ಕೊರೊನಾವೈರಸ್‌ನಿಂದ ಉಂಟಾಗುವ ಈ ಕಾಯಿಲೆಯು ಭಾರತ ಸೇರಿದಂತೆ ಇಡೀ ಜಗತ್ತಿನಲ್ಲಿ ಇಂತಹ ಹಾನಿಯನ್ನುಂಟುಮಾಡಿದೆ, ಎಲ್ಲರೂ ತೊಂದರೆಗೀಡಾಗಿದ್ದಾರೆ. ಆದರೆ ಕರೋನಾದ ಹೊರತಾಗಿ, ನಾವು ನಿರ್ಲಕ್ಷ್ಯ ವಹಿಸಲಾಗದ ಅನೇಕ ಕಾಯಿಲೆಗಳಿವೆ. ಅವುಗಳಲ್ಲಿ ಮಧುಮೇಹ ಕೂಡ ಒಂದು. ಡಬ್ಲ್ಯುಎಚ್‌ಒ ಅಂಕಿಅಂಶಗಳ ಪ್ರಕಾರ, ವಿಶ್ವಾದ್ಯಂತ 43 ಕೋಟಿಗೂ ಹೆಚ್ಚು ಜನರಿಗೆ ಮಧುಮೇಹವಿದೆ ಮತ್ತು ಪ್ರತಿ ವರ್ಷ 16 ಲಕ್ಷ ಜನರು ಈ ಸಕ್ಕರೆ ಕಾಯಿಲೆಯಿಂದ ಸಾವನ್ನಪ್ಪುತ್ತಾರೆ ಎಂದು ಹೇಳಲಾಗುತ್ತಿದೆ. ಇದನ್ನ ತಡೆಗಟ್ಟಲು ಯಾವುದೇ ಔಷಧಿ ಇಲ್ಲ. ಆದ್ರೆ ಮಧುಮೇಹ ರೋಗಿಗಳ ದೇಹದ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಬಹುದು. ಅದಕ್ಕೆ ಈ ಕೆಳಗೆ ಓದಿ..


COMMERCIAL BREAK
SCROLL TO CONTINUE READING

ಸಕ್ಕರೆ ನಿಯಂತ್ರಿಸಲು ತೊಗರಿಬೇಳೆ :


ಇದು ಗುಣಪಡಿಸಲಾಗದ ಕಾಯಿಲೆ ಆದ್ರೆ, ಇಡೀ ಜೀವನ ಇದನ್ನ ನಿಯಂತ್ರಿಸಬಹುದು, ನೀವು ಅದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ದೇಹವು ಇನ್ಸುಲಿನ್ ಹಾರ್ಮೋನ್ (Insulin) ಉತ್ಪಾದಿಸಲು ಸಾಧ್ಯವಾಗದಿದ್ದಾಗ, ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಹೆಚ್ಚಾಗುತ್ತದೆ. ಈ ಸ್ಥಿತಿಯು ದೀರ್ಘಕಾಲದವರೆಗೆ ಮುಂದುವರಿದರೆ, ಮಧುಮೇಹ(Diabetes)ವು ಒಂದು ಕಾಯಿಲೆಯಾಗುತ್ತದೆ. ಮಧುಮೇಹ ರೋಗಿಗಳು ತಿನ್ನುವ ಆಹಾರ ಬದಲಾಯಿಸುವ ಮೂಲಕ ಈ ರೋಗವನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು. ಆದ್ದರಿಂದ ನೀವು ಸಹ ಮಧುಮೇಹ ರೋಗಿಯಾಗಿದ್ದರೆ ಈಗಿನಿಂದಲೇ ತೋಗರೆಬೇಳೆಯನ್ನ ತಿನ್ನಲು ಪ್ರಯತ್ನಿಸಿ.


ಇದನ್ನೂ ಓದಿ : ಊಟದ ವೇಳೆ ತಪ್ಪಿಯೂ ಈ ಹನ್ನೆರಡು ತಪ್ಪು ಮಾಡಬೇಡಿ


ಈ ಕಾರಣದಿಂದ ಮಧುಮೇಹ ರೋಗಿಗಳಿಗೆ ತೊಗರಿ ಬೆಳೆ ಪ್ರಯೋಜನಕಾರಿ : 


ಇದಕ್ಕೆ ಕಾರಣವೆಂದರೆ ಹಸಿ ತೊಗರೆ ಬೆಳೆಯನ್ನ ಪ್ರೋಟೀನ್‌(Protin)ನ ಶಕ್ತಿ ಮನೆ ಎಂದು ಕರೆಯುತ್ತಾರೆ. ಇದರಲ್ಲಿ ಜೀವಸತ್ವಗಳು ಮತ್ತು ಖನಿಜಗಳಾದ ಕಬ್ಬಿಣ, ಸತು, ಫೋಲೇಟ್ ಮತ್ತು ಮೆಗ್ನೀಸಿಯಮ್ ಕೂಡ ಕಂಡು ಬರುತ್ತದೆ.


-ತೊಗರಿ ಬೆಲೆಯಲ್ಲಿ ನಾರಿನ ಪ್ರಮಾಣವು ತುಂಬಾ ಹೆಚ್ಚಾಗಿದೆ. ಇದು ಕರಗಬಲ್ಲ ಮತ್ತು ಕರಗದ ನಾರು ಎರಡನ್ನೂ ಹೊಂದಿರುತ್ತದೆ.


ಇದನ್ನೂ ಓದಿ : Corona Care Tips: ನಿಮಗೂ ಕರೋನಾ ಲಕ್ಷಣಗಳಿದ್ದರೆ, ಡೋಂಟ್ ವರಿ ಈ ಡ್ರಿಂಕ್ಸ್ ಕುಡಿಯಿರಿ


-ಡಾಲ್ನ ಗ್ಲೈಸೆಮಿಕ್ ಸೂಚ್ಯಂಕವೂ ಕಡಿಮೆ ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್ಗಳನ್ನು ಹೊಂದಿರುತ್ತದೆ.


-ಈ ಎಲ್ಲಾ ಗುಣಲಕ್ಷಣಗಳು ದೇಹದಲ್ಲಿರುವ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಆದ್ದರಿಂದ ದ್ವಿದಳ ಧಾನ್ಯಗಳನ್ನು ತಿನ್ನುವುದು, ಅದ್ರಲ್ಲೂ ವಿಶೇಷವಾಗಿ ತೊಗರಿ ಬೆಳೆ(Pigeon Pea)ಯನ್ನ ಮಧುಮೇಹ ರೋಗಿಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ.


ಇದನ್ನೂ ಓದಿ : Corona Vaccine ಬೂಸ್ಟರ್ ಡೋಸ್ ಗೆ ಸಿದ್ಧತೆ, ಈಗಾಗಲೇ 7 ಜನರ ಮೇಲೆ ಟ್ರಯಲ್ ಆರಂಭ


ತೊಗರಿ ಬೆಳೆ ಜೊತೆ ಇವುಗಳನ್ನು ಸಹ ತಿನ್ನಿರಿ : 


2018 ರಲ್ಲಿ ನಡೆಸಿದ ಸಂಶೋಧನೆಯಲ್ಲಿ, ತೊಗರಿಬೇಳೆ ತಿನ್ನುವುದು ಅಥವಾ ಅದರ ನೀರು ಕುಡಿಯುವದರಿಂದ ಸಕ್ಕರೆ(Sugar)ಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ತೊಗರಿ ಬೆಳೆ ಹೊರತುಪಡಿಸಿ, ನೀವು ಕಡಲಿ ಬೆಳೆ, ರಾಜ್ಮಾ, ಹೆಸರು ಕಾಳು, ಕಾಬುಲ್ ಕಡ್ಲೆ ಅಥವಾ ಕಡಲೆಹಿಟ್ಟನ್ನು ಸಹ ಸೇವಿಸಬಹುದು. ಈ ಎಲ್ಲಾ  ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತವೆ.


ಇದನ್ನೂ ಓದಿ : Almond Recipe:ನೀವೂ ಕೂಡ ಒಂದು ಬಾರಿ ಸವಿದು ನೋಡಿ ಬಾದಾಮ್-ತುಳಸಿಯ ಈ ಚಟ್ನಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.