ಮಹಿಳೆಯರು ಈ ಸಮಯದಲ್ಲಿ ಪ್ರತಿದಿನ 1 ಬಾಳೆಹಣ್ಣನ್ನು ತಿಂದರೆ ದೂರವಾಗುತ್ತವೆ ಈ ಸಮಸ್ಯೆಗಳು

ಬಾಳೆಹಣ್ಣು ಪೋಷಕಾಂಶಗಳ ನಿಧಿ  ಎಂದು ವೈದ್ಯರು ಕೂಡಾ ಹೇಳುತ್ತಾರೆ. ಬಾಳೆಹಣ್ಣಿನಲ್ಲಿ ಥಯಾಮಿನ್, ರಿಬೋಫ್ಲಾವಿನ್, ನಿಯಾಸಿನ್, ಫೋಲಿಕ್ ಆಸಿಡ್, ವಿಟಮಿನ್ ಎ, ಬಿ, ಬಿ 6, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಶಿಯಂ, ಪೊಟ್ಯಾಸಿಯಮ್ ಮುಂತಾದ ಅಂಶಗಳಿವೆ.  ಈ ಎಲ್ಲಾ ಅಂಶಗಳನ್ನು ಆರೋಗ್ಯಕರ ದೇಹಕ್ಕೆ ಬಹಳ ಮುಖ್ಯವಾಗಿ ಬೇಕಾಗಿರುತ್ತದೆ.   

Written by - Ranjitha R K | Last Updated : Sep 14, 2021, 08:36 PM IST
  • ಬಾಳೆಹಣ್ಣು ಮಹಿಳೆಯರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
  • ಬಾಳೆಹಣ್ಣು ರೋಗನಿರೋಧಕ ಶಕ್ತಿಯನ್ನು ಕೂಡಾ ಹೆಚ್ಚಿಸುತ್ತದೆ
  • ಪೋಷಕಾಂಶಗಳ ಖಜಾನೆ ಬಾಳೆಹಣ್ಣು
ಮಹಿಳೆಯರು ಈ ಸಮಯದಲ್ಲಿ ಪ್ರತಿದಿನ 1 ಬಾಳೆಹಣ್ಣನ್ನು ತಿಂದರೆ ದೂರವಾಗುತ್ತವೆ ಈ ಸಮಸ್ಯೆಗಳು  title=
ಬಾಳೆಹಣ್ಣು ಮಹಿಳೆಯರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. (file photo)

ನವದೆಹಲಿ : ಬಾಳೆಹಣ್ಣು ಮಹಿಳೆಯರ ಆರೋಗ್ಯಕ್ಕೆ (Banana for womens health) ತುಂಬಾ ಪ್ರಯೋಜನಕಾರಿ. ಇದರ ನಿಯಮಿತ ಸೇವನೆಯಿಂದ, ನೀವು ಅನೇಕ ರೋಗಗಳನ್ನು ತಪ್ಪಿಸಬಹುದು. ಒತ್ತಡ ಮತ್ತು ದೈಹಿಕ ದೌರ್ಬಲ್ಯದಿಂದ ಬಳಲುತ್ತಿರುವ ಮಹಿಳೆಯರು ಪ್ರತಿದಿನ ಬಾಳೆಹಣ್ಣನ್ನು (Banana) ಸೇವಿಸಲೇಬೇಕು. ಬಾಳೆಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಮೂಳೆಗಳು ಗಟ್ಟಿಯಾಗುತ್ತದೆ. ಅಲ್ಲದೆ, ರೋಗನಿರೋಧಕ ಶಕ್ತಿಯನ್ನು (Immunity) ಕೂಡಾ ಹೆಚ್ಚಿಸುತ್ತದೆ. 

ಪೋಷಕಾಂಶಗಳ ಖಜಾನೆ ಬಾಳೆಹಣ್ಣು :
ಬಾಳೆಹಣ್ಣು (Banana) ಪೋಷಕಾಂಶಗಳ ನಿಧಿ  ಎಂದು ವೈದ್ಯರು ಕೂಡಾ ಹೇಳುತ್ತಾರೆ. ಬಾಳೆಹಣ್ಣಿನಲ್ಲಿ ಥಯಾಮಿನ್, ರಿಬೋಫ್ಲಾವಿನ್, ನಿಯಾಸಿನ್, ಫೋಲಿಕ್ ಆಸಿಡ್, ವಿಟಮಿನ್ ಎ, ಬಿ, ಬಿ 6, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಶಿಯಂ, ಪೊಟ್ಯಾಸಿಯಮ್ ಮುಂತಾದ ಅಂಶಗಳಿವೆ.  ಈ ಎಲ್ಲಾ ಅಂಶಗಳನ್ನು ಆರೋಗ್ಯಕರ ದೇಹಕ್ಕೆ ಬಹಳ ಮುಖ್ಯವಾಗಿ ಬೇಕಾಗಿರುತ್ತದೆ.  

ಇದನ್ನೂ ಓದಿ : Almond Tea Benefits: ನೀವು ಎಂದಾದರೂ ಬಾದಾಮಿ ಚಹಾವನ್ನು ಪ್ರಯತ್ನಿಸಿದ್ದೀರಾ? ಇದರ 5 ಪ್ರಯೋಜನವನ್ನು ತಪ್ಪದೇ ತಿಳಿಯಿರಿ

ಬಾಳೆಹಣ್ಣು ತಿನ್ನುವುದರಿಂದಾಗುವ ಲಾಭಗಳು :
1. ಗರ್ಭಿಣಿಯರು ಪ್ರತಿದಿನ  ತಿನ್ನಲೇ ಬೇಕು ಒಂದು ಬಾಳೆಹಣ್ಣು : 
ಡಾ.ರಂಜನಾ ಸಿಂಗ್ ಪ್ರಕಾರ, ಗರ್ಭಿಣಿಯರು (Banana for pregnant) ಪ್ರತಿದಿನ ಒಂದು ಬಾಳೆಹಣ್ಣನ್ನು ತಿನ್ನಬೇಕು. ಇದು ಫೋಲಿಕ್ ಆಸಿಡ್ ಹೊಂದಿರುತ್ತದೆ. ಇದು ಹೊಸ ಕೋಶಗಳನ್ನು ತಯಾರಿಸಲು ಮತ್ತು ಹುಟ್ಟಲಿರುವ ಮಗುವಿನ ಯಾವುದೇ ಜನ್ಮ ದೋಷಗಳನ್ನು ತೆಗೆದುಹಾಕಲು ಬಹಳ ಅಗತ್ಯವಾಗಿರುತ್ತದೆ. ಭ್ರೂಣದ ಉತ್ತಮ ಬೆಳವಣಿಗೆಗೆ ಬಾಳೆಹಣ್ಣು ಅಗತ್ಯವಾಗಿ ಬೇಕಾಗಿರುವ ಹಣ್ಣು.

2. ಖಿನ್ನತೆಯನ್ನು ನಿವಾರಿಸುತ್ತದೆ ಬಾಳೆಹಣ್ಣು : 
ಸೇವನೆಯು ಖಿನ್ನತೆಯ ರೋಗಿಗಳಿಗೆ ಪರಿಹಾರ ನೀಡುತ್ತದೆ ಎಂಬುದು ಅನೇಕ ಸಂಶೋಧನೆಗಳಿಂದ ತಿಳಿದು ಬಂದಿದೆ. ಅಂತಹ ಪ್ರೋಟೀನ್ ಬಾಳೆಹಣ್ಣಿನಲ್ಲಿ ಕಂಡುಬರುತ್ತದೆ. ಈ ಕಾರಣದಿಂದ ಖಿನ್ನತೆಯ ರೋಗಿಯು ಬಾಳೆಹಣ್ಣನ್ನು ಸೇವಿಸಿದಾಗ, ಅವರಿಗೆ  ಪರಿಹಾರ ಸಿಗುತ್ತದೆ. ಇದಲ್ಲದೇ, ಬಾಳೆಹಣ್ಣಿನಲ್ಲಿರುವ (health benefits of banana) ವಿಟಮಿನ್ ಬಿ 6 ದೇಹದಲ್ಲಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸರಿಯಾಗಿರಿಸುತ್ತದೆ.

ಇದನ್ನೂ ಓದಿ : ನಿಮ್ಮ ಅಡುಗೆ ಮನೆಯಲ್ಲಿರುವ ಅರಿಶಿನವು ಕಲಬೆರಕೆಯಾಗಿದೆಯೇ ಪರೀಕ್ಷಿಸುವ ಮಾರ್ಗ ಇಲ್ಲಿದೆ

3. ಮಲಬದ್ದತೆಗೆ ಪರಿಹಾರ :
ಮಲಬದ್ಧತೆ (Constipation) ಸಮಸ್ಯೆಯಿಂದ ಬಾಳೆಹಣ್ಣು ಪರಿಹಾರ ನೀಡುತ್ತದೆ.  ಮಲಗುವ ವೇಳೆಗೆ ಪ್ರತಿದಿನ ಹಾಲಿನೊಂದಿಗೆ ಬಾಳೆಹಣ್ಣನ್ನು ಸೇವಿಸಬಹುದು. ಹೀಗೆ ಮಾಡುವುದರಿಂದ, ಮಲಬದ್ಧತೆ ಮತ್ತು ಹೊಟ್ಟೆಯಲ್ಲಿನ ಗ್ಯಾಸ್ ಸಮಸ್ಯೆಯಿಂದ ನಿಮಗೆ ಪರಿಹಾರ ಸಿಗುತ್ತದೆ.

4. ಬಾಳೆಹಣ್ಣು ಒಂದು ತ್ವರಿತ ಶಕ್ತಿ ವರ್ಧಕ :
ಡಾ. ರಂಜನಾ ಸಿಂಗ್ ಅವರ ಪ್ರಕಾರ , ಬಾಳೆಹಣ್ಣು ಸಂಪೂರ್ಣ ಆಹಾರವಾಗಿದ್ದು, ಇದು ತ್ವರಿತ ಶಕ್ತಿ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಹೆಚ್ಚಿನ ಗ್ಲೂಕೋಸ್ ಮಟ್ಟವನ್ನು ಹೊಂದಿದೆ. ಇದು ಶಕ್ತಿಯ ಪ್ರಮುಖ ಮೂಲವಾಗಿದೆ.  ಮಹಿಳೆಯರು ಪ್ರತಿದಿನ ಬೆಳಿಗ್ಗೆ ಬಾಳೆಹಣ್ಣನ್ನು ತಿಂದರೆ, ಅವರು ದಿನವಿಡೀ ಶಕ್ತಿಯನ್ನು ಪಡೆಯುತ್ತಾರೆ ಮತ್ತು ಅಗತ್ಯವಾದ ಪೋಷಕಾಂಶಗಳು ಅವರ ದೇಹದ ಅಗತ್ಯಗಳನ್ನು ಪೂರೈಸುತ್ತವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News