Side Effects Of Eating Radish: ಚಳಿಗಾಲದಲ್ಲಿ ಮೂಲಂಗಿ ಒಂದು ಔಷಧಿಗೆ ಕಡಿಮೆ ಏನಿಲ್ಲ. ಚಳಿಗಾಲದಲ್ಲಿ ಉಪ್ಪಿನಕಾಯಿ ಅಥವಾ ಯಾವುದೇ ಒಂದು ಕರ್ರಿಯ ಜೊತೆಗೆ ಮೂಲಂಗಿ ಪರಾಠ ತಿನ್ನಲು ಜನ ಹೆಚ್ಚಿಗೆ ಇಷ್ಟಪಡುತ್ತಾರೆ, ಆದರೆ ಈ ಮೂಲಂಗಿ ಎಲ್ಲರಿಗೂ ಪ್ರಯೋಜನಕಾರಿಯಲ್ಲ ಎಂದು ನಿಮಗೆ ತಿಳಿದಿದೆಯೇ. ಕೆಲವು ಕಾಯಿಲೆಗಳಲ್ಲಿ, ಇದನ್ನು ತಿನ್ನುವುದು ವಿಷಕ್ಕೆ ಸಮಾನ. ಏಕೆಂದರೆ ಆ ಕಾಯಿಲೆಗಳನ್ನು ಉಲ್ಬಣಿಸುವ ಕೆಲಸ ಮಾಡುತ್ತದೆ.


COMMERCIAL BREAK
SCROLL TO CONTINUE READING

ಆದ್ದರಿಂದ, ನೀವು ಮೂಲಂಗಿಯನ್ನು ತಿನ್ನಲು ಇಷ್ಟಪಡುತ್ತಿದ್ದರೆ, ಯಾವ ಕಾಯಿಲೆಗಳು ಇರುವ ಸಂದರ್ಭದಲ್ಲಿ ಮೂಲಂಗಿಯು ಪ್ರಯೋಜನಕ್ಕೆ ಬದಲಾಗಿ ಹಾನಿಯನ್ನು ಉಂಟು ಮಾಡುತ್ತದೆ ಎಂಬುದನ್ನು ನೀವು ಮೊದಲು ತಿಳಿದುಕೊಳ್ಳಬೇಕು. ನೀವು ಅಧಿಕ ರಕ್ತದ ಸಕ್ಕರೆ, ಕಿಡ್ನಿ ಅಥವಾ ಕಡಿಮೆ ಬಿಪಿಯಂತಹ ಸಮಸ್ಯೆಗಳಿಂದ ಬಳಸುತ್ತಿದ್ದರೆ, ಮೂಲಂಗಿಯನ್ನು ತಿನ್ನುವ ಮೊದಲು ಈ ವಿಷಯವನ್ನು ಖಂಡಿತವಾಗಿ ತಿಳಿದುಕೊಳ್ಳಿ.

1. ಗ್ಯಾಸ್ ಸಮಸ್ಯೆ ಇರುವವರು
ನಿಮಗೂ ಕೂಡ ಗ್ಯಾಸ್ ಸಮಸ್ಯೆ ಇದ್ದರೆ, ರಾತ್ರಿಯಲ್ಲಿ ಮರೆತೂ ಕೂಡ ಮೂಲಂಗಿಯನ್ನು ಸೇವಿಸಬೇಡಿ, ಏಕೆಂದರೆ ಹೀಗೆ ಮಾಡುವುದರಿಂದ ಹೊಟ್ಟೆಯ ತೊಂದರೆಗಳು ಹೆಚ್ಚಾಗಬಹುದು ಮತ್ತು ಜಠರದುರಿತದಿಂದ ನಿದ್ರೆಗೆ ತೊಂದರೆಯಾಗಬಹುದು ಮತ್ತು ಇತರರಿಗೂ ಕೂಡ ನಿಮ್ಮಿಂದ ತೊಂದರೆಯಾಗಬಹುದು.


2. ದೇಹದ ಯಾವುದೇ ಭಾಗದಲ್ಲಿ ನೋವು ಇದ್ದರೆ
ನಿಮ್ಮ ಕೈ, ಕಾಲು, ಸೊಂಟ, ಮೊಣಕಾಲು, ಭುಜ ಅಥವಾ ದೇಹದ ಇತರ ಯಾವುದೇ ಭಾಗದಲ್ಲಿ ನೋವು ಇದ್ದರೆ, ರಾತ್ರಿ ಹೊತ್ತು ಮುಲ್ಲಂಗಿಯನ್ನು ಮರೆತೂ ಕೂಡ ಸೇವಿಸಬೇಡಿ. ಏಕೆಂದರೆ ಮೂಲಂಗಿಯನ್ನು ತಿನ್ನುವುದರಿಂದ, ದೇಹದಲ್ಲಿ ಗ್ಯಾಸ್ ರೂಪುಗೊಳ್ಳಲು ಪ್ರಾರಂಭಿಸುತ್ತದೆ, ಇದು ನೋವನ್ನು ಹೆಚ್ಚಿಸುತ್ತದೆ.


3. ಹೊಟ್ಟೆ ಉಬ್ಬರದಂತಹ ಸಮಸ್ಯೆ ಇರುವವರು
ರಾತ್ರಿಯಲ್ಲಿ ಮೂಲಂಗಿಯನ್ನು ತಿನ್ನುವುದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು, ವಿಶೇಷವಾಗಿ ನೀವು ಗ್ಯಾಸ್ ಅಥವಾ ಹುಳಿ ಬೆಲ್ಚಿಂಗ್ ಬಗ್ಗೆ ದೂರುಗಳನ್ನು ಹೊಂದಿದ್ದರೆ, ಮೂಲಂಗಿಯನ್ನು ತಪ್ಪಿಸುವುದು ಉತ್ತಮ. ಮಧ್ಯಾಹ್ನದ ಊಟದಲ್ಲಿ ಮೂಲಂಗಿ ತಿಂದರೂ ತೊಂದರೆಯಿಲ್ಲ


4. ಸಂಧಿವಾತ ರೋಗಿಗಳು
ವಯಸ್ಸು ಹೆಚ್ಚಾದಂತೆ ಸಂಧಿವಾತದ ಸಮಸ್ಯೆ ಹೆಚ್ಚಾಗುತ್ತದೆ, ಇದರಿಂದ ತೊಂದರೆಗೊಳಗಾದವರು ರಾತ್ರಿ ಮೂಲಂಗಿಯನ್ನು ತಿನ್ನಬಾರದು, ಇಲ್ಲದಿದ್ದರೆ ನೋವು ಹೆಚ್ಚಾಗಬಹುದು. ನೀವು ಈ ವಿಷಯದ ಬಗ್ಗೆ ಕಾಳಜಿ ವಹಿಸಿದರೆ, ನಿಮ್ಮ ಕೀಲು ನೋವು ನಿಯಂತ್ರಣದಲ್ಲಿ ಉಳಿಯುತ್ತದೆ.


5. ಮೂತ್ರಪಿಂಡದ ಸಮಸ್ಯೆ
ನಿಮಗೆ ಮೂತ್ರಪಿಂಡದ ಸಮಸ್ಯೆಗಳಿದ್ದರೆ, ಮೂಲಂಗಿಯನ್ನು ತಿನ್ನುವುದನ್ನು ತಪ್ಪಿಸಬೇಕು ಏಕೆಂದರೆ ಮೂಲಂಗಿಯಲ್ಲಿ ಬಹಳಷ್ಟು ನೀರಿನಂಶ ಇರುತ್ತದೆ. ಮೂತ್ರಪಿಂಡದ ಸಮಸ್ಯೆ ಇರುವವರಿಗೆ ಹೆಚ್ಚಿನ ನೀರಿನಂಶ ಇರುವ ಪದಾರ್ಥಗಳ ಸೇವನೆ ನಿಷಿದ್ಧ ಎನ್ನಲಾಗಿದೆ. ಮೂಲಂಗಿ ಬಹಳಷ್ಟು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ ಮತ್ತು ಇದು ಮೂತ್ರಪಿಂಡಕ್ಕೆ ಸರಿಯಾಗಿಲ್ಲ. ಅದಕ್ಕಾಗಿಯೇ ಈ ರೋಗದಲ್ಲಿ ಮೂಲಂಗಿ ತುಂಬಾ ಹಾನಿಕಾರಕವಾಗಿದೆ ಮತ್ತು ರೋಗವನ್ನು ಹೆಚ್ಚಿಸುತ್ತದೆ.


6. ಥೈರಾಯ್ಡ್
ನೀವು ಥೈರಾಯ್ಡ್ ರೋಗಿಗಳಾಗಿದ್ದರೆ ಮೂಲಂಗಿಯನ್ನು ಸೇವಿಸುವುದು ಸರಿಯಲ್ಲ. ಮೂಲಂಗಿ ನಿಮ್ಮ ಹಾರ್ಮೋನ್ ಸ್ರವಿಸುವಿಕೆಯನ್ನು ಮತ್ತಷ್ಟು ನಿಧಾನಗೊಳಿಸುತ್ತದೆ. ಕಚ್ಚಾ ಮೂಲಂಗಿಯು ಥೈರಾಯ್ಡ್ ಹಾರ್ಮೋನ್ ಸ್ರವಿಸುವಿಕೆಯನ್ನು ತಡೆಯುವ ಗೋಯಿಟ್ರೋಜೆನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ. ಈ ರೋಗದಲ್ಲಿ ಎಲೆಕೋಸು, ಹೂಕೋಸು ಮತ್ತು ಸೋಯಾಬೀನ್ ಹಾಗೆ ಮೂಲಂಗಿಯನ್ನು ಸೇವಿಸಬಾರದು.


7. ಎದೆಯಲ್ಲಿ ಕೆಮ್ಮು
ನೀವು ಶೀತ-ನೆಗಡಿ ಅಥವಾ ಎದೆಯಲ್ಲಿ ಕಫದ ಸಮಸ್ಯೆಯಿಂದ ಬಳಲುತ್ತಿದ್ದರೆ, ಮೂಲಂಗಿ ತಿನ್ನುವುದರಿಂದ ರೋಗವು ಮತ್ತಷ್ಟು ಉಲ್ಬಣಿಸಬಹುದು. ಮೂಲಂಗಿಯು ತಂಪು ಗುಣಧರ್ಮದ ತರಕಾರಿಯಾಗಿದೆ ಮತ್ತು ಮೂಲಂಗಿಯನ್ನು ತಿನ್ನುವುದರಿಂದ ಕಫ ಅಥವಾ ನೆಗಡಿ ಅಂಟಿಕೊಳ್ಳುತ್ತದೆ. ಇದೇ ವೇಳೆ ಆಸ್ತಮಾ ರೋಗಿಗಳು ಕೂಡ ಇದನ್ನು ತಿನ್ನುವುದನ್ನು ತಪ್ಪಿಸಬೇಕು.


8. ಹೈಪೊಟೆನ್ಷನ್ ಎಂದರೆ ಕಡಿಮೆ ರಕ್ತದೊತ್ತಡ ಇರುವವರು
ಮೂಲಂಗಿಯನ್ನು ಅತಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ಲೋ ಬಿಪಿ ಸಮಸ್ಯೆ ಹೆಚ್ಚಾಗುತ್ತದೆ, ಆದರೆ, ಹೈ ಬಿಪಿ ಸಮಸ್ಯೆ ಇರುವವರಿಗೆ ಇದು ಲಾಭ ನೀಡುತ್ತದೆ. ಏಕೆಂದರೆ ಪೊಟ್ಯಾಸಿಯಮ್ ಬಿಪಿಯನ್ನು ಕಡಿಮೆ ಮಾಡುವ ಕೆಲಸ ಮಾಡುತ್ತದೆ, ಆದರೆ ಕಡಿಮೆ ಬಿಪಿಯಲ್ಲಿ ಅದು ಬಿಪಿಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಇದು ಪ್ರಜ್ಞೆ ತಪ್ಪುವಿಕೆ ಅಥವಾ ಕೋಮಾಕ್ಕೆ ಕಾರಣವಾಗಬಹುದು.


9. ಹೆಚ್ಚಿನ ಕಬ್ಬಿಣಾಂಶ ಇರುವವರು
ನಿಮ್ಮ ದೇಹದಲ್ಲಿ ಸಾಕಷ್ಟು ಕಬ್ಬಿಣದ ಅಂಶವಿದ್ದರೆ ಮತ್ತು ನೀವು ಮೂಲಂಗಿಯನ್ನು ಅತಿಯಾಗಿ ಸೇವಿಸುತ್ತಿದ್ದರೆ ಅದು ನಿಮ್ಮ ದೇಹಕ್ಕೆ ಹಾನಿಯುಂಟು ಮಾಡುತ್ತದೆ. ದೇಹದಲ್ಲಿ ಕಬ್ಬಿಣದ ಅಧಿಕವು ಹೊಟ್ಟೆ ನೋವು, ಅತಿಸಾರ, ವಾಂತಿ, ತಲೆತಿರುಗುವಿಕೆ, ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುವುದು, ಯಕೃತ್ತಿನ ಹಾನಿ, ಆಂತರಿಕ ರಕ್ತಸ್ರಾವದಂತಹ ಅನೇಕ ರೀತಿಯ ಹಾನಿಯ ಅಪಾಯವನ್ನು ಹೆಚ್ಚಿಸುತ್ತದೆ.


ಇದನ್ನೂ ಓದಿ-Fruit For Sugar Control : ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ರಾಮಬಾಣ ಈ ರಾಮಫಲ


10. ನಿರ್ಜಲೀಕರಣ
ನೀವು ಮೂಲಂಗಿಯನ್ನು ಅತಿಯಾಗಿ ಸೇವಿಸಿದರೆ, ಅದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ವಾಸ್ತವದಲ್ಲಿ, ಮೂಲಂಗಿ ತಿನ್ನುವುದು ಆಗಾಗ್ಗೆ ಮೂತ್ರ ವಿಸರ್ಜನೆಗೆ ಕಾರಣವಾಗುತ್ತದೆ. ಇದರಿಂದಾಗಿ ದೇಹದಿಂದ ಸಾಕಷ್ಟು ನೀರು ಹೊರಹೋಗುತ್ತದೆ ಮತ್ತು ವ್ಯಕ್ತಿಯು ನಿರ್ಜಲೀಕರಣದ ಸಮಸ್ಯೆಯಿಂದ ಬಳಲಲು ಪ್ರಾರಂಭಿಸುತ್ತಾನೆ. ಹೀಗಾಗಿ ಮೂಲಂಗಿಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ.


ಇದನ್ನೂ ಓದಿ-Health Care Tips: ಪೋಷಕಾಂಶಗಳ ಆಗರವಾಗಿರುವ ಈ ತರಕಾರಿ ಚಳಿಗಾಲದ ಹಲವು ಕಾಯಿಲೆಗಳಿಗೆ ರಾಮಬಾಣ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.