ಬೇಸಿಗೆಯಲ್ಲಿ ನಿಮ್ಮನ್ನು ಆರೋಗ್ಯವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಬೇಸಿಗೆಯಲ್ಲಿ ಪ್ರಮುಖವಾಗಿ ಸೇವಿಸಲೇಬೇಕಾದ ಕೆಲವೊಂದು ಒಣ ಹಣ್ಣುಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಈ ಹಣ್ಣುಗಳನ್ನ ಸೇವಿಸುವುದರಿಂದ ಅನೇಕ ರೋಗಗಳಿಂದ ದೂರವಿರಬಹುದು. ಇವುಗಳಿಂದ ದೇಹವು ಕೂಡ ಶಕ್ತಿಯುತವಾಗುತ್ತದೆ.  ನೀವು ಪಿಸ್ತಾ ವನ್ನು ನೋಡಿರುತ್ತೀರಾ. ಇದು ಒಂದು ಒಣ ಹಣ್ಣು, ಇದನ್ನು ಬೇಸಿಗೆಯಲ್ಲಿ ನಮ್ಮ್ ದೇಹಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.  ಪಿಸ್ತಾದ ಕೆಲವು ಪ್ರಯೋಜನಗಳನ್ನು ಇಂದು ನಾವು ನಿಮಗೆ ಹೇಳಲಿದ್ದೇವೆ.


COMMERCIAL BREAK
SCROLL TO CONTINUE READING

ಪಿಸ್ತಾ ಆಂಟಿ ಆಕ್ಸಿಡೆಂಟ್‌ಗಳು, ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಜೀವಸತ್ವಗಳು ಮತ್ತು ಪ್ರೋಟೀನ್‌ ಗಳನ್ನ ತುಂಬಿಕೊಂಡಿದ್ದೆ. ಆಯುರ್ವೇದದಲ್ಲಿ ಪಿಸ್ತಾ(Pistachio)ವನ್ನು ಔಷಧಕ್ಕೆ ಬಳಸಲಾಗುತ್ತಿದೆ. ಆದ್ದರಿಂದ ಬೇಸಿಗೆಯಲ್ಲಿ ಇದನ್ನು ಸೇವಿಸುವುದು ಬಹಳ ಸೂಕ್ತ ಎಂದು ಹೇಳಬಹುದು. 


ಇದನ್ನೂ ಓದಿ : Home Remedies For Good Sleep: ರಾತ್ರಿ ಸರಿಯಾಗಿ ನಿದ್ರೆ ಬರುತ್ತಿಲ್ಲವೇ? ನಿಮ್ಮ ಅಡುಗೆಮನೆಯಲ್ಲಿಯೇ ಇದೆ ಪರಿಹಾರ


ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ ಪಿಸ್ತಾ: ಮಧುಮೇಹ(Diabetes) ಇರುವವರು ಪಿಸ್ತಾ ಸೇವಿಸುವುದು ತುಂಬಾ ಪ್ರಯೋಜನಕಾರಿ. ಪಿಸ್ತಾ ತಿನ್ನುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು. ದೇಹದಲ್ಲಿನ ರಕ್ತದ ಪ್ರಮಾಣವನ್ನು ಪಿಸ್ತಾ ಸೇವನೆಯಿಂದ ನಿಯಂತ್ರನದಲ್ಲಿರುತ್ತದೆ. ಅದರಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ, ಇದು ಮಧುಮೇಹವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮಧುಮೇಹ ಇರುವವರು ಹೆಚ್ಚಾಗಿ ಪಿಸ್ತಾ ಸೇವಿಸಬಹುದು. 


ಇದನ್ನೂ ಓದಿ : Food Storage Tips: ಬೇಸಿಗೆಯಲ್ಲಿ ಈ ವಸ್ತುಗಳನ್ನು ಫ್ರಿಜ್‌ನಲ್ಲಿ ದೀರ್ಘಕಾಲ ಇಡಬೇಡಿ


ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಪಿಸ್ತಾ:  ಪಿಸ್ತಾವು ಕೊಲೆಸ್ಟ್ರಾಲ್(Cholesterol) ಕಡಿಮೆ ಮಾಡುವ ಪೋಷಕಾಂಶಗಳನ್ನು ಹೊಂದಿದೆ. ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುವವರು ಪಿಸ್ತಾ ಸೇವನೆ ಮಾಡಬಹುದು. ವಿಶೇಷವೆಂದರೆ ನೀವು ಹಾಲಿನಲ್ಲಿ ಬೆರೆಸಿದ ಪಿಸ್ತಾವನ್ನು ಸಹ ಸೇವಿಸಬಹುದು. 


ಇದನ್ನೂ ಓದಿ : Vinegar Onion Benefits: ಈರುಳ್ಳಿ ತಿನ್ನುವ ಮೊದಲು ಈ ಕೆಲಸ ಮಾಡಿ; ಈ 10 ಅದ್ಭುತ ಪ್ರಯೋಜನ ಪಡೆಯಿರಿ!


ತೂಕವನ್ನು ಕಡಿಮೆ ಮಾಡಲು ಪಿಸ್ತಾ: ಪ್ರಸ್ತುತ ದಿನಗಳಲ್ಲಿ ಜಂಕ್ ಫುಡ್(Junk Food) ಸೇವಿಸುವುದರಿಂದ ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರೂ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂತವರು ಪಿಸ್ತಾ ಸೇವಿಸುವುದರ ಮೂಲಕ ದೇಹ ತೂಕ ಕಡಿಮೆ ಮಾಡಿಕೊಳ್ಳಬಹುದು. ಏಕೆಂದರೆ ಪಿಸ್ತಾದಲ್ಲಿ ಕೊಬ್ಬಿನಾಮ್ಲ ಜಾಸ್ತಿ ಪ್ರಮಾಣದಲ್ಲಿ ಇರುತ್ತದೆ. ಇದು ಸಸ್ಯ ಆಧಾರಿತ ಪ್ರೋಟೀನ್‌ನ ಹಣ್ಣಾಗಿದೆ. ಆದ್ದರಿಂದ ಇದು ದೇಹ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದ್ದರಿಂದ ತೂಕವನ್ನು ಕಡಿಮೆ ಮಾಡಲು ಪಿಸ್ತಾವನ್ನು ಸೇವಿಸಬಹುದು.


ಇದನ್ನೂ ಓದಿ : Does sunlight kill the coronavirus?: ಬಿಸಿಲಿನಲ್ಲಿ ಶಕ್ತಿ ಕಳೆದುಕೊಳ್ಳುತ್ತದೆಯೇ ಕೊರೊನಾ ವೈರಸ್


ದೇಹದ ಮೂಳೆಗಳು ಬಲವಾಗಿರಲು ಸೇವಿಸಿ ಪಿಸ್ತಾ: ಪಿಸ್ತಾ ಸೇವಿಸುವುದರಿಂದ ದೇಹದ ಮೂಳೆಗಳು ಗಟ್ಟಿಯಾಗುತ್ತವೆ. ಏಕೆಂದರೆ ಪಿಸ್ತಾಗಳಲ್ಲಿ ವಿಟಮಿನ್(vitamin), ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ. 


ಇದನ್ನೂ ಓದಿ : Watermelon: ಆಲ್ಕೋಹಾಲ್ ಸೇವಿಸುವವರೇ ಕಲ್ಲಂಗಡಿ ತಿನ್ನುವ ಮೊದಲು ಇರಲಿ ಎಚ್ಚರ


ಜೀರ್ಣಕ್ರಿಯೆ ಚೆನ್ನಾಗಿರಲು ಸೇವಿಸಿ ಪಿಸ್ತಾ: ಇಂದಿನ ಕಾಲದಲ್ಲಿ ಜೀರ್ಣಕ್ರಿಯೆ ಸಮಸ್ಯೆಯೊ ಒಂದು ದೊಡ್ಡ ಸಮಸ್ಯೆಯಾಗಿದೆ. ಹಾಗಾಗಿ, ದಿನ ಬೆಳಿಗ್ಗೆ ಪಿಸ್ತಾ ಸೇವಿಸುವುದರಿಂದ ಜೀರ್ಣಕ್ರಿಯೆ  ಸಮಸ್ಯೆಯನ್ನ ದೂರವಿಡಬಹುದು. ನಿಳಯಮಿತ ಪಿಸ್ತಾ ಸೇವಿಸುವುದರಿಂದ ಇವಷ್ಟೇ ರೋಗಗಳಲ್ಲದೆ, ಇನ್ನು ಹಲವು ರೋಗಗಳನ್ನು ದೂರವಿಡಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.