Papaya Juice Benefits: ಪಪ್ಪಾಯಿ/ಪರಂಗಿ ಹಣ್ಣು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಪ್ರತಿದಿನ ಪಪ್ಪಾಯಿ ತಿನ್ನುವುದರಿಂದ ಮಲಬದ್ಧತೆಯ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಪರಂಗಿ ಹಣ್ಣಿನಲ್ಲಿ ವಿಟಮಿನ್ ಎ, ಕ್ಯಾಲ್ಸಿಯಂ, ಫೈಬರ್, ಮೆಗ್ನೀಸಿಯಮ್, ಕಬ್ಬಿಣ, ಆಂಟಿ-ಆಕ್ಸಿಡೆಂಟ್ ಮುಂತಾದ ಗುಣಗಳಿವೆ. ತೂಕ ನಷ್ಟಕ್ಕೆ (Weight Loss) ಕೂಡ ಪಪ್ಪಾಯಿ ತುಂಬಾ ಪ್ರಯೋಜನಕಾರಿ. ಪರಂಗಿ ಹಣ್ಣನ್ನು ಸೇವಿಸುವುದು ಮಾತ್ರವಲ್ಲ ಅದರ ರಸ ಕೂಡ ಆರೋಗ್ಯಕ್ಕೆ ತುಂಬಾ ಹಲವು ಪ್ರಯೋಜನಗಳನ್ನು ನೀಡುತ್ತದೆ. ಇಂದಿನ ಲೇಖನದಲ್ಲಿ ಪರಂಗಿ ಹಣ್ಣಿನ ರಸವನ್ನು ತಯಾರಿಸುವ ವಿಧಾನ ಮತ್ತು ಅದರ ಪ್ರಯೋಜನಗಳನ್ನು ತಿಳಿದುಕೊಳ್ಳೋಣ-


COMMERCIAL BREAK
SCROLL TO CONTINUE READING

ಪರಂಗಿ ಹಣ್ಣಿನ ರಸ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
>> ಮಾಗಿದ ಪರಂಗಿ ಹಣ್ಣು - 1 (ಅದನ್ನು ಕತ್ತರಿಸಿರಬೇಕು)
>> ನಿಂಬೆ ಹಣ್ಣು - 1
>> ಜೇನುತುಪ್ಪ - ರುಚಿಗೆ ಅನುಗುಣವಾಗಿ
>> ಐಸ್ - ಕೆಲವು ತುಂಡುಗಳು (ನಿಮಗೆ ಬೇಡದಿದ್ದರೆ ಐಸ್ ಬಳಸದೆಯೂ ಇರಬಹುದು)


ಇದನ್ನೂ ಓದಿ- ಪರಂಗಿ ಹಣ್ಣು ಸೇವಿಸುವುದರಿಂದ ಸಿಗಲಿದೆ ಈ ಪ್ರಯೋಜನಗಳು


ಪರಂಗಿ ಹಣ್ಣಿನ ರಸ ತಯಾರಿಸುವ ವಿಧಾನ-
- ಮೊದಲು ಪರಂಗಿ ಹಣ್ಣಿನ (Papaya) ಸಿಪ್ಪೆ ತೆಗೆದು, ಹಣ್ಣನ್ನು ತುಂಡುಗಳಾಗಿ ಕತ್ತರಿಸಿ,  ಮಿಕ್ಸರ್ ನಲ್ಲಿ ಹಾಕಿ ರುಬ್ಬಿರಿ


- ರುಬ್ಬಿದ ಹಣ್ಣಿನ ರಸವನ್ನು ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಿ, ಬಳಿಕ ಅದಕ್ಕೆ ಜೇನುತುಪ್ಪ, ನಿಂಬೆ ರಸ ಮತ್ತು ಐಸ್ ಸೇರಿಸಿ. (ನಿಮಗೆ ಅಗತ್ಯ ಎನ್ನುವಷ್ಟು)


- ಬಳಿಕ ಆ ಮಿಶ್ರಣವನ್ನು ಒಂದು ಸ್ಪೂನ್ ನಿಂದ ಚೆನ್ನಾಗಿ ಕಲಕಿದರೆ ತಂಪಾದ ಪರಂಗಿ ಹಣ್ಣಿನ ರಸ ಸಿದ್ಧವಾಗುತ್ತದೆ.


ಇದನ್ನೂ ಓದಿ- How To Check Milk Purity: ಹಾಲಿನ ಶುದ್ಧತೆ ಪತ್ತೆ ಹಚ್ಚಲು ಈ ಮಾರ್ಗ ಅನುಸರಿಸಿ


ಪಪ್ಪಾಯಿ ರಸದಿಂದ ಆಗುವ ಪ್ರಯೋಜನಗಳು:
ಕ್ಯಾನ್ಸರ್ ಅಪಾಯ ಕಡಿಮೆ-
ಪರಂಗಿ ಹಣ್ಣಿನ ರಸವನ್ನು (Papaya Juice) ಕುಡಿಯುವುದರಿಂದ ಕ್ಯಾನ್ಸರ್ ನಂತಹ ರೋಗಗಳ ಅಪಾಯವನ್ನು ಕಡಿಮೆ ಮಾಡಬಹುದು. ಇದು ಪ್ರಾಸ್ಟೇಟ್ ಮತ್ತು ಕರುಳಿನ ಕ್ಯಾನ್ಸರ್ ನಿಂದಲೂ ನಿಮ್ಮನ್ನು ರಕ್ಷಿಸುತ್ತದೆ.


ಹೃದಯದ ಆರೋಗ್ಯ - ಪಪ್ಪಾಯಿಯಲ್ಲಿ ಪೊಟ್ಯಾಸಿಯಮ್ ಜೊತೆಗೆ ಆಂಟಿ-ಆಕ್ಸಿಡೆಂಟ್ಗಳಿವೆ. ಇದರ ರಸವನ್ನು ಕುಡಿಯುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಈ ರೀತಿಯಾಗಿ, ಹೃದಯ ಸಂಬಂಧಿತ ಕಾಯಿಲೆಗಳಿಂದ ರಕ್ಷಣೆ ಸಿಗಲಿದೆ ಎಂದು ಹೇಳಲಾಗುತ್ತದೆ.


ಕರುಳನ್ನು ಸ್ವಚ್ಛಗೊಳಿಸುತ್ತದೆ- ಪರಂಗಿ ಹಣ್ಣಿನ ರಸವನ್ನು ಕುಡಿಯುವುದರಿಂದ ಕರುಳಿನಲ್ಲಿರುವ ಹುಳುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದಲ್ಲದೆ, ಹೊಟ್ಟೆಯಲ್ಲಿನ ಹುಣ್ಣಿನ ಸಮಸ್ಯೆಯಿಂದಲೂ ರಕ್ಷಣೆ ಸಿಗುತ್ತದೆ.


ಚರ್ಮಕ್ಕೆ ಪ್ರಯೋಜನಕಾರಿ - ಆರೋಗ್ಯದ ಜೊತೆಗೆ, ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪಪ್ಪಾಯಿಯನ್ನು ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಇದರ ರಸವನ್ನು ಕುಡಿಯುವುದರಿಂದ ಸತ್ತ ಚರ್ಮದ ಕೋಶಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಮುಖದ ಮೇಲಿನ ಕಲೆಗಳು, ಗುಳ್ಳೆಗಳು, ನಸುಕಂದು ಮಚ್ಚೆಗಳು, ಸುಕ್ಕುಗಳ ಸಮಸ್ಯೆಯಿಂದ ಪರಿಹಾರ ಪಡೆಯಬಹುದಾಗಿದೆ.


(ಹಕ್ಕುತ್ಯಾಗ: ಲೇಖನದಲ್ಲಿ ನೀಡಿರುವ ಸಲಹೆಯು ಸಾಮಾನ್ಯ ಮಾಹಿತಿ ಮಾತ್ರ. ಇದು ತಜ್ಞರ ಅಭಿಪ್ರಾಯವಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.