ ಸರ್ಕಾರ ಜಾರಿಗೆ ತಂದಿರುವ ಕೋವಿಡ್ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.