Omicron Sub-Variant In India - ಭಾರತದಲ್ಲಿ, ಕರೋನಾ ವೈರಸ್‌ನ ಓಮಿಕ್ರಾನ್‌ನ ಉಪ-ರೂಪಾಂತರಿ BA.4 ನ ಮೊದಲ ಪ್ರಕರಣ ಹೈದರಾಬಾದ್‌ನಲ್ಲಿ ಪತ್ತೆಯಾಗಿದೆ. ಇದನ್ನು ಇಂಡಿಯನ್ ಸೋರ್ಸಸ್ ಕೋವ್-2 ಜಿನೋಮಿಕ್ಸ್ ಕನ್ಸೋರ್ಟಿಯಂ (INSACOG) ದೃಢಪಡಿಸಿದೆ. ಈ ಕುರಿತು INSACOG ಸಬಹೆಯೊಂದನ್ನು ಕೂಡ ನಡೆಸಿದೆ ಮತ್ತು BA.4 ಬಗ್ಗೆ ಚರ್ಚೆ ನಡೆಸಿದ್ದು, ಜೆನೆಟಿಕ್ ಪ್ರಯೋಗಾಲಯಗಳ ಗುಂಪು ಹೊಸ ರೂಪಾಂತರಗಳನ್ನು ಗುರುತಿಸಲು ಪ್ರಸ್ತುತ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಮೂಲಗಳ ಪ್ರಕಾರ, “ಬಿಎ.4 ರ ಮೊದಲ ಪ್ರಕರಣ ಪತ್ತೆಯಾದ ನಂತರ, ದಕ್ಷಿಣ ಆಫ್ರಿಕಾದಿಂದ ಹೈದರಾಬಾದ್‌ಗೆ ಪ್ರಯಾಣಿಸಿದ ವ್ಯಕ್ತಿಯ ಸಂಪರ್ಕವನ್ನು ಪತ್ತೆಹಚ್ಚುವ ಕೆಲಸ ಆರಂಭವಾಗಿದೆ. ಈ ವ್ಯಕ್ತಿ ಲಕ್ಷಣರಹಿತರಾಗಿದ್ದರು ಮತ್ತು ಮೇ 9 ರಂದು ಅವರಿಂದ ಮಾದರಿಯನ್ನು ಸಂಗ್ರಹಿಸಲಾಗಿತ್ತು.


ಈ ಕುರಿತು ಇನ್ಸಾಕಾಗ್ ಸೋಮವಾರ ವೈದ್ಯಕೀಯ ಬುಲೆಟಿನ್ ಬಿಡುಗಡೆ ಮಾಡಲಿದೆ. ಒಮಿಕ್ರಾನ್‌ನ BA.4 ಮತ್ತು BA.5 ಎರಡೂ ರೂಪಾಂತರಗಳು ದಕ್ಷಿಣ ಆಫ್ರಿಕಾದಲ್ಲಿ ಕೊರೊನಾವೈರಸ್‌ನ ಐದನೇ ಅಲೆಗೆ ಸಂಬಂಧಿಸಿವೆ ಮತ್ತು ಇತ್ತೀಚೆಗೆ US ಮತ್ತು ಯುರೋಪ್‌ನಿಂದ ಕೂಡ ವರದಿಯಾಗಿವೆ.


ಇದನ್ನೂ ಓದಿ-Male Fertility : ಪುರುಷರೆ ನಿಮ್ಮ ಆರೋಗ್ಯಕ್ಕೆ ತಪ್ಪದೆ ಸೇವಿಸಿ ಕಮಲದ ಹೂವಿನ ಬೀಜಗಳನ್ನು!


ಗುರುವಾರವೂ ಕೂಡ ದೇಶದಲ್ಲಿ ಕೊರೊನಾ ಸೋಂಕಿನ ಹೊಸ ರೋಗಿಗಳು ಪತ್ತೆಯಾಗುತ್ತಲೇ ಇದ್ದಾರೆ. ಆದರೆ, ಇದೇ ವೇಳೆ ಸಕ್ರಿಯ ಪ್ರಕರಣಗಳಲ್ಲಿ 375 ರಷ್ಟು ಇಳಿಕೆ ಕಂಡುಬಂದಿದೆ, ಸಕ್ರೀಯ  ಪ್ರಕರಣಗಳ ಸಂಖ್ಯೆ ಇದೀಗ 15,044 ಕ್ಕೆ ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ, ದೇಶದಲ್ಲಿ 2,259 ಹೊಸ ಕರೋನವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿವೆ, ಇದು ಗುರುವಾರಕ್ಕೆ ಹೋಲಿಸಿದರೆ 105ರಷ್ಟು ಕಡಿಮೆಯಾಗಿದೆ.


ಇದನ್ನೂ ಓದಿ-ನಿಂಬೆ ನೀರು ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆಯೇ? ಏನಿದರ ಹಿಂದಿನ ಸತ್ಯ


ಗುರುವಾರ ಸೋಂಕಿತರ ಸಂಖ್ಯೆ 2,364 ಆಗಿತ್ತು. ಹೊಸ ಪ್ರಕರಣಗಳೊಂದಿಗೆ, ಒಟ್ಟು ಸೋಂಕಿತರ ಸಂಖ್ಯೆ ನಾಲ್ಕು ಕೋಟಿ 31 ಲಕ್ಷ 31 ಸಾವಿರ 822 ಕ್ಕೆ ಏರಿಕೆಯಾಗಿದೆ. ಆದರೆ, ಈ ಅವಧಿಯಲ್ಲಿ ಸಾವಿನ ಸಂಖ್ಯೆ ಹಿಂದಿನ ದಿನಕ್ಕೆ ಹೋಲಿಸಿದರೆ ದ್ವಿಗುಣವಾಗಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.