Omicron Infection: ಓರ್ವ ವ್ಯಕ್ತಿಗೆ ಎಷ್ಟು ಬಾರಿ Omicron ಸೋಂಕು ತಗುಲಬಹುದು? ಉತ್ತರ ಬೆಚ್ಚಿಬೀಳಿಸುವಂತಿದೆ

Omicron Variant Alert - ಹೆಚ್ಚುತ್ತಿರುವ ಕರೋನಾ ವೈರಸ್ ಪ್ರಕರಣಗಳಿಗೆ ಕಾರಣವಾಗಿರುವ ಓಮಿಕ್ರಾನ್ ರೂಪಾಂತರಿ ಬಗ್ಗೆ ಹೊಸ ಮಾಹಿತಿಯೊಂದು ಬಹಿರಂಗಗೊಂಡಿದ್ದು, ಇದು ಆತಂಕಕಾರಿಯಾಗಿದೆ.

Written by - Nitin Tabib | Last Updated : Jan 23, 2022, 02:00 PM IST
  • ಓಮಿಕ್ರಾನ್ ಸೋಂಕಿನ ಕುರಿತು ಈ ಮಹತ್ವದ ಸಂಗತಿ ನಿಮಗೂ ತಿಳಿದಿರಲಿ.
  • ಓರ್ವ ವ್ಯಕ್ತಿಗೆ ಎರಡು ಬಾರಿ ಸೋಂಕು ತಗುಲುವ ಸಾಧ್ಯತೆ ಇದೆ.
  • ಪಾರಾಗುವ ಉಪಾಯ ಇಲ್ಲಿವೆ.
Omicron Infection: ಓರ್ವ ವ್ಯಕ್ತಿಗೆ ಎಷ್ಟು ಬಾರಿ Omicron ಸೋಂಕು ತಗುಲಬಹುದು? ಉತ್ತರ ಬೆಚ್ಚಿಬೀಳಿಸುವಂತಿದೆ title=
Omicron Variant Alert (File Photo)

ನವದೆಹಲಿ: Omicron Can Infect Twice - ದೇಶದಲ್ಲಿ ಕೊರೊನಾ (Covid-19) ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಪ್ರತಿದಿನ ಬರುತ್ತಿರುವ ಪ್ರಕರಣಗಳ ಸಂಖ್ಯೆ ಮೂರೂವರೆ ಲಕ್ಷ ಗಡಿ ದಾಟಿದೆ. ಈ ಹೆಚ್ಚುತ್ತಿರುವ ಪ್ರಕರಣಗಳ ಹಿಂದಿನ ಕಾರಣವೆಂದರೆ ಕೊರೊನಾವೈರಸ್‌ನ ಓಮಿಕ್ರಾನ್ (Omicron Variant Infection) ರೂಪಾಂತರ. ಸೋಂಕನ್ನು ಹರಡುವ ವಿಷಯದಲ್ಲಿ ಇದು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಅಪಾಯಕಾರಿಯಾಗಿದ್ದು, ಡೆಲ್ಟಾ ರೂಪಾಂತರಿ ಇದುವರೆಗೆ ಅಪಾರ ಹಾನಿಯನ್ನುಂಟುಮಾಡಿದೆ. ಓಮಿಕ್ರಾನ್ ರೂಪಾಂತರದ ದೊಡ್ಡ ಸಮಸ್ಯೆಯೆಂದರೆ ಅದು ಅತ್ಯಂತ ಸುಲಭವಾಗಿ ಪ್ರತಿಕಾಯಗಳನ್ನು ತಪ್ಪಿಸುತ್ತದೆ. ಈ ಪ್ರತಿಕಾಯಗಳು ವ್ಯಾಕ್ಸಿನೇಷನ್ ನಿಂದ ನಿರ್ಮಾಣಗೊಂಡಿರಾಲಿ ಅಥವಾ ಹಳೆಯ ಕರೋನಾ ಸೋಂಕಿನಿಂದ ತಯಾರಾದ ಪ್ರತಿಕಾಯಗಳಾಗಿರಲಿ, ಇದು ಎರಡನ್ನು ಕೂಡ ಸುಲಭವಾಗಿ ತಪ್ಪಿಸುತ್ತದೆ.

ಒಂದೇ ವ್ಯಕ್ತಿ ಎಷ್ಟು ಬಾರಿ ಓಮಿಕ್ರಾನ್ ಸೋಂಕಿಗೆ ಒಳಗಾಗಬಹುದು?
ಕರೋನವೈರಸ್‌ನ ಮೊದಲ ಮತ್ತು ಎರಡನೇ ಅಲೆಗಳಲ್ಲಿ, ಒಂದೇ ವ್ಯಕ್ತಿಗೆ ಎರಡು ಬಾರಿ ಕರೋನಾ ಸೋಂಕು ತಗುಲಿರುವ ಅನೇಕ ಪ್ರಕರಣಗಳಿವೆ. ಒಂದೇ ವ್ಯಕ್ತಿಗೆ ಎರಡು ಬಾರಿ ಡೆಲ್ಟಾ ಸೋಂಕು ತಗುಲಿದ ಇಂತಹ ಹಲವು ಪ್ರಕರಣಗಳೂ ಇವೆ. ಓಮಿಕ್ರಾನ್ ರೂಪಾಂತರವು ವ್ಯಕ್ತಿಯನ್ನು ಎಷ್ಟು ಬಾರಿ ಸೋಂಕು ಮಾಡುತ್ತದೆ ಎಂಬುದು ಈಗಿರುವ ಪ್ರಶ್ನೆಯಾಗಿದೆ. ವರದಿಗಳ ಪ್ರಕಾರ, ಓಮಿಕ್ರಾನ್‌ನಲ್ಲಿ ಮರು-ಸೋಂಕಿನ ಅಪಾಯವು ಡೆಲ್ಟಾ ರೂಪಾಂತರಕ್ಕಿಂತ 4 ಪಟ್ಟು ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಒಂದೇ ವ್ಯಕ್ತಿಗೆ 2 ಬಾರಿ ಓಮಿಕ್ರಾನ್ ಸೋಂಕು ಬರುವ ಸಾಧ್ಯತೆಯು ಸುಲಭವಾಗಿ ಸೃಷ್ಟಿಯಾಗುತ್ತದೆ.

ಇದನ್ನೂ ಓದಿ-Toung : ನಿಮ್ಮ ನಾಲಿಗೆ ಕಪ್ಪಾಗದಿದ್ದರೆ, ಅದು ಈ ಭಯಾನಕ ಕಾಯಿಲೆಯ ಸಂಕೇತ!

ಓಮಿಕ್ರಾನ್ ಪ್ರತಿಕಾಯಗಳನ್ನು ತಪ್ಪಿಸುವ ಸಾಮರ್ಥ್ಯವನ್ನು ಹೊಂದಿರುವುದರಿಂದ, ಈ ರೂಪಾಂತರವು ಅವುಗಳನ್ನು ಮರು-ಸೋಂಕು ಮಾಡುವುದು ತುಂಬಾ ಸುಲಭ. ಆದ್ದರಿಂದ, ಲಸಿಕೆಯ ಎರಡೂ ಪ್ರಮಾಣಗಳನ್ನು ತೆಗೆದುಕೊಂಡವರೆ ಆಗಿರಲಿ ಅಥವಾ ಅವರು ಈಗಾಗಲೇ ಕೊರೊನಾ ಅಥವಾ ಓಮಿಕ್ರಾನ್ ಸೋಂಕಿಗೆ ಗುರಿಯಾದವರೇ ಆಗಿರಲಿ, ಅವರು ಸೋಂಕಿಗೆ ಪುನಃ ಗುರಿಯಾಗುತ್ತಿದ್ದಾರೆ. 

ಇದನ್ನೂ ಓದಿ-Benefits Of Ghee-Coffee: ತುಪ್ಪ ಬೆರೆಸಿದ ಕಾಫಿ ಸೇವನೆಯಿಂದ ನಿಮ್ಮ ದಿನ ಆರಂಭಿಸಿ, ಸಿಗಲಿವೆ ಹಲವು ಲಾಭಗಳು

ಓಮಿಕ್ರಾನ್ ವಿರುದ್ಧ ರಕ್ಷಣೆ ಪಡೆಯುವ ವಿಧಾನಗಳು ಇಲ್ಲಿವೆ
ಸರ್ಕಾರ ಹೊರಡಿಸಿರುವ ಸಲಹೆಯ ಪ್ರಕಾರ, ಓಮಿಕ್ರಾನ್ ಅನ್ನು ತಪ್ಪಿಸಲು ಮನೆಯಿಂದ ಕಡಿಮೆ ಹೊರಬರುವುದು ಉತ್ತಮ. ನೀವು ಹೊರಗೆ ಹೋದಾಗಲೆಲ್ಲಾ ಡಬಲ್ ಮಾಸ್ಕ್ ಬಳಸಿ. ಆಗಾಗ ಕೈಗಳನ್ನು ಸ್ಯಾನಿಟೈಜ್ ಮಾಡಿಕೊಳ್ಳಿ. ಆಹಾರ ಸೇವಿಸುವ ಮೊದಲು ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆಯಿರಿ. ನಿಮ್ಮ ಕೈಗಳಿಂದ ನಿಮ್ಮ ಕಣ್ಣು, ಬಾಯಿ ಅಥವಾ ಮುಖವನ್ನು ಮತ್ತೆ ಮತ್ತೆ ಮುಟ್ಟದಿರಲು ಪ್ರಯತ್ನಿಸಿ.

ಇದನ್ನೂ ಓದಿ-Omicron Variant: ಆಯುರ್ವೇದಲ್ಲಿ ಹೇಳಿರುವ ಈ 5 ವಿಷಯಗಳು ಕೊರೊನಾದಿಂದ ರಕ್ಷಿಸುತ್ತವೆ, ಏನೆಂದು ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News