Sugarcane Juice: ಬೇಸಿಗೆ ಬಂತೆಂದರೆ ಸಾಕು ಜನ ತಂಪು ವಸ್ತುಗಳತ್ತ ಮುಖ ಮಾಡುತ್ತಾರೆ. ಎಳನೀರನ್ನು ಈ ಸಂದರ್ಭದಲ್ಲಿ ಕುಡಿಯುವುದು ಸಾಮಾನ್ಯ. ಇದರ ಹೊರತಾಗಿ ಸಾಮಾನ್ಯವಾಗಿ ಸೇವಿಸುವ ಜ್ಯೂಸ್’ಗಳಲ್ಲಿ ಕಬ್ಬಿನ ರಸ ಕೂಡ ಒಂದು. ಆದರೆ ಕೆಲವು ಜನರು ಕಬ್ಬಿನ ಜ್ಯೂಸ್’ನ್ನು ಕುಡಿಯಲೇಬಾರದು. ಇಂದಿನ ಲೇಖನದಲ್ಲಿ ನಾವು ಈ ವಿಷಯದ ಬಗ್ಗೆ ಮಾಹಿತಿ ನೀಡಲಿದ್ದೇವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Self Love ನಿಂದ ಶರೀರಕ್ಕೆ ಸಿಗುವ ಈ ಲಾಭಗಳು ನಿಮಗೆ ತಿಳಿದಿವೆಯೇ?


ಹೈ ಬ್ಲಡ್ ಶುಗರ್ ಸಮಸ್ಯೆ ಹೊಂದಿರುವ ವ್ಯಕ್ತಿ ಕಬ್ಬಿನ ಹಾಲನ್ನು ಕುಡಿಯಲೇಬಾರದು. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಹೀಗಾಗಿ ಈ ಜನರು ಕಬ್ಬಿನ ರಸವನ್ನು ಕುಡಿಯುವುದನ್ನು ಬಿಟ್ಟುಬಿಡಿ.


ಇನ್ನು ತೂಕ ಇಳಿಸಲು ಪ್ರಯತ್ನ ಪಡುವ ಜನರೂ ಕೂಡ ಕಬ್ಬಿನ ಹಾಲನ್ನು ಕುಡಿಯಬಾರದು. ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲೋರಿಗಳು ಇರುವುದರಿಂದ ತೂಕ ಹೆಚ್ಚಳವಾಗಬಹುದು.


ಫುಡ್ ಪಾಯ್ಸನಿಂಗ್ ಸಮಸ್ಯೆಯಿದ್ದರೂ ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇದ್ದರೂ ಸಹ ಕಬ್ಬಿನ ರಸವನ್ನು ಸೇವಿಸುವುದನ್ನು ಬಿಡಿ.


ಕಬ್ಬಿನ ರಸವನ್ನು ತಯಾರಿಸುವಾಗ ನೈರ್ಮಲ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅವಶ್ಯಕ. ಇಲ್ಲದಿದ್ದರೆ, ಹೊಟ್ಟೆಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಇದೆ.  


ಕಬ್ಬಿನ ರಸ ಹೆಚ್ಚು ಕುಡಿದರೆ, ಶೀತ ಮತ್ತು ಜ್ವರದ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಕಬ್ಬಿನ ರಸ ತಂಪು ಅಂಶವನ್ನು ಹೊಂದಿದೆ. ಈ ಕಾರಣದಿಂದ ಹೆಚ್ಚು ಕುಡಿದರೆ ಶೀತದ ಸಮಸ್ಯೆಯನ್ನು ಕಾಣಿಸಿಕೊಳ್ಳಬಹುದು.


ಸೈನಸ್ ಸಮಸ್ಯೆಯ ಸಮಯದಲ್ಲಿಯೂ ಸಹ, ವ್ಯಕ್ತಿಯು ಕಬ್ಬಿನ ರಸವನ್ನು ಸೇವಿಸಬಾರದು.


ಇದನ್ನೂ ಓದಿ: Health Tips: ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿ ತಿನ್ನುವುದರಿಂದಾಗುವ ಈ ಲಾಭಗಳು ನಿಮಗೆ ತಿಳಿದಿವೆಯೇ?


(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.