ಈ 4 ಗಿಡಗಳನ್ನು ಮನೆಯಲ್ಲಿ ನೆಟ್ಟರೆ ಸೊಳ್ಳೆಗಳು ಹತ್ತಿರವೂ ಸುಳಿಯುವುದಿಲ್ಲ!
Mosquito repellent plants : ಈ ಉತ್ಪನ್ನಗಳ ಬದಲಿಗೆ, ಸೊಳ್ಳೆಗಳನ್ನು ದೂರವಿಡಲು ಮನೆಯ ಸುತ್ತ ಈ ಗಿಡಗಳನ್ನು ನೆಡಬಹುದು. ಈ ಗಿಡಗಳು ಇದ್ದಲ್ಲಿ ಸೊಳ್ಳೆಗಳು ಹತ್ತಿರವೂ ಸುಳಿಯುವುದಿಲ್ಲ.
Mosquito repllent plants : ಮಲೇರಿಯಾ, ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಂತಹ ರೋಗಗಳು ಸೊಳ್ಳೆಗಳಿಂದ ಹರಡುತ್ತವೆ. ಪ್ರತಿ ವರ್ಷ ಈ ಸೊಳ್ಳೆಗಳು ಹರಡುವ ರೋಗಗಳಿಂದ ಅನೇಕ ಜನರು ಸಾಯುತ್ತಾರೆ.ಸಂಜೆಯ ವೇಳೆಗೆ ಈ ಸೊಳ್ಳೆಗಳು ಮನೆಯ ಬಾಗಿಲು, ಕಿಟಕಿಗಳ ಮೂಲಕ ಮನೆಯೊಳಗೆ ಬರುತ್ತವೆ. ಒಮ್ಮೆ ಮನೆಯೊಳಗೇ ಬಂದ ಸೊಳ್ಳೆಗಳು ನಂತರ ವಿಪರೀತ ಕಾಟ ಕೊಡಲು ಆರಂಭಿಸುತ್ತವೆ. ಈ ಸೊಳ್ಳೆಗಳು ಮನೆ ಮಂದಿಗೆ ಕಚ್ಚುವ ಮೂಲಕ ಅನಾರೋಗ್ಯಕ್ಕೆ ಗುರಿ ಮಾಡುತ್ತವೆ.
ಸೊಳ್ಳೆಗಳನ್ನು ತಡೆಯಲು ಮನೆಯಲ್ಲಿ ಈ ಗಿಡಗಳನ್ನು ನೆಡಿ :
ಸೊಳ್ಳೆಗಳನ್ನು ತಡೆಯಲು ಜನರು ಸೊಳ್ಳೆ ಬತ್ತಿ, ಸೊಳ್ಳೆ ಪರದೆ, ಕಾಯಿಲ್, ಸ್ಪ್ರೆ ಗಳನ್ನೂ ಬಳಸುತ್ತಾರೆ. ಆದರೆ,ಅವುಗಳಲ್ಲಿ ಕೆಮಿಕಲ್ ಗಳಿರುವುದರಿಂದ ಜನರಿಗೆ ಹಾನಿಕಾರಕವಾಗಿ ಪರಿಣಮಿಸುತ್ತದೆ. ಅಲ್ಲದೆ,ಮಕ್ಕಳು ಮತ್ತು ಅಸ್ತಮಾ ರೋಗಿಗಳಿಗೆ ಉಸಿರಾಟದ ತೊಂದರೆ ಉಂಟು ಮಾಡುತ್ತದೆ. ಈ ಉತ್ಪನ್ನಗಳ ಬದಲಿಗೆ, ಸೊಳ್ಳೆಗಳನ್ನು ದೂರವಿಡಲು ಮನೆಯ ಸುತ್ತ ಈ ಗಿಡಗಳನ್ನು ನೆಡಬಹುದು. ಈ ಗಿಡಗಳು ಇದ್ದಲ್ಲಿ ಸೊಳ್ಳೆಗಳು ಹತ್ತಿರವೂ ಸುಳಿಯುವುದಿಲ್ಲ.
ಇದನ್ನೂ ಓದಿ : Chia Seeds Water: ಪ್ರತಿದಿನ ಒಂದು ಗ್ಲಾಸ್ ಚಿಯಾ ಸೀಡ್ಸ್ ನೀರನ್ನು ಕುಡಿಯುವುದರಿಂದ ದೇಹದ ಆರೋಗ್ಯಕ್ಕಾಗುವ ಪ್ರಯೋಜನಗಳೇನು ಗೊತ್ತೇ??
ಪುದಿನಾ :
ಪುದೀನಾ ಗಿಡ ನಿಮ್ಮ ಮನೆಯಿಂದ ಸೊಳ್ಳೆಗಳನ್ನು ದೂರವಿಡುತ್ತದೆ. ಒಂದು ಅಧ್ಯಯನದ ಪ್ರಕಾರ, ಪುದೀನಾದಲ್ಲಿ ಕಂಡುಬರುವ ನೈಸರ್ಗಿಕ ತೈಲವು ಸೊಳ್ಳೆಗಳ ವಿರುದ್ಧ ಔಷಧದಂತೆ ಕೆಲಸ ಮಾಡುತ್ತದೆ.ಆದ್ದರಿಂದಲೇ ಸೊಳ್ಳೆಗಳು ಪುದೀನಾ ಗಿಡವಿದ್ದರೆ ಹತ್ತಿರವೂ ಬರುವುದಿಲ್ಲ.
ರೋಸ್ಮರಿ :
ಸೊಳ್ಳೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ರೋಸ್ಮರಿಯನ್ನು ಸಹ ನೆಡಬಹುದು. ರೋಸ್ಮರಿ ಗಿಡ ಮತ್ತು ಅದರ ಹೂವುಗಳು ಹೊರ ಸೂಸುವ ವಾಸನೆಯಿಂದಾಗಿ ಸೊಳ್ಳೆಗಳು ಇದು ಇದ್ದಲ್ಲಿ ಬರುವುದೇ ಇಲ್ಲ.
ಲ್ಯಾವೆಂಡರ್ :
ಈ ಸುಂದರವಾದ ಸಸ್ಯವನ್ನು ಅನೇಕ ಆರೋಗ್ಯ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ.ಲ್ಯಾವೆಂಡರ್ ಹೂವುಗಳಿಂದ ಹೊರ ಬರುವ ವಾಸನೆಯು ಮನೆಯಿಂದ ಸೊಳ್ಳೆಗಳನ್ನು ದೂರವಿರಿಸುವ ಕೆಲಸ ಮಾಡುತ್ತದೆ.
ಇದನ್ನೂ ಓದಿ : Uric Acid: ಯೂರಿಕ್ ಆಸಿಡ್ ಹೆಚ್ಚಿರುವವರಿಗೆ ಈ 5 ಆಹಾರಗಳು ವಿಷಕ್ಕೆ ಸಮ..!
ಲೆಮನ್ ಗ್ರಾಸ್ :
ಸೊಳ್ಳೆಗಳು ಮನೆಯೊಳಗೆ ಬರದಂತೆ ತಡೆಯಲು, ಲೆಮನ್ ಗ್ರಾಸ್ ಅನ್ನು ಕೂಡ ನೆಡಬಹುದು. ಸೊಳ್ಳೆಗಳಿಗೆ ಈ ಗಿಡದ ವಾಸನೆ ಇಷ್ಟವಾಗುವುದಿಲ್ಲ. ಹಾಗಾಗಿಯೇ ಲೆಮೊನ್ಗ್ರಾಸ್ ಗಿಡ ಇರುವ ಕಡೆ ಸೊಳ್ಳೆಗಳು ಬರುವುದಿಲ್ಲ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.