ನವದೆಹಲಿ : Omicron Symptoms in Kids : ಕರೋನಾದಿಂದಾಗಿ (Coronavirus) ಇಡೀ ಜಗತ್ತೇ ತತ್ತರಿಸಿದೆ.  ಮಕ್ಕಳಲ್ಲೂ ಕರೋನಾ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಸೋಂಕಿತ ಮಕ್ಕಳಲ್ಲಿ ಕೆಲವು ರೋಗಲಕ್ಷಣಗಳು ಕಂಡುಬರುತ್ತವೆ.  ಇದು ನರವಿಜ್ಞಾನಕ್ಕೆ ಸಂಬಂಧಿಸಿದ್ದಾಗಿದೆ  ( Neurological Symptoms of covid infection). ಆಸ್ಪತ್ರೆಗೆ ದಾಖಲಾದ 44 ಪ್ರತಿಶತದಷ್ಟು ಕರೋನಾ-ಸೋಂಕಿತ ಮಕ್ಕಳು ಕೋವಿಡ್ (COVID) ಸೋಂಕಿನ Neurological Symptoms ಹೊಂದಿದ್ದಾರೆ ಎಂದು ಪಿಟ್ಸ್‌ಬರ್ಗ್ ವಿಶ್ವವಿದ್ಯಾನಿಲಯದ ಅಧ್ಯಯನ ವರದಿಯು ಹೇಳಿದೆ.  ಇತರ ರೋಗಿಗಳಿಗಿಂತ ಹೋಲಿಸಿದರೆ ಈ ಮಕ್ಕಳಿಗೆ ಹೆಚ್ಚಿನ ಕಾಳಜಿಯ ಅಗತ್ಯವಿದೆ. ಈ ಅಧ್ಯಯನದ ಫಲಿತಾಂಶಗಳನ್ನು ಪೀಡಿಯಾಟ್ರಿಕ್ ನ್ಯೂರಾಲಜಿ ಜರ್ನಲ್‌ನಲ್ಲಿ (journal pediatric neurology) ಪ್ರಕಟಿಸಲಾಗಿದೆ. 


COMMERCIAL BREAK
SCROLL TO CONTINUE READING

ಸೋಂಕಿತ ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ಕರೋನಾ (Coronavirus) ಪರಿಣಾಮ ಬೀರುತ್ತದೆ ಎನ್ನುವುದು ಅಧ್ಯಯನದಲ್ಲಿ ಸ್ಪಷ್ಟವಾಗಿ ಸಾಬೀತಾಗಿದೆ.  ಕೋವಿಡ್ (COVID) ಸೋಂಕಿನ ಮಕ್ಕಳಲ್ಲಿ Neurological Symptoms ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗಿದೆ. 15 ಕ್ಕಿಂತ ದೊಡ್ಡ ವಯಸ್ಸಿನ ಮಕ್ಕಳಿಗೆ ವ್ಯಾಕ್ಸಿನೇಷನ್ (Vaccination) ಪ್ರಾರಂಭವಾಗಿದೆ.  . ಆದರೆ ಇದಕ್ಕಿಂತ ಕಿರಿಯ ಮಕ್ಕಳು ಜಾಗರೂಕರಾಗಿರಬೇಕು ಎಂದು ಹೇಳಲಾಗಿದೆ.  ಮಕ್ಕಳಲ್ಲಿ ಈ ಕೆಳಗಿನ ರೋಗ ಲಕ್ಷಣಗಳು (COVID Symptoms) ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ. ಅದನ್ನು ಗಂಭೀರವಾಗಿ ಪರಿಗಣಿಸಿ, ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ನೀಡಿ. 


ಇನ್ನೂ ಓದಿ : ಪ್ರತಿನಿತ್ಯ ಅರಿಶಿನ ಹಾಲು ಕುಡಿಯುತ್ತೀರಾ? ಮೊದಲು ಈ ಸುದ್ದಿ ಓದಿ


ಜ್ವರದೊಂದಿಗೆ ತಲೆನೋವು:
ಮಗು ಜ್ವರದಿಂದ ಬಳಲುತ್ತಿದ್ದು, ತಲೆನೋವೂ ಎಂದು ಹೇಳುತ್ತಿದ್ದರೆ, ಆದಷ್ಟು ಬೇಗ ಕೋವಿಡ್ ಪರೀಕ್ಷೆ (COVID Test) ಮಾಡಿಸಿಕೊಳ್ಳಿ. ಕರೋನಾ ಸೋಂಕಿತ ರೋಗಿಗಳಿಗೆ ತಲೆಯ ಹಿಂಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. 


ಮೂಗು ಸೋರುವುದು , ಒಣ ಕೆಮ್ಮು ಮತ್ತು ಗಂಟಲು ನೋವು :
ಮಗುವು ಶೀತ, ಒಣ ಕೆಮ್ಮು (Dry cough) ಮತ್ತು ಗಂಟಲು ನೋವು ಎಂದು ಹೇಳುತ್ತಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ. ಇದು ಕೋವಿಡ್ ಸೋಂಕಿನ ಆರಂಭಿಕ ಲಕ್ಷಣವಾಗಿರಬಹುದು. ಹೀಗಿದ್ದಾಗ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಮತ್ತು ಕೊವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಿ. 
 
ಜ್ವರ ಮತ್ತು ಮೈ ಕೈ ನೋವು:

ಮಕ್ಕಳಲ್ಲಿ ಕಂಡುಬರುವ COVID-19 ನ ಲಕ್ಷಣಗಳಲ್ಲಿ ಇದೂ ಕೂಡ ಒಂದು. ಮಗುವಿಗೆ ಜ್ವರ (Fever) ಮತ್ತು ಮೈ ಕೈ ನೋವು ಇದ್ದರೆ, ಕಾಳಜಿ ವಹಿಸಿ. ಅದು ಕೊರೊನಾ (Coronavirus) ಸೋಂಕು ಆಗಿರಬಹುದು. ಇದನ್ನು ಸಾಮಾನ್ಯ ಜ್ವರವೆಂದು ಪರಿಗಣಿಸಿ, ಅಂತಹ ಯಾವುದೇ ಔಷಧವನ್ನು ನೀಡಬೇಡಿ. ಕೂಡಲೇ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆಯ ಮೇರೆಗೆ ಮಾತ್ರ ಔಷಧಿಗಳನ್ನು ತೆಗೆದುಕೊಳ್ಳಿ.


ಇದನ್ನೂ ಓದಿ : Papaya Side Effects: ಇಂತಹ ಜನರು ಪಪ್ಪಾಯಿ ಸೇವನೆಯಿಂದ ದೂರ ಉಳಿಯಬೇಕು, ಲಾಭದ ಬದಲು ಹಾನಿ ಸಾಧ್ಯತೆ


ಮಾನಸಿಕ ಸಮತೋಲನದಲ್ಲಿ ಸಮಸ್ಯೆ : 
ಮೇಲಿನ ರೋಗಲಕ್ಷಣಗಳು ಮಕ್ಕಳಲ್ಲಿ ಕಾಣಿಸಿಕೊಂಡರೆ, ಮಗುವಿನ ಮೆದುಳಿನ ಸಮತೋಲನವು ಮೊದಲಿಗಿಂತ ವಿಭಿನ್ನವಾಗಿರುತ್ತದೆ. ಆಗಲೂ ಈ ವಿಷಯವನ್ನು ನಿರ್ಲಕ್ಷಿಸಬೇಡಿ. ಕೊರೊನಾ ವೈರಸ್ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಪರಿಸ್ಥಿತಿ ಹದಗೆಡುವ ಮೊದಲು ವೈದ್ಯರನ್ನು ಸಂಪರ್ಕಿಸಿ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.