ಈ ಹಿಟ್ಟಿನಿಂದ ಮಾಡಿದ ಚಪಾತಿ ತಿಂದರೆ ನಿಯಂತ್ರಣದಲ್ಲಿರುತ್ತದೆ ಡಯಾಬಿಟೀಸ್

ಇಂದು ನಾವು ಓಟ್ಸ್ ಹಿಟ್ಟಿನಿಂದ ತಯಾರಿಸುವ ಚಪಾತಿ ಬಗ್ಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ. ಈ ಚಪಾತಿ ಸೇವಿಸುವುದರಿಂದ ತೂಕವನ್ನು ಕಳೆದುಕೊಳ್ಳಬಹುದು. ಮಾತ್ರವಲ್ಲ, ಮಧುಮೇಹ ರೋಗಿಗಳಿಗೂ ಇದು ಪ್ರಯೋಜನಕಾರಿಯಾಗಿದೆ. 

Written by - Ranjitha R K | Last Updated : Aug 24, 2022, 03:37 PM IST
  • ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವುದು ಮುಖ್ಯ.
  • ಆರೋಗ್ಯಕರ ಆಹಾರಗಳಲ್ಲಿ ಚಪಾತಿ ಕೂಡಾ ಸೇರಿದೆ
  • ಗೋಧಿ ಹಿಟ್ಟಿನಲ್ಲಿ ಬಹಳಷ್ಟು ಕ್ಯಾಲೊರಿಗಳು ಕೂಡಾ ಕಂಡುಬರುತ್ತವೆ.
ಈ ಹಿಟ್ಟಿನಿಂದ ಮಾಡಿದ ಚಪಾತಿ ತಿಂದರೆ ನಿಯಂತ್ರಣದಲ್ಲಿರುತ್ತದೆ ಡಯಾಬಿಟೀಸ್  title=
diabetes control tips (file photo)

ಬೆಂಗಳೂರು : ಆರೋಗ್ಯವಾಗಿರಲು ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವುದು ಮುಖ್ಯ. ಆರೋಗ್ಯಕರ ಆಹಾರಗಳಲ್ಲಿ ಚಪಾತಿ ಕೂಡಾ ಸೇರಿದೆ. ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲಿ ಗೋಧಿ ಹಿಟ್ಟಿನ ರೊಟ್ಟಿನಿಂದ ಚಪಾತಿಯನ್ನು ಮಾಡಲಾಗುತ್ತದೆ. ಆದರೆ ಇದರಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ ಹೆಚ್ಚಿದ್ದು, ಇದು ಮಧುಮೇಹ ರೋಗಿಗಳಿಗೆ ಒಳ್ಳೆಯದಲ್ಲ. ಇದಲ್ಲದೆ, ಗೋಧಿ ಹಿಟ್ಟಿನಲ್ಲಿ ಬಹಳಷ್ಟು ಕ್ಯಾಲೊರಿಗಳು ಕೂಡಾ ಕಂಡುಬರುತ್ತವೆ. ಇದರಿಂದಾಗಿ ತೂಕವೂ ಹೆಚ್ಚಾಗುತ್ತದೆ. ಆದರೆ ಇಂದು ನಾವು ಓಟ್ಸ್ ಹಿಟ್ಟಿನಿಂದ ತಯಾರಿಸುವ ಚಪಾತಿ ಬಗ್ಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ. ಈ ಚಪಾತಿ ಸೇವಿಸುವುದರಿಂದ ತೂಕವನ್ನು ಕಳೆದುಕೊಳ್ಳಬಹುದು. ಮಾತ್ರವಲ್ಲ, ಮಧುಮೇಹ ರೋಗಿಗಳಿಗೂ ಇದು ಪ್ರಯೋಜನಕಾರಿಯಾಗಿದೆ. 

ಒಟ್ಸ್ ಚಪಾತಿ ತಯಾರಿಸಲು ಬೇಕಾಗುವ ಸಾಮಗ್ರಿಗಳು : 
- 1 ಕಪ್ ಓಟ್ಸ್ 
- 1 ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ
- 1 ಕಪ್ ಗೋಧಿ ಹಿಟ್ಟು
- 2 ಚಮಚ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು 
- 1 ಟೀ ಸ್ಪೂನ್ ಉಪ್ಪು 
- ಬಾಣಲೆಗೆ  ಹಚ್ಚಲು ಎಣ್ಣೆ

ಇದನ್ನೂ ಓದಿ : Health Tips: ರಾತ್ರಿ ಊಟದ ನಂತರ ಕೇವಲ 10 ನಿಮಿಷ ಮಾಡುವ ಈ ಕೆಲಸ, ಹಲವು ರೋಗಗಳಿಗೆ ಪರಿಹಾರ

 ಪಾಕವಿಧಾನ :
ಮೊದಲು,  ಓಟ್ಸ್ ಅನ್ನು ಎಣ್ಣೆ ಹಾಕದೆ ಬಾಣಲೆಯಲ್ಲಿ ಫ್ರೈ ಮಾಡಿ. ತಿಳಿ ಕೆಂಪು ಬಣ್ಣ ಬರುವವರೆಗೆ ಫ್ರೈ ಮಾಡಿ.
ನಂತರ ಓಟ್ಸ್ ಅನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ. 
-  ಪುಡಿ ಮಾಡಿದ ಓಟ್ಸ್‌ಗೆ ಒಂದು ಕಪ್ ಗೋಧಿ ಹಿಟ್ಟನ್ನು ಬೆರೆಸಿ. ಸ್ವಲ್ಪ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ.  ಹೀಗೆ ಹಿಟ್ಟು ನಾದುವಾಗ ಅದಕ್ಕೆ ಕತ್ತರಿಸಿದ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿಕೊಳ್ಳಿ. 
- ಈ ಹಿಟ್ಟನ್ನು ಸ್ವಲ್ಪ ಸಮಯದವರೆಗೆ ಹಾಗೆಯೇ ಮುಚ್ಚಿ ಪಕ್ಕಕ್ಕೆ ಇಟ್ಟುಕೊಳ್ಳಿ.  
-  ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಂಡು ಚಪಾತಿ ಲಟ್ಟಿಸಿಕೊಳ್ಳಿ.   
- ಪ್ಯಾನ್ ಅನ್ನು ಬಿಸಿ ಮಾಡಿ ಮತ್ತು ಅದರ ಮೇಲೇ ಸ್ವಲ್ಪ ಎಣ್ಣೆ ಹಚ್ಚಿಕೊಳ್ಳಿ. ನಂತರ ಚಪಾತಿ ಹಾಕಿ ಎರಡೂ ಕಡೆ ಚೆನ್ನಾಗಿ ಬೇಯಿಸಿಕೊಳ್ಳಿ. 
- ಓಟ್ಸ್‌ನಿಂದ ಮಾಡಿದ ಚಪಾತಿ ಕೂಡಾ ಸಾಮಾನ್ಯ ಚಪಾತಿಯಂತೆ ಉಬ್ಬಿಕೊಳ್ಳುತ್ತದೆ.

ಇದನ್ನೂ ಓದಿ : ಭುಜದಲ್ಲಿ ಕಾಣಿಸಿಕೊಳ್ಳುವ ನೋವನ್ನು ಎಂದಿಗೂ ಕಡೆಗಣಿಸಬೇಡಿ , ಈ ನಾಲ್ಕು ರೋಗದ ಲಕ್ಷಣವಾಗಿ ರಬಹುದು

 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News