Fruit to control Diabetes : ಇತ್ತೀಚಿನ ದಿನಗಳಲ್ಲಿ ಮಧುಮೇಹವು ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ರೋಗವಾಗಿದೆ. ಇದು ಜೀವನಶೈಲಿ ಸಂಬಂಧಿತ ಕಾಯಿಲೆಯಾಗಿದ್ದು, ಒಮ್ಮೆ ಪ್ರಾರಂಭವಾಯಿತು ಎಂದಾದರೆ ಮತ್ತೆ ಈ ಕಾಯಿಲೆಗೆ ಕೊನೆ ಇಲ್ಲ. ಈ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸುವುದು ಸಾಧ್ಯವಿಲ್ಲ ಆದರೆ ನಿಯಂತ್ರಿಸಬಹುದು. ಕೆಲವು ಕ್ರಮಗಳು ಮತ್ತು ಔಷಧಿಗಳ ಮೂಲಕ  ಮಧುಮೇಹವನ್ನು ನಿಯಂತ್ರಿಸಬಹುದು. ಈ ಕಾರಣದಿಂದಲೇ ಪ್ರತಿಯೊಬ್ಬರೂ ತಾವು ಅನುಸರಿಸುತ್ತಿರುವ ಜೀವನ ಶೈಲಿಯ ಬಗ್ಗೆ ಜಾಗರೂಕರಾಗಿರಬೇಕು. ಒಂದು ಸಣ್ಣ ತಪ್ಪು ಕೂಡಾ ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಅಂಥದ್ದರಲ್ಲಿ ಈ ಹಳದಿ ಹಣ್ಣು ಮಧುಮೇಹವನ್ನು ನಿಯಂತ್ರಿಸುವಲ್ಲಿ ದಿವ್ಯೌಷಧವೆಂದು ಪರಿಗಣಿಸಲ್ಪಟ್ಟಿದೆ. 


COMMERCIAL BREAK
SCROLL TO CONTINUE READING

ಮಧುಮೇಹವನ್ನು ನಿಯಂತ್ರಿಸಲು ಹಣ್ಣಿನ ಸಿಪ್ಪೆ : 
ಕೃಷ್ಣ ಫಲ ಅಥವಾ ಫ್ಯಾಷನ್ ಫ್ರುಟ್ : 
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಈ ಅದ್ಭುತ ಹಣ್ಣಿನ ಹೆಸರು ಕೃಷ್ಣ ಫಲ. ಇದನ್ನು ಫ್ಯಾಷನ್ ಫ್ರುಟ್ ಎಂದು ಕೂಡಾ ಕರೆಯುತ್ತಾರೆ. ಕೆಲವೇ ಮಂದಿಗೆ ಈ ಹಣ್ಣಿನ ಅದ್ಭುತ ಪ್ರಯೋಜನದ  ಅರಿವಿದೆ. ಈ ಹಣ್ಣು ರುಚಿಯಲ್ಲಿ ಸಿಹಿ ಮತ್ತು ಹುಳಿ ಮಿಶ್ರಿತವಾಗಿದೆ. ಇದು ತಿನ್ನುವುದಕ್ಕೂ ಬಹಳ ರುಚಿಯಾಗಿರುತ್ತದೆ. ಹಳದಿ ಬಣ್ಣದ ಈ ಹಣ್ಣಿನ ಮೂಲ ಬ್ರೆಜಿಲ್. 


ಇದನ್ನೂ ಓದಿ : Health tips: ಸಕ್ಕರೆ ಖಾಯಿಲೆ ನಿಯಂತ್ರಣಕ್ಕೆ ಈ 5 ಆಹಾರ ಸೇವಿಸಿರಿ


ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಕಡಿಮೆ : 
ಈ ಹಣ್ಣಿನಲ್ಲಿ (ಪ್ಯಾಶನ್ ಫ್ರೂಟ್) ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಆರೋಗ್ಯದ ದೃಷ್ಟಿಯಿಂದ ಈ ಹಣ್ಣು ವಿಶಿಷ್ಟ ನಿಧಿಯೇ ಸರಿ. ಈ ಹಣ್ಣು ಮಾತ್ರವಲ್ಲ ಇದರ ಸಿಪ್ಪೆ ಕೂಡಾ ತುಂಬಾ ಪ್ರಯೋಜನಕಾರಿಯಾಗಿದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಬಹಳಷ್ಟು ಸಹಾಯ ಮಾಡುತ್ತದೆ. ವಾಸ್ತವವಾಗಿ, ಕೃಷ್ಣ ಫಲದ  ಗ್ಲೈಸೆಮಿಕ್ ಸೂಚ್ಯಂಕವು ತುಂಬಾ ಕಡಿಮೆಯಾಗಿರುತ್ತದೆ. ಇದರಿಂದಾಗಿ ಈ ಹಣ್ಣನ್ನು  ಸೇವಿಸಿದರೂ ದೇಹದ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುವುದಿಲ್ಲ. 


ನಿಯಂತ್ರಣದಲ್ಲಿರುತ್ತದೆ ರಕ್ತದಲ್ಲಿನ ಸಕ್ಕರೆ :
ಕೃಷ್ಣ ಫಲದ ಸಿಪ್ಪೆಯಲ್ಲಿ ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ಗಳು ಹೇರಳವಾಗಿವೆ. ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ. ಮಧುಮೇಹಿಗಳಿಗೆ ವೈದ್ಯರು ಈ ಹಣ್ಣನ್ನು ತಿನ್ನುವಂತೆ ಸಲಹೆ ನೀಡುತ್ತಾರೆ. ನಿಮ್ಮ ಜೀವನಶೈಲಿಯನ್ನು ಸುಧಾರಿಸಲು ಮತ್ತು ಸೇವಿಸುವ ಆಹಾರದತ್ತ ಸರಿಯಾದ ಗಮನವನ್ನು ನೀಡುವಂತೆ  ಸೂಚಿಸಲಾಗುತ್ತದೆ. ನಿಮಗೂ ಮಧುಮೇಹ ಸಮಸ್ಯೆ ಇದ್ದರೆ ನೀವೂ ಈ ಹಣ್ಣನ್ನು ಟ್ರೈ ಮಾಡಬಹುದು. 


ಇದನ್ನೂ ಓದಿ :  ಹಸಿರು ಚಹಾ ಅಷ್ಟೇ ಅಲ್ಲ, ಈ ಹಸಿರು ಕಾಫಿ ಕೂಡ ತೂಕ ಇಳಿಕೆಗೆ ಪರಿಣಾಮಕಾರಿ ಮನೆಮದ್ದು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.