ಬೆಂಗಳೂರು : ಬೆಲ್ಲವನ್ನು ಸಕ್ಕರೆಗೆ ಬದಲಿಯಾಗಿ ಜನರು ಹೆಚ್ಚಾಗಿ ಬಳಸುತ್ತಾರೆ. ಇದು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಬೆಲ್ಲದಲ್ಲಿ ಕಂಡುಬರುವ ನೈಸರ್ಗಿಕ ಮಾಧುರ್ಯವು ದೇಹಕ್ಕೆ ಹಾನಿ ಮಾಡುವುದಿಲ್ಲ.  ದೇಹದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಕ್ಯಾಲ್ಸಿಯಂ, ಕಬ್ಬಿಣ, ಫೋಲೇಟ್, ಮೆಗ್ನೀಸಿಯಮ್, ಸೆಲೆನಿಯಮ್, ಮ್ಯಾಂಗನೀಸ್, ರಂಜಕ, ಪೊಟ್ಯಾಸಿಯಮ್, ವಿಟಮಿನ್ ಬಿ 12 ಮತ್ತು ವಿಟಮಿನ್ ಬಿ 6 ನಂತಹ ಪೋಷಕಾಂಶಗಳು ಬೆಲ್ಲದಲ್ಲಿ ಇರುತ್ತವೆ. ಇವೆಲ್ಲವೂ ದೇಹಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಅದರಲ್ಲೂ ಮಹಿಳೆಯರಿಗೆ ಬೆಲ್ಲದ ಸೇವನೆ ಹೆಚ್ಚು ವಿಶೇಷ. ಪ್ರತಿದಿನ ಒಂದು ತುಂಡು ಬೆಲ್ಲ ಮತ್ತು ಉಗುರುಬೆಚ್ಚನೆಯ ನೀರನ್ನು ಸೇವಿಸಿದರೆ, ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು. 


COMMERCIAL BREAK
SCROLL TO CONTINUE READING

ಒಂದು ತುಂಡು ಬೆಲ್ಲ ಮತ್ತು ಉಗುರುಬೆಚ್ಚನೆಯ ನೀರನ್ನು ಸೇವಿಸುವ ಪ್ರಯೋಜನಗಳು : 
1.  ಮೂತ್ರನಾಳದ ಸೋಂಕಿಗೆ ಪರಿಹಾರ : 
ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದರೆ ಬೆಲ್ಲದ ಸೇವನೆಯು ಪ್ರಯೋಜನಕಾರಿಯಾಗಿರಲಿದೆ. ಬೆಲ್ಲವು ಮೂತ್ರವರ್ಧಕವಾಗಿದೆ. ಅಂದರೆ, ಇದು ನೈಸರ್ಗಿಕ ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಮೂತ್ರಕೋಶದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಬ್ಯಾಕ್ಟೀರಿಯಾವನ್ನು ಹೊರಹಾಕಲು ಸಹಾಯ  ಮಾಡುತ್ತದೆ.   ಯುಟಿಐ ಸೋಂಕಿನ ಸಮಸ್ಯೆಗಳಿದ್ದರೆ, ಬೆಲ್ಲದ ತುಂಡು ಮತ್ತು ಉಗುರುಬೆಚ್ಚನೆಯ ನೀರನ್ನು ಸೇವಿಸಬೇಕು.


ಇದನ್ನೂ ಓದಿ : Home Remedies : ಜ್ವರ, ಮೈಕೈ ನೋವು ತೊಲಗಿಸುತ್ತೆ ಗರಿಕೆ ಕಷಾಯ! ಇಲ್ಲಿದೆ ಮಾಡುವ ವಿಧಾನ


2.  ಋತುಚಕ್ರದ ಸಮಸ್ಯೆಗಳಲ್ಲಿ ಪರಿಣಾಮಕಾರಿ  :
ಬೆಲ್ಲವು ವ್ಯಾಪಕವಾದ ಪೋಷಕಾಂಶಗಳನ್ನು ಒಳಗೊಂಡಿದೆ. ವಿಶೇಷವಾಗಿ ಮೆಗ್ನೀಸಿಯಮ್ ಮತ್ತು ಸೆಲೆನಿಯಮ್. ಮುಟ್ಟಿನ ನೋವು ಅಥವಾ ಸೆಳೆತವನ್ನು ಕಡಿಮೆ ಮಾಡಲು ಇದು ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ. ಇದರೊಂದಿಗೆ, ಪಿರಿಯಡ್ಸ್ ಸಮಯದಲ್ಲಿನ  ದೌರ್ಬಲ್ಯವನ್ನು ತಕಡಿಮೆ ಮಾಡುತ್ತದೆ. ಋತುಚಕ್ರದ ಸಮಸ್ಯೆಗಳಲ್ಲಿ ಪರಿಣಾಮಕಾರಿಯಾಗಿ ನಿವಾರಿಸುತ್ತದೆ. 


3. ರಕ್ತಹೀನತೆಗೆ ಪರಿಹಾರ :  
ಭಾರತದಲ್ಲಿ ಮಹಿಳೆಯರು ಸಾಮಾನ್ಯವಾಗಿ ರಕ್ತಹೀನತೆಯಿಂದ ಬಳಲುತ್ತಿರುತ್ತಾರೆ. ಆದ್ದರಿಂದ ಮಹಿಳೆಯರು ಸಾಕಷ್ಟು ಕಬ್ಬಿಣ ಮತ್ತು ಫೋಲೇಟ್ ಅನ್ನು ಸೇವಿಸಬೇಕು. ಬೆಲ್ಲವು ಕಬ್ಬಿಣ ಮತ್ತು ಫೋಲೇಟ್‌ನಲ್ಲಿ ಸಮೃದ್ಧವಾಗಿದೆ. ಇದನ್ನು ಸಾಮಾನ್ಯವಾಗಿ ಹದಿಹರೆಯದವರು ಮತ್ತು ಗರ್ಭಿಣಿಯರಿಗೆ ಸೇವಿಸಲು ಶಿಫಾರಸು ಮಾಡಲಾಗುತ್ತದೆ. ಬೆಲ್ಲದ ತುಂಡು ಮತ್ತು ಉಗುರುಬೆಚ್ಚನೆಯ ನೀರನ್ನು ಸೇವಿಸುವುದರಿಂದ ಈ ಸಮಸ್ಯೆಯನ್ನು ಹೋಗಲಾಡಿಸಬಹುದು.


ಇದನ್ನೂ ಓದಿ : ಈ ಹಿಟ್ಟಿನಿಂದ ಮಾಡಿದ ಚಪಾತಿ ತಿಂದರೆ ನಿಯಂತ್ರಣದಲ್ಲಿರುತ್ತದೆ ಡಯಾಬಿಟೀಸ್


4. ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ ನಲ್ಲಿ ಸಹಾಯಕ : 
ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ ನಲ್ಲಿ  ಸ್ವಲ್ಪ ಪ್ರಮಾಣದ ಬೆಲ್ಲವನ್ನು ಸೇವಿಸುವುದರಿಂದ  ಹ್ಯಾಪಿ ಹಾರ್ಮೋನುಗಳು ಅಥವಾ ಎಂಡಾರ್ಫಿನ್ ಗಳ ಉತ್ಪಾದನೆಗೆ ಕಾರಣವಾಗುತ್ತದೆ.  ಇದರಿಂದ ಸಂತೋಷ ಮತ್ತು ನಿರಾಳತೆ ಲಭಿಸುತ್ತದೆ. ಇದು ರಕ್ತ ಶುದ್ಧೀಕರಣಕ್ಕೂ ಸಹಕಾರಿ. ಪ್ರತಿದಿನ ಒಂದು ಚಿಟಿಕೆ ಬೆಲ್ಲವನ್ನು ತಿಂದು ಉಗುರುಬೆಚ್ಚನೆಯ ನೀರನ್ನು ಕುಡಿಯುವುದರಿಂದ ಅದು ರಕ್ತವನ್ನು ಶುದ್ಧೀಕರಿಸುತ್ತದೆ.  ಮೊಡವೆ ಮತ್ತು ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ. 


5. ಹಾರ್ಮೋನ್ ಅಸಮತೋಲನವನ್ನು ಕಡಿಮೆ ಮಾಡುತ್ತದೆ : 
ಹಾರ್ಮೋನುಗಳ ಅಸಮತೋಲನವು ದೇಹದಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಮಹಿಳೆಯರಲ್ಲಿ ತುಂಬಾ ಸಾಮಾನ್ಯವಾಗಿದೆ. ಬೆಲ್ಲದ ತುಂಡು ಮತ್ತು ಉಗುರುಬೆಚ್ಚನೆಯ ನೀರನ್ನು ಸೇವಿಸುವುದರಿಂದ ಹಾರ್ಮೋನ್ ಅಸಮತೋಲನವನ್ನು ಕಡಿಮೆ ಮಾಡಬಹುದು. ಇದರೊಂದಿಗೆ, ಥೈರಾಯ್ಡ್, ಪಿಸಿಓಎಸ್, ಎಂಡೊಮೆಟ್ರಿಯೊಸಿಸ್ ನಿಂದ  ಬಳಲುತ್ತಿರುವ ಮಹಿಳೆಯರಿಗೆ ಇದು ಪ್ರಯೋಜನಕಾರಿಯಾಗಿದೆ. ಬೆಲ್ಲವನ್ನು ಪೊಟ್ಯಾಸಿಯಮ್‌ನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ, ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ, ಎಲೆಕ್ಟ್ರೋಲೈಟ್‌ಗಳನ್ನು ನಿರ್ವಹಿಸುತ್ತದೆ, ಚಯಾಪಚಯವನ್ನು ಕಾಪಾಡಿಕೊಳ್ಳುತ್ತದೆ ಮತ್ತು ಹಾರ್ಮೋನುಗಳ ಅಸಮತೋಲನವನ್ನು ತಡೆಯುತ್ತದೆ.


ಆದರೆ ನೆನಪಿರಲಿ ಮಧುಮೇಹ ರೋಗಿಗಳು  ತಮ್ಮ ಆರೋಗ್ಯ ಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಬೆಲ್ಲವನ್ನು ಸೇವಿಸಬೇಕು. 


 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ