ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸದೃಢವಾಗಿರಿಸಲಿವೆ ಈ 5 ಆಹಾರಗಳು

ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುವ ಅಂತಹ ಆಹಾರಗಳ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ.  

Last Updated : Sep 18, 2020, 05:00 PM IST
  • ಇತ್ತೀಚಿನ ದಿನಗಳಲ್ಲಿ ಜೀರ್ಣಾಂಗ ವ್ಯವಸ್ಥೆ ಅಂದರೆ ಡೈಜೆಶನ್ ಸಿಸ್ಟಂ ಸಮಸ್ಯೆಗೆ ಇತ್ತೀಚಿನ ಆಹಾರ ಪದ್ಧತಿ ಕೂಡ ಮುಖ್ಯ ಕಾರಣ
  • ಜಂಕ್ ಫುಡ್ ಬಳಕೆ ಕೂಡಾ ಸರ್ವೇ ಸಾಮಾನ್ಯ
  • ಇದರಿಂದ ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಗ್ಯಾಸ್ಟ್ರಿಕ್ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಪ್ರಾರಂಭವಾಗುತ್ತವೆ.
ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸದೃಢವಾಗಿರಿಸಲಿವೆ ಈ 5 ಆಹಾರಗಳು title=

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಜೀರ್ಣಾಂಗ ವ್ಯವಸ್ಥೆ ಅಂದರೆ ಡೈಜೆಶನ್ ಸಿಸ್ಟಂ ಸಮಸ್ಯೆ ಬಹಳ ಸಾಮಾನ್ಯವಾಗಿದೆ. ಹಿರಿಯರ ಜೊತೆಗೆ ಯುವ ಜನತೆ ಕೂಡ ಈ ಸಮಸ್ಯೆಯ ಹಿಡಿತದಲ್ಲಿರುವುದು ಬೇಸರದ ಸಂಗತಿಯಾಗಿದೆ. ಇದಕ್ಕೆ ಇತ್ತೀಚಿನ ಆಹಾರ ಪದ್ಧತಿ ಕೂಡ ಮುಖ್ಯ ಕಾರಣ ಎಂದರೆ ತಪ್ಪಾಗಲಾರದು. 

ಹೌದು ಇತ್ತೀಚಿನ ಜೀವನ ಶೈಲಿಯಲ್ಲಿ ಮನೆಯಲ್ಲಿ ಮಾಡುವ ಅಡುಗೆಗಿಂತ ಹೊರಗಿನ ಆಹಾರ ಸೇವನೆ ಹೆಚ್ಚಾಗಿದೆ. ಜಂಕ್ ಫುಡ್ ಬಳಕೆ ಕೂಡಾ ಸರ್ವೇ ಸಾಮಾನ್ಯವಾಗಿದೆ. ಇದರಿಂದ ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಗ್ಯಾಸ್ಟ್ರಿಕ್ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಸತತ ಹಲವಾರು ದಿನಗಳವರೆಗೆ, ಈ ಸಮಸ್ಯೆಯು ದೊಡ್ಡ ರೋಗಗಳಿಗೆ ಕಾರಣವಾಗಬಹುದು. ಆದ್ದರಿಂದ ನಿಮ್ಮ ದಿನಚರಿಯನ್ನು ಸರಿಪಡಿಸುವುದು ಮತ್ತು ಆಹಾರದೊಂದಿಗೆ ಯೋಗವನ್ನು ಅಭ್ಯಾಸ ಮಾಡಿಕೊಳ್ಳುವುದು ಮುಖ್ಯ. ಹೊಟ್ಟೆ ಮತ್ತು ಆಹಾರ ಸಂಬಂಧಿತ ಸಮಸ್ಯೆಗಳನ್ನು ತೆಗೆದುಹಾಕಲು ಇದು ಸಾಕಷ್ಟು ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುವ ಇದೇ ರೀತಿಯ ಆಹಾರಗಳ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ.

ಉಳಿದ ಅನ್ನದಿಂದ ಮಾಡಿ ರುಚಿಕರ ಪಕೋಡ, ಇಲ್ಲಿದೆ ಪಾಕವಿಧಾನ

1. ಸೇಬು: 
ಸೇಬಿನಲ್ಲಿ ಸಾಕಷ್ಟು ಪ್ರೋಟೀನ್ ಫೈಬರ್ ಮತ್ತು ಜೀವಸತ್ವಗಳು ಕಂಡುಬರುತ್ತವೆ. ಅಲ್ಲದೆ ಪ್ರತಿದಿನ ಸೇಬನ್ನು (Apple) ತಿನ್ನುವುದು ನಿಮ್ಮ ಜೀರ್ಣಕ್ರಿಯೆಯನ್ನು ಉತ್ತಮವಾಗಿರಿಸುತ್ತದೆ. ವಾಯು ಮತ್ತು ಅನಿಲ ರಚನೆಯಂತಹ ಹೊಟ್ಟೆಯ ಸಮಸ್ಯೆಗಳು ಇತ್ಯಾದಿಗಳನ್ನು ತಡೆಯಲು ಸಹಾಯ ಮಾಡುತ್ತದೆ.

2. ಮೊಸರು: 
ಮೊಸರನ್ನು ಆರೋಗ್ಯದ ಜೊತೆಗೆ ಜೀರ್ಣಕ್ರಿಯೆಗೆ ಸಹ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ, ಆದ್ದರಿಂದ ನೀವು ಮೊಸರನ್ನು (Curd) ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿ. ಸೋಂಕಿನಿಂದಲೂ ನಿಮ್ಮನ್ನು ರಕ್ಷಿಸಲು ಇದು ಸಹಾಯ ಮಾಡುತ್ತದೆ.

ಚಳಿಗಾಲದಲ್ಲಿ ತೂಕ ಹೆಚ್ಚಾಗುತ್ತಿರುವ ಚಿಂತೆಯೇ? ಚಿಂತೆಬಿಡಿ, ಸೇವಿಸಿ ಈ ಜ್ಯೂಸ್!

3. ಸೋಂಪು:
ಅಡುಗೆ ಮತ್ತು ಆಹಾರ ಸೇವನೆ ಬಳಿಕ ಸೋಂಪು ಸೇವನೆ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿರಿಸುತ್ತದೆ ಎಂದು ನಿಮಗೆ ತಿಳಿದಿದೆಯೇ. ಭಾರತೀಯರು ಸೋಂಪನ್ನು  ಮಸಾಲೆಗಳಾಗಿ ಬಳಸುತ್ತಾರೆ. ಇದಲ್ಲದೆ ಸೋಂಪು ತಿನ್ನುವುದರಿಂದ ಬಾಯಿಯ ವಾಸನೆಯನ್ನು ಸಹ ನಿವಾರಣೆಯಾಗುತ್ತದೆ.

4. ಪರಂಗಿ ಹಣ್ಣು:
ಪರಂಗಿ (Papaya) ಹಣ್ಣನ್ನು ಫೈಬರ್ ಮತ್ತು ಪ್ರೋಟೀನ್‌ನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಪಪ್ಪಾಯಿಯನ್ನು ತಿನ್ನುವುದು ನಿಮ್ಮ ಜೀರ್ಣಕ್ರಿಯೆಯ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಜೊತೆಗೆ ಪಪ್ಪಾಯ ನಿಮ್ಮ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಆಹಾರ ಸೇವನೆ ಬಳಿಕ ಟೀ ಕುಡಿಯುವ ಅಭ್ಯಾಸವಿದೆಯೇ? ಹಾಗಿದ್ದರೆ ತಪ್ಪದೇ ಇದನ್ನು ಓದಿ

5. ಕಾಮಕಸ್ತೂರಿ ಬೀಜಗಳು
ಕಾಮಕಸ್ತೂರಿ ಬೀಜಗಳನ್ನು ಸಬ್ಜಾ ಬೀಜ ಎಂದೂ ಕರೆಯುತ್ತಾರೆ. ಇದು ನಿಮ್ಮ ಜೀರ್ಣಕ್ರಿಯೆ ಮತ್ತು ತೂಕ ನಷ್ಟಕ್ಕೆ ಬಹಳ ಪ್ರಯೋಜನಕಾರಿ. ಕಾಮಕಸ್ತೂರಿ ಬೀಜಗಳಲ್ಲಿ ಫೈಬರ್ ಸಾಕಷ್ಟು ಕಂಡುಬರುತ್ತದೆ.

Trending News