COVID ನಿಂದ ಚೇತರಿಸಿಕೊಂಡ ನಂತರ ಈ ತಪ್ಪನ್ನು ಮಾಡದಿರಿ, 68 ದಿನಗಳವರೆಗೆ ಉಳಿಯಲಿದೆ ಈ ಲಕ್ಷಣಗಳು

Post COVID-19 Diet:ಕೋವಿಡ್-19 ಸೋಂಕು ದೇಹಕ್ಕೆ ಅನೇಕ ಹಾನಿಗಳನ್ನು ಉಂಟುಮಾಡುತ್ತದೆ. ಸೋಂಕಿನಿಂದ ಚೇತರಿಸಿಕೊಂಡ ನಂತರವೂ, ಅದರ ಪರಿಣಾಮವು ತಿಂಗಳುಗಳವರೆಗೆ ಇರುತ್ತದೆ.

Written by - Ranjitha R K | Last Updated : Jan 24, 2022, 01:53 PM IST
  • ಕೋವಿಡ್ ನಿಂದ ಚೇತರಿಸಿಕೊಂಡ ನಂತರದ ಆಹಾರಕ್ರಮ ಗೊತ್ತಿರಲಿ
  • ಕೋವಿಡ್‌ನಿಂದ ಚೇತರಿಸಿಕೊಂಡ ಬಳಿಕ ಈ ವಸ್ತುಗಳ ಸೇವನೆ ಬೇಡ
  • ದೌರ್ಬಲ್ಯ-ಆಯಾಸ ತಿಂಗಳುಗಟ್ಟಲೆ ಬೆನ್ನು ಬಿಡುವುದಿಲ್ಲ
 COVID ನಿಂದ ಚೇತರಿಸಿಕೊಂಡ ನಂತರ ಈ ತಪ್ಪನ್ನು ಮಾಡದಿರಿ, 68 ದಿನಗಳವರೆಗೆ ಉಳಿಯಲಿದೆ ಈ ಲಕ್ಷಣಗಳು  title=
ಕೋವಿಡ್ ನಿಂದ ಚೇತರಿಸಿಕೊಂಡ ನಂತರದ ಆಹಾರ ಕ್ರಮ ಗೊತ್ತಿರಲಿ (file photo)

ನವದೆಹಲಿ : Post COVID-19 Diet : ಕೋವಿಡ್-19 ಸೋಂಕು ದೇಹಕ್ಕೆ ಅನೇಕ ಹಾನಿಗಳನ್ನು ಉಂಟುಮಾಡುತ್ತದೆ. ಸೋಂಕಿನಿಂದ ಚೇತರಿಸಿಕೊಂಡ ನಂತರವೂ, ಅದರ ಪರಿಣಾಮವು ತಿಂಗಳುಗಳವರೆಗೆ ಇರುತ್ತದೆ. ಕೋವಿಡ್ (covid) ಚೇತರಿಕೆಯ ನಂತರದ ಬಗ್ಗೆ ಹೇಳುವುದಾದರೆ, ಜನರು ಕೊವಿಡ್ ನಿಂದ ಚೇತರಿಕೆ ಕಂಡ ನಂತರವೂ, ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲವರಿಗೆ ದೀರ್ಘಕಾಲದವರೆಗೆ ದೌರ್ಬಲ್ಯ ಕಾಡಿದರೆ, ಇನ್ನು ಕೆಲವರು ಹಸಿವಿನ ಕೊರತೆ, ಅತಿಯಾದ ಕೂದಲು ಉದುರುವಿಕೆ ಮುಂತಾದ ಸಮಸ್ಯೆಗಳನ್ನು (Post Covid Problems) ಎದುರಿಸುತ್ತಿದ್ದಾರೆ. ಹೀಗಿರುವಾಗ ಸರಿಯಾದ ಆಹಾರವನ್ನು ತೆಗೆದುಕೊಳ್ಳದಿದ್ದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಬಹುದು. 

68 ದಿನಗಳವರೆಗೆ ಇರುತ್ತದೆ  ರೋಗಲಕ್ಷಣಗಳು :
ಸಂಶೋಧನೆಯ ಪ್ರಕಾರ, ಕರೋನ ವರದಿಯು ನೆಗೆಟಿವ್ ಬಂದ ನಂತರವೂ ರೋಗಲಕ್ಷಣಗಳು 68 ದಿನಗಳವರೆಗೆ ಇರುತ್ತವೆ. ಸೋಂಕಿನಿಂದ (COVID-19) ಚೇತರಿಕೆ ಕಂಡ ನಂತರ, ದೇಹವು ಹಿಂದಿನ ಸ್ಥಿತಿಗೆ ಬರಲು ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಉತ್ತಮ ಆಹಾರ ಜೀವನಶೈಲಿಯನ್ನು (Lifestyle) ಅನುಸರಿಸುವುದು ಅತ್ಯಂತ ಅವಶ್ಯಕವಾಗಿರುತ್ತದೆ. ಇಲ್ಲವಾದಲ್ಲಿ ಕೋವಿಡ್‌ನಿಂದ (Coronavirus) ಚೇತರಿಸಿಕೊಂಡ ಬಹಳ ಸಮಯದ ನಂತರವೂ, ವ್ಯಕ್ತಿಯು ದೌರ್ಬಲ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. 

ಇದನ್ನೂ ಓದಿ :  ಪ್ರತಿನಿತ್ಯ ಅರಿಶಿನ ಹಾಲು ಕುಡಿಯುತ್ತೀರಾ? ಮೊದಲು ಈ ಸುದ್ದಿ ಓದಿ

ಕೋವಿಡ್‌ನಿಂದ ಚೇತರಿಸಿಕೊಂಡ (Post COVID-19 Diet) ನಂತರ, ಕೆಲವು ತಿಂಗಳುಗಳವರೆಗೆ ಹೊರಗಿನ ಆಹಾರವನ್ನು ಸೇವಿಸುವುದನ್ನು ತಪ್ಪಿಸುವುದು ಒಳ್ಳೆಯದು. ಹೊರಗಿನಿಂದ ತರುವ ಆಹಾರದಲ್ಲಿ  ಬಣ್ಣಗಳು, ರಾಸಾಯನಿಕಗಳು ಅಥವಾ ಕಲಬೆರಕೆ ವಸ್ತುಗಳು ಸೇರಿರಬಹುದು. ಇದು ಚೇತರಿಕೆಯ ಹಂತದಲ್ಲಿ ನಿಮಗೆ ಹಾನಿ ಉಂಟು ಮಾಡಬಹುದು. 

ಪ್ಯಾಕೆಟ್ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ. ಈ ಆಹಾರಗಳು  ಹೆಚ್ಚು ಕಾಲ ಕೆಡದಂತೆ ಸಂಸ್ಕರಿಸಲು ಇದಕ್ಕೆ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಈ ಸಂಸ್ಕರಿಸಿದ ಆಹಾರಗಳು (Processed food) ಆರೋಗ್ಯಕ್ಕೆ ಬಹಳಷ್ಟು ಹಾನಿಯನ್ನು ಉಂಟುಮಾಡಬಹುದು. 

ಇದನ್ನೂ ಓದಿ : Papaya Side Effects: ಇಂತಹ ಜನರು ಪಪ್ಪಾಯಿ ಸೇವನೆಯಿಂದ ದೂರ ಉಳಿಯಬೇಕು, ಲಾಭದ ಬದಲು ಹಾನಿ ಸಾಧ್ಯತೆ

ಕುಕೀಗಳು, ಕೇಕ್ ಗಳು, ಚಾಕೊಲೇಟ್ ಗಳು (Chocolate),  ಕಾರ್ಬೊನೇಟೆಡ್ ಪಾನೀಯಗಳು, ಸಂಸ್ಕರಿಸಿದ ಹಣ್ಣಿನ ರಸಗಳು ((Processed fruit juice) ಅಥವಾ ಬಹಳಷ್ಟು ಸಕ್ಕರೆ ಹೊಂದಿರುವ ವಸ್ತುಗಳನ್ನು ತಿನ್ನಬೇಡಿ. ಕೋವಿಡ್ ಸಮಯದಲ್ಲಿ ನೀಡಿದ ಔಷಧಿಯಿಂದಾಗಿ, ಅನೇಕ ಜನರ ರಕ್ತದಲ್ಲಿನ ಸಕ್ಕರೆ (Blood Sugar level) ಮಟ್ಟವು ಹೆಚ್ಚಾಗಿರುತ್ತದೆ. ಈ ಕಾರಣದಿಂದಾಗಿ, ಹೆಚ್ಚು ಸಕ್ಕರೆ ಹೊಂದಿರುವ ವಸ್ತುಗಳನ್ನು ತಿನ್ನುವುದು ಹಾನಿಕಾರಕವಾಗಿ ಪರಿಣಮಿಸಬಹುದು. 

ಮನೆಯಲ್ಲಿಯೇ ತಯಾರಿಸಿದ ಲಘು ಆಹಾರವನ್ನು ಮಾತ್ರ ಸೇವಿಸಿ. ಟ್ರಾನ್ಸ್ ಫ್ಯಾಟ್ ಉತ್ಪನ್ನಗಳಾದ ಡಾಲ್ಡಾ (Dalda), ಫ್ರೋಜನ್ ಪಿಜ್ಜಾ, ಕರಿದ ಆಹಾರ, ಇತ್ಯಾದಿಗಳನ್ನು ಈ ಸಮಯದಲ್ಲಿ ತಪ್ಪಿಸುವುದು ಒಳಿತು.  ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಮಾತ್ರ ಸೇವಿಸಿ. ಹಾಗೆಯೇ ಸದಾ ತಾಜಾ ಆಹಾರವನ್ನು ಮಾತ್ರ ಸೇವಿಸಿ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News