ನವದೆಹಲಿ : ಉದರಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೊಸತೇನಲ್ಲ . ಅನೇಕ ಜನರು ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಜನರು ಸಾಮಾನ್ಯವಾಗಿ ಅಸಿಡಿಟಿ (Accidity), ಅಜೀರ್ಣದ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇದರಿಂದ ಮುಕ್ತಿ ಪಡೆಯುವ ಸಲುವಾಗಿ, ಔಷಧಿಗಳ ಮೊರೆಹೋಗುತ್ತಾರೆ. ಎಷ್ಟೋ ಸಲ ಔಷಧಿ ತೆಗೆದುಕೊಳ್ಳುವಾಗ ಈ ಸಮಸ್ಯೆ ಕಡಿಮೆಯಾದಂತೆ ಕಂಡುಬಂದರೂ ಮತ್ತೆ ಮತ್ತೆ ಮರುಕಳಿಸುತ್ತಲೇ ಇರುತ್ತದೆ.  ಆದರೆ ಔಷಧಿಗಳ ಬದಲು ಅನ್ನ ನೆನೆಸಿಟ್ಟ ನೀರನ್ನು ಸೇವಿಸುವುದರಿಂದ  ಕೂಡ ಈ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು. ಹೌದು, ಖಾಲಿ ಹೊಟ್ಟೆಗೆ ಅನ್ನ ನೆನೆಸಿಟ್ಟ ನೀರನ್ನು ಸೇವಿಸುವುದರಿಂದ (Rice water benefits) ಕರುಳಿನ ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಲಿದೆ. ಹಾಗಿದ್ದರೆ, ಉತ್ತಮ ಪ್ರಯೋಜನಕ್ಕಾಗಿ ಅನ್ನ ನೆನೆಸಿಟ್ಟ ನೀರನ್ನು ಯಾವಾಗ ಸೇವಿಸಬೇಕು ನೋಡೋಣ. 


COMMERCIAL BREAK
SCROLL TO CONTINUE READING

ಇತ್ತೀಚೆಗೆ, ಲೈಫ್ ಸ್ಟೈಲ್ ಕೋಚ್, ಲ್ಯೂಕ್ ಕಾಂಟಿಹೋ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಕರುಳಿನ ಆರೋಗ್ಯವನ್ನು ಸುಧಾರಿಸುವ ಉತ್ತಮ ಮಾರ್ಗವನ್ನು ವಿವರಿಸಿದ್ದಾರೆ. ಈ ವೀಡಿಯೊದಲ್ಲಿ, ಲ್ಯೂಕ್ ಮಣ್ಣಿನ ಮಡಕೆಯೊಂದರಲ್ಲಿ, ನೀರನ್ನು (water) ಹಾಕಿ ಅದರಲ್ಲಿ ಅನ್ನವನ್ನು ನೆನೆಯಲು ಹಾಕಿರುವುದನ್ನು ಕಾಣಬಹುದು. ಹೀಗೆ ಅನ್ನವನ್ನು (Rice) ನೆನೆಸಿಟ್ಟ ನೀರನ್ನು ಸೇವಿಸುವಂತೆ ಸಲಹೆ ನೀಡಿದ್ದಾರೆ. ನೀರಿನಲ್ಲಿ ಅನ್ನವನ್ನು ಹಾಕಿ ಅದನ್ನು ಬೆಳಗಿನ ಹೊತ್ತು ಸೇವಿಸುವುದು ಬಹಳ ಹಿಂದಿನಿಂದ ಅನುಸರಿಸಿಕೊಂಡು ಬಂದಿರುವ ಪದ್ದತಿಯಾಗಿದೆ. ಇದು ಸಾಂಪ್ರದಾಯಿಕ ಪ್ರೋಬಯಾಟಿಕ್ ಆಗಿ ಕೆಲಸ ಮಾಡುತ್ತಿದೆಎನ್ನುವುದು ಕೂಡಾ ಶತಮಾನಗಳಿಂದ ಸಾಬೀತಾಗಿದೆ. 


ಮಹಿಳೆಯರು ಈ ಸಮಯದಲ್ಲಿ ಪ್ರತಿದಿನ 1 ಬಾಳೆಹಣ್ಣನ್ನು ತಿಂದರೆ ದೂರವಾಗುತ್ತವೆ ಈ ಸಮಸ್ಯೆಗಳು


ಆಗಾಗ ಕಾಣಿಸಿಕೊಳ್ಳುವ  ಹೊಟ್ಟೆ ನೋವಿಗೆ ಇದೊಂದು ಉತ್ತಮ ಪರಿಹಾರ ಎನ್ನಲಾಗಿದೆ. ಈ ನೀರು ಮತ್ತು ಅನ್ನವನ್ನು  ನಿಯಮಿತವಾಗಿ  5 ರಿಂದ 7 ದಿನಗಳವರೆಗೆ ಸೇವಿಸಬೇಕು.  ಇದು ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ಆರೋಗ್ಯವಾಗಿರಿಸುತ್ತದೆ. ರೋಗನಿರೋಧಕ ಶಕ್ತಿಯಿಂದ (Immunity) ಹಾರ್ಮೋನುಗಳನ್ನು ಸುಧಾರಿಸುವುದು ಮತ್ತು ಹೊಟ್ಟೆ ಉಬ್ಬರಿಸುವ ಸಮಸ್ಯೆಯನ್ನು ಕೂಡಾ ಕಡಿಮೆ ಮಾಡುತ್ತದೆ. 


ಇದನ್ನೂ ಓದಿ : Food For Healthy Eyes : ಕಣ್ಣಿನ ಆರೋಗ್ಯಕ್ಕೆ ನಿಮ್ಮ ಆಹಾರದಲ್ಲಿರಲಿ ಈ ಐದು ವಸ್ತುಗಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.