International Tea Day: ಪ್ರಪಂಚದಾದ್ಯಂತ ಸಾಮಾನ್ಯವಾಗಿ  ಬಹುತೇಕ ಮಂದಿ ಕುಡಿಯುವ ಪಾನೀಯಗಳಲ್ಲಿ ಒಂದು ಚಹಾ.ಅದರ ಜನಪ್ರಿಯತೆ ಮತ್ತು ಸುದೀರ್ಘ ಇತಿಹಾಸವನ್ನು ಪರಿಗಣಿಸಿ,ಅಂತರರಾಷ್ಟ್ರೀಯ ಚಹಾ ದಿನವನ್ನು ಪ್ರತಿ ವರ್ಷ ಮೇ 21 ರಂದು ಆಚರಿಸಲಾಗುತ್ತದೆ.ಪ್ರತಿ ಮನೆಯಲ್ಲಿ ದಿನಕ್ಕೆ ಒಂದು ಬಾರಿಯಾದರೂ ಚಹಾ ಕುಡಿಯುವವರು ಇರುತ್ತಾರೆ.ಚಹಾದಲ್ಲಿ ಹಲವು ವಿಧಗಳಿವೆ.ಆದರೆ ಹಾಲು ಬೆರೆಸಿದ ಚಹಾಕ್ಕೆ ಬೇಡಿಕೆ ಹೆಚ್ಚು.


COMMERCIAL BREAK
SCROLL TO CONTINUE READING

ಆದರೆ ಚಹಾಕ್ಕೆ ಹಾಲು ಸೇರಿಸಿದ ತಕ್ಷಣ ಅದು ಹಾನಿಕಾರಕ ಪಾನೀಯವಾಗಿ ಬದಲಾಗುತ್ತದೆ ಎನ್ನುವ ಸತ್ಯ ಬಹುತೇಕ ಮಂದಿಗೆ ಗೊತ್ತೇ ಇಲ್ಲ.ವಿಶೇಷವಾಗಿ ಈ 5 ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗೆ,ಹಾಲು ಬೆರೆಸಿದ ಚಹಾ ವಿಷ ಎಂದರೆ ತಪ್ಪಲ್ಲ.


ಇದನ್ನೂ ಓದಿ : ಹಾಲಲ್ಲಿ ಈ ಬೀಜ ಬೆರೆಸಿ ಕುಡಿಯಿರಿ: ಕರಗಿಸಲೂ ಅಸಾಧ್ಯವೆನ್ನುವ ಹೊಟ್ಟೆಯ ಬೊಜ್ಜು ಕೇವಲ 5 ದಿನದಲ್ಲಿ ಸರಾಗವಾಗಿ ಇಳಿಯುತ್ತೆ!


ಈ ಸಮಸ್ಯೆ ಇದ್ದವರು ಚಹಾ ಸೇವಿಸುವಂತಿಲ್ಲ: 
ಕಬ್ಬಿಣದ ಕೊರತೆ :

ನಿಮ್ಮ ದೇಹದಲ್ಲಿ ಕಬ್ಬಿಣದ ಕೊರತೆಯಿದ್ದರೆ ಹಾಲು ಬೆರೆಸಿದ ಚಹಾವನ್ನು  ಸೇವಿಸಬೇಡಿ.NCBI ಪ್ರಕಾರ,ಚಹಾವು ಟ್ಯಾನಿನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ.ಇದು ದೇಹವು ಕಬ್ಬಿಣವನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. 


ಖಿನ್ನತೆ ಅಥವಾ ಒತ್ತಡ :
ಚಹಾವನ್ನು ಕುಡಿಯುವುದರಿಂದ ಉಲ್ಲಾಸಕರ ಅನುಭವವಾಗುತ್ತದೆ.ಆದರೆ ನೀವು ಖಿನ್ನತೆ ಅಥವಾ ಒತ್ತಡದಿಂದ ಬಳಲುತ್ತಿದ್ದರೆ ಚಹಾವನ್ನು ಸೇವಿಸಬೇಡಿ. ಚಹಾವನ್ನು ಕುಡಿಯುವುದು ಅದರ ರೋಗಲಕ್ಷಣಗಳನ್ನು ಹೆಚ್ಚು ತೀವ್ರಗೊಳಿಸುತ್ತದೆ.


ನಿದ್ರಾಹೀನತೆ :
ನಿಮಗೆ ರಾತ್ರಿ ವೇಳೆ ಸರಿಯಾಗಿ ನಿದ್ದೆ ಬರುತ್ತಿಲ್ಲ ಎಂದಾದರೆ ಚಹಾ ಕುಡಿಯಬಾರದು. ಇನ್ನು ಸಂಜೆ ಅಥವಾ ಸಂಜೆಯ ನಂತರವಂತೂ ಚಹಾ ಕುಡಿಯಲೇ ಬಾರದು. NIHನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಚಹಾ ಕೆಫೀನ್ ಮೆಲಟೋನಿನ್ ಉತ್ಪಾದನೆಯನ್ನು ನಿಲ್ಲಿಸುತ್ತದೆ. ಇದು ನಿದ್ರಾಹೀನತೆಗೆ ಕಾರಣವಾಗುತ್ತದೆ.


ಇದನ್ನೂ ಓದಿ : ಯೂರಿಕ್ ಆಸಿಡ್ ರೋಗಿಗಳಿಗೆ ವಿಷದಂತೆ ಈ ತರಕಾರಿಗಳು! ತಪ್ಪಿಯೂ ತಿನ್ನಬಾರದು !


ಕಳಪೆ ಜೀರ್ಣಕ್ರಿಯೆ :
ಹಾಲು ಬೆರೆಸಿದ ಚಹಾ ಕಳಪೆ ಜೀರ್ಣಕ್ರಿಯೆಗೆ ಕಾರಣವಾಗುತ್ತದೆ.ಇದರಲ್ಲಿರುವ ಕೆಫೀನ್ ಮತ್ತು ಕೊಬ್ಬು ಗ್ಯಾಸ್, ಹೊಟ್ಟೆ ಉಬ್ಬರ ಮತ್ತು ಆಸಿಡ್ ರಿಫ್ಲಕ್ಸ್ ಅನ್ನು ಉಂಟುಮಾಡುತ್ತದೆ.


ಹೃದ್ರೋಗ :
ನೀವು ಹೃದ್ರೋಗಿಗಳಾಗಿದ್ದರೆ ಹಾಲಿನ ಚಹಾವನ್ನು ಸೇವಿಸಬೇಡಿ. ಇದು ನಿಮ್ಮ ಅನಾರೋಗ್ಯವನ್ನು ಇನ್ನಷ್ಟು ಉಲ್ಬಣಗೊಳಿಬಹುದು.ಆದರೆ ಸಕ್ಕರೆ ಹಾಕದೆ ಅಥವಾ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಹಾಕಿ ಕುಡಿಯುವ ಬ್ಲಾಕ್ ಟೀ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.