Home Remedies For Good Sleep: ಯಾವುದೇ ವ್ಯಕ್ತಿ ಆರೋಗ್ಯವಾಗಿರಲು ನಿದ್ರೆ ಅತ್ಯವಶ್ಯಕ. ಒಬ್ಬ ವ್ಯಕ್ತಿಗೆ ದಿನಕ್ಕೆ 6 ರಿಂದ 8 ಗಂಟೆಗಳ ಕಾಲ ನಿದ್ರೆ ಅವಶ್ಯಕ ಎಂದು ಹೇಳಲಾಗುತ್ತದೆ. ಆದರೆ ಇತ್ತೀಚಿನ ಜೀವನಶೈಲಿಯಲ್ಲಿ ಹಲವರಿಗೆ ರಾತ್ರಿ ಸರಿಯಾಗಿ ನಿದ್ರೆಯೇ ಬರುವುದಿಲ್ಲ. ನಿದ್ರೆ ಸರಿಯಾಗಿ ಆಗದಿದ್ದರೆ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಸಹ ಈ ಸಮಸ್ಯೆಯಿಂದ ನಿರಂತರವಾಗಿ ತೊಂದರೆಗೀಡಾಗಿದ್ದರೆ, ನೀವು ಯಾವುದೇ ಔಷಧಿಯನ್ನು ಆಶ್ರಯಿಸುವ ಅಗತ್ಯವಿಲ್ಲ. ಬದಲಿಗೆ ನಿಮ್ಮ ಅಡುಗೆಮನೆಯಲ್ಲಿಯೇ ಇರುವ ಕೆಲವು ಆಹಾರ ಪದಾರ್ಥಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಉತ್ತಮ ನಿದ್ರೆಗಾಗಿ ನೀವು ಯಾವ ಆಹಾರ ಸೇವಿಸಬೇಕು ಎಂದು ತಿಳಿಯಲು ಮುಂದೆ ಓದಿ...
ಬಿಸಿ ಹಾಲು ಮತ್ತು ದಾಲ್ಚಿನ್ನಿ- ಹಾಲಿನಲ್ಲಿ ಟ್ರಿಪ್ಟೊಪಾನ್ ಇದ್ದು ಅದು ನಿದ್ರೆ (Sleep) ಪಡೆಯಲು ಸಹಾಯ ಮಾಡುತ್ತದೆ. ಪ್ರತಿದಿನ ಮಲಗುವ ಮುನ್ನ ಬೆಚ್ಚಗಿನ ಹಾಲಿಗೆ ಅರ್ಧ ಟೀ ಚಮಚ ದಾಲ್ಚಿನ್ನಿ ಪುಡಿಯನ್ನು ಬೆರೆಸಿ ಕುಡಿವುದರಿಂದ ಉತ್ತಮ ನಿದ್ರೆ ನಿಮ್ಮದಾಗಲಿದೆ.
ಇದನ್ನೂ ಓದಿ - ದಿನಕ್ಕೆ 9 ಗಂಟೆಗಿಂತ ಹೆಚ್ಚು ಮಲಗುವವರಿಗೆ ಬರುತ್ತಾ ಈ ತೊಂದರೆ?
ಹಾಲು ಮತ್ತು ಜಾಯಿಕಾಯಿ - ನೀವು ಬಿಸಿ ಹಾಲಿನಲ್ಲಿ ಜಾಯಿಕಾಯಿ ಪುಡಿಯನ್ನು ಮಿಶ್ರಣ ಮಾಡಿ ಸಹ ಕುಡಿಯಬಹುದು. ಇದು ನಿದ್ರಾಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ. ಹಾಗಾಗಿ ನಿತ್ಯ ರಾತ್ರಿ ಮಲಗುವ ಮೊದಲು ಒಂದು ಲೋಟ ಬಿಸಿ ಹಾಲಿಗೆ ಸ್ವಲ್ಪ ಜಾಯಿಕಾಯಿ ಪುಡಿಯನ್ನು ಮಿಶ್ರಣ ಮಾಡಿ ಸೇವಿಸಿ.
ಕೇಸರಿ- ಒಂದು ಕಪ್ ಬಿಸಿ ಹಾಲಿಗೆ (Milk) ಎರಡು ಪಿಂಚ್ ಕೇಸರಿಯನ್ನು ಬೆರೆಸಿ ಕುಡಿಯಿರಿ. ಕೇಸರಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಅಂಶಗಳನ್ನು ಒಳಗೊಂಡಿದೆ. ಜೊತೆಗೆ ಇದು ನಿದ್ರಾಹೀನತೆಯ ಸಮಸ್ಯೆಯನ್ನು ಸಹ ನಿವಾರಿಸಬಹುದು.
ಇದನ್ನೂ ಓದಿ - Dream and Death: ಕನಸಲ್ಲಿ ಸಾವು ಕಂಡರೆ ಶುಭವೇ ? ಅಶುಭವೇ ತಿಳಿಯಿರಿ
ಜೀರಿಗೆ - ಉತ್ತಮ ನಿದ್ರೆ ಪಡೆಯಲು ಜೀರಿಗೆ ಚಹಾ ಸಹಾಯ ಮಾಡುತ್ತದೆ. ನಿತ್ಯ ರಾತ್ರಿ ಮಲಗುವ ಮೊದಲು ಒಂದು ಗ್ಲಾಸ್ ಬೆಚ್ಚಗಿನ ಹಾಲಿಗೆ ಒಂದು ಚಮಚ ಜೀರಿಗೆ ಪುಡಿ ಮತ್ತು ಬಾಳೆಹಣ್ಣನ್ನು ಬೆರೆಸಿ ಸೇವಿಸಿ. ಇದು ನಿಮ್ಮ ನಿದ್ರಾಹೀನತೆ ಸಮಸ್ಯೆಯನ್ನು ನಿವಾರಿಸಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.