ಊಟದ ವೇಳೆ ತಪ್ಪಿಯೂ ಈ ಹನ್ನೆರಡು ತಪ್ಪು ಮಾಡಬೇಡಿ

ಯಾವುದೇ ಪೌಷ್ಟಿಕಾಂಶ ಭರಿತ ಪಕ್ವಾನ್ನ ಮಾಡಿದರೂ, ನಿಮ್ಮ ತಿನ್ನುವ ಕ್ರಮ ಸರಿ ಇಲ್ಲದೇ ಹೋದರೆ ರೋಗ ಬರೋದು ಪಕ್ಕಾ.

Written by - Ranjitha R K | Last Updated : Apr 28, 2021, 04:10 PM IST
  • ತಿನ್ನುವ ಕ್ರಮ ಸರಿ ಇಲ್ಲದೇ ಹೋದರೆ ರೋಗ ಬರೋದು ಪಕ್ಕಾ.
  • ಸರಿಯಾದ ಸಮಯಕ್ಕೆ ಊಟಕ್ಕೆ ಕುಳಿತುಕೊಳ್ಳಿ.
  • ನಿಮ್ಮ ಪಂಚೇಂದ್ರಿಯಗಳೂ ಆಹಾರದ ಮೇಲೆ ಕೇಂದ್ರೀಕೃತವಾಗುವಂತೆ ಮಾಡಿ.
ಊಟದ ವೇಳೆ ತಪ್ಪಿಯೂ ಈ ಹನ್ನೆರಡು ತಪ್ಪು ಮಾಡಬೇಡಿ  title=
ತಿನ್ನುವ ಕ್ರಮ ಸರಿ ಇಲ್ಲದೇ ಹೋದರೆ ರೋಗ ಬರೋದು ಪಕ್ಕಾ. (file photo)

ನವದೆಹಲಿ : ಅಡುಗೆ ಮಾಡುವುದು ಹೇಗೆ ಒಂದು ಅಪೂರ್ವ ಕಲೆಯೋ ಅದೇ ರೀತಿ ಊಟ ಮಾಡುವುದು ಕೂಡಾ ಒಂದು ಕಲೆ. ಬಹಳಷ್ಟು ಸಲ ಏನು ತಿನ್ನುತ್ತೀರಿ ಅನ್ನುವುದಕ್ಕಿಂತ ಹೇಗೆ ತಿನ್ನುತ್ತೀರಿ ಅನ್ನೋದು ನಿಮ್ಮ ಆರೋಗ್ಯದ (Health) ಮೇಲೆ ಬಹಳ ಪ್ರಭಾವ ಬೀರುತ್ತದೆ. ಯಾವುದೇ ಪೌಷ್ಟಿಕಾಂಶ ಭರಿತ ಪಕ್ವಾನ್ನ ಮಾಡಿದರೂ, ನಿಮ್ಮ ತಿನ್ನುವ ಕ್ರಮ ಸರಿ ಇಲ್ಲದೇ ಹೋದರೆ ರೋಗ ಬರೋದು ಪಕ್ಕಾ. ಅದಕ್ಕೆ ದೊಡ್ಡವರು ಹೇಳಿರುವುದು ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗ ಇಲ್ಲ ಎಂದು. ಇವತ್ತು ಊಟ ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ. ಊಟ ಎಲ್ಲರೂ ಮಾಡುತ್ತಾರೆ. ಊಟ ಮಾಡೋದು ಎಲ್ಲರಿಗೂ ಗೊತ್ತಿದೆ. ಆದರೆ ಊಟದ ಸರಿಯಾದ ಕ್ರಮ (Rules of eating) ಯಾವುದು? ಹೇಗೆ ಊಟಮಾಡಬೇಕು ಅನ್ನೋದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ಸರಿಯಾಗಿ ಊಟ ಮಾಡುವುದು ಹೇಗೆ..?

1.ಸರಿಯಾದ ಸಮಯಕ್ಕೆ ಊಟಕ್ಕೆ ಕುಳಿತುಕೊಳ್ಳಿ. ಟೈಮಿಂಗ್ ವತ್ಯಾಸ ಆದಷ್ಟೂ ಕಡಿಮೆ ಇರಲಿ
2.ಊಟವನ್ನು (Food) ಎಂಜಾಯ್ ಮಾಡಿ, ಅದರ ಸ್ವಾದವನ್ನು ಸವಿಯಿರಿ.
3.ಊಟದ ಹೊತ್ತಲ್ಲಿ ಟೆನ್ಶನ್ ಬೇಡ. ಯಾವುದೇ ಟೆನ್ಶನ್ ಇದ್ದರೂ ಊಟದ ಟೇಬಲ್ ನಿಂದ ದೂರ ಇಡಿ. ಆದಷ್ಟೂ ಶಾಂತವಾಗಿ ಕುಳಿತು ಊಟ ಮಾಡಿ.

ಇದನ್ನೂ ಓದಿ : Corona Care Tips: ನಿಮಗೂ ಕರೋನಾ ಲಕ್ಷಣಗಳಿದ್ದರೆ, ಡೋಂಟ್ ವರಿ ಈ ಡ್ರಿಂಕ್ಸ್ ಕುಡಿಯಿರಿ

4.ಸೋಫಾ (Sofa) ಆಗಲಿ ಅಥವಾ ಮೃದುವಾದ ಇತರ ಆಸನದಲ್ಲಿ ಕುಳಿತು ಊಟ ಮಾಡಬೇಡಿ. ಡೈನಿಂಗ್ ಟೇಬಲ್ (Dining table)ಒಳ್ಳೆಯದು. ಡೈನಿಂಗ್ ಟೇಬಲ್ ಇಲ್ಲದೇ ಹೋದರೆ ನೆಲದ ಮೇಲೆ ಕುಳಿತು ಚಕ್ಕಂಬಳ ಹಾಕಿ ಆರಾಮವಾಗಿ ಊಟ ಮಾಡಿ. ಕುಳಿತುಕೊಳ್ಳಲು ಮಣೆ ಇದ್ದರೆ ಇನ್ನೂ ಒಳ್ಳೆಯದು
5.ಗಬಗಬ ತಿನ್ನಬೇಡಿ. ಊಟದ ಹೊತ್ತಿಗೆ ವಾದ ವಿವಾದ ಬೇಡ. ಸಾವಧಾನವಾಗಿರಿ
6.ನಿಮ್ಮ ಪಂಚೇಂದ್ರಿಯಗಳೂ ಆಹಾರದ ಮೇಲೆ ಕೇಂದ್ರೀಕೃತವಾಗುವಂತೆ ಮಾಡಿ. ಊಟದ ಸ್ವಾದ, ಪರಿಮಳ, ರುಚಿ, ಬಣ್ಣವನ್ನು ಎಂಜಾಯ್ ಮಾಡಿ. 
7.ಮುಖ್ಯವಾಗಿ ಊಟ ಮಾಡುವಾಗ ಫೋನ್, ಟೀವಿ (TV), ಸೀರಿಯಲ್ ಇತ್ಯಾದಿ ದೂರ  ಇರಲಿ. ಪರಿವಾರದೊಂದಿಗೆ ನಗು ನಗುತ್ತಾ ಊಟ ಮಾಡಿ. ಊಟ ತಿಂದ ಕೈಯಲ್ಲೇ ಸೌಟು ಮುಟ್ಟುವ ಕೆಲಸ ಮಾಡಬೇಡಿ. 

ಇದನ್ನೂ ಓದಿ : Almond Recipe:ನೀವೂ ಕೂಡ ಒಂದು ಬಾರಿ ಸವಿದು ನೋಡಿ ಬಾದಾಮ್-ತುಳಸಿಯ ಈ ಚಟ್ನಿ

8.ಊಟಕ್ಕೆ ಕುಳಿತ ಮೇಲೆ ಊಟ ಬಡಿಸಲು ಹೇಳಿ. ಊಟವನ್ನು ಮೊದಲು ಬಡಿಸಿಟ್ಟು ಆಮೇಲೆ ಊಟಕ್ಕೆ ಕೂರುವುದು ಸರಿಯಲ್ಲ
9.ನಾವು ತಿನ್ನವುದಕ್ಕಾಗಿ ಬದುಕುವುದಲ್ಲ, ಬದುಕುವುದಕ್ಕಾಗಿ ತಿನ್ನುವುದು. ಹಾಗಾಗಿ ಎಷ್ಟು ಬೇಕೋ  ಅಷ್ಟೇ ತಿನ್ನಿ. ಹೊಟ್ಟೆ ಬಿರಿಯುವ ತನಕ ತಿನ್ನುವುದು ತರವಲ್ಲ
10.ಊಟ ಮಾಡುವಾಗ ಕರಕರ ಶಬ್ದಮಾಡುವುದು, ಸರಸುರ ಅಂತಾ ಸಾಂಬಾರ್ (Sambar) ಸುರಿದುಕೊಳ್ಳುವುದು ಮಾಡಬೇಡಿ. ನಿಮ್ಮ ಊಟ ಬೇರೆಯವರಿಗೆ ಅಸಹ್ಯ ಉಂಟು ಮಾಡಬಾರದು
11.ಊಟದ ಸ್ಥಳ ಚಿಕ್ಕದಾದರೂ  ಪರವಾಗಿಲ್ಲ, ಚೊಕ್ಕವಾಗಿರಲಿ, ಗಾಳಿ ಬೆಳಕಿರಲಿ
12.ಎಷ್ಟು ಬೇಕೋ ಅಷ್ಟೆ ಬಡಿಸಿಕೊಳ್ಳಿ. ಊಟ ವೇಸ್ಟ್ ಮಾಡಬೇಡಿ. ಅನ್ನ (Rice) ಚೆಲ್ಲಬೇಡಿ.

ಇದನ್ನೂ ಓದಿ : ಹೀಗೆ ಮಾಡಿದರೆ ಬೇಸಿಗೆಯಲ್ಲಿ ಬಾಳೆಹಣ್ಣು ಕಪ್ಪಾಗದಂತೆ ತಡೆಯಬಹುದು..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News