ನಿಮ್ಮ ಮನೆಯಲ್ಲಿ ನೊಣಗಳ ಕಾಟ ಹೆಚ್ಚಾಗಿದೆಯೇ..? ಹಾಗಿದ್ರೆ ತಕ್ಷಣ ಈ ಕೆಲಸ ಮಾಡಿ
Best ways to Keep Flies Away from Home : ಬೇಸಿಗೆ ಕಾಲ, ಮಳೆಗಾಲದಲ್ಲಿ ಮನೆಯಲ್ಲಿ ನೊಣಗಳ ಸಂಖ್ಯೆ ಹೆಚ್ಚಾಗುತ್ತದೆ. ನೊಣಗಳಿಂದ ಮನೆ ತುಂಬಿ ಹೋಗುತ್ತದೆ. ಅದಕ್ಕಾಗಿ ಸಕ್ಕರೆ, ಬೆಲ್ಲವನ್ನು ಎಲ್ಲಾದರೂ ಮುಚ್ಚಿಡುತ್ತಾರೆ. ಆದರೆ ಈ ಕೆಳಗೆ ನೀಡಿರುವ ಗಿಡಗಳನ್ನು ಬೆಳೆಸಿದರೆ ಒಂದೇ ಒಂದು ನೊಣವೂ ನಿಮ್ಮ ಮನೆಯ ಹತ್ತಿರ ಸುಳಿಯುವುದಿಲ್ಲ.
Effective Ways to Get Rid of Flies at Home : ಮಾನ್ಸೂನ್ ಮತ್ತು ಚಳಿಗಾಲಕ್ಕೆ ಹೋಲಿಸಿದರೆ, ಬೇಸಿಗೆಯಲ್ಲಿ ನೊಣಗಳು ಮನೆಗೆ ಹೆಚ್ಚು ಪ್ರವೇಶಿಸುತ್ತವೆ. ಈ ನೊಣಗಳು ನಾವು ತಿನ್ನುವ ಆಹಾರ ಮೇಲೆ ಕುಳಿತು ಹಲವು ರೋಗಗಳಿಗೆ ದಾರಿ ಮಾಡಿಕೊಡುತ್ತವೆ.. ಇದನ್ನು ತಪ್ಪಿಸಲು ಜನರು ವಿವಿಧ ಪ್ರಯತ್ನ ಮಾಡುತ್ತಾರೆ. ಆದರೂ ನೊಣಗಳು ಮನೆ ಬಿಟ್ಟು ಹೋಗುವುದಿಲ್ಲ.
ನಮ್ಮ ಆರೋಗ್ಯದ ಜೊತೆಗೆ ಪರಿಸರವನ್ನು ಕಾಪಾಡುವ ಹಲವಾರು ಗಿಡ, ಮರಗಳಿವೆ. ಕೆಲವು ಗಿಡಗಳಿಂದ ನಾವು ಒಂದೇ ಒಂದು ನೊಣವನ್ನು ಮನೆ ಪ್ರವೇಶ ಮಾಡದಂತೆ ತಡೆಯಬಹುದು ಅಂದ್ರೆ ನೀವು ನಂಬಲೇಬೇಕು.. ಬನ್ನಿ ಆ ಸಸ್ಯಗಳು ಯಾವುವು ಅಂತ ತಿಳಿದುಕೊಳ್ಳೋಣ..
ಇದನ್ನೂ ಓದಿ: ಸಧೃಡ, ಸುಂದರ, ಕಪ್ಪು, ಗುಂಗುರು ಕೂದಲು ಪಡೆಯಲು ಇಲ್ಲಿದೆ ಸರಳ ಉಪಾಯ..!
ಲ್ಯಾವೆಂಡರ್ : ಈ ಸಸ್ಯದಿಂದ ಬರುವ ಸುವಾಸನೆ ತುಂಬಾ ಒಳ್ಳೆಯದು. ನಿಮ್ಮ ಮನೆ ಆರೋಗ್ಯಕ್ಕೂ ಸಹ ಪ್ರಯೋಜನಕಾರಿಯಾಗಿದೆ. ಈ ಸಸ್ಯವು ಕೀಟಗಳನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ. ಬಾಲ್ಕನಿಯಲ್ಲಿ ಲ್ಯಾವೆಂಡರ್ ಗಿಡ ನೆಟ್ಟರೆ ಒಂದೇ ಒಂದು ನೊಣ ನಿಮ್ಮ ಮನೆಗೆ ಬರುವುದಿಲ್ಲ.
ಚೆಂಡು ಹೂ : ಅನೇಕ ಜನರು ತಮ್ಮ ತೋಟದಲ್ಲಿ ಚೆಂಡು ಹೂವಿನ ಸಸ್ಯವನ್ನು ನೆಡುತ್ತಾರೆ. ಇವುಗಳನ್ನು ಹೆಚ್ಚಾಗಿ ದೇವರ ಪೂಜೆ, ಮನೆಯನ್ನು ಅಲಂಕರಿಸಲು ಬಳಸಲಾಗುತ್ತದೆ. ಉದ್ಯಾನವನ್ನು ಸುಂದರಗೊಳಿಸುವುದರ ಜೊತೆಗೆ, ಈ ಹೂವುಗಳು ನಮಗೆ ಹಲವಾರು ಪ್ರಯೋಜನಗಳನ್ನು ನೀಡುತ್ತವೆ. ಈ ಸಸ್ಯವನ್ನು ಮನೆಯಲ್ಲಿ ನೆಟ್ಟರೆ ಒಂದೇ ಒಂದು ನೊಣ ಕೂಡ ಬರುವುದಿಲ್ಲ.
ಇದನ್ನೂ ಓದಿ:ಚಿಯಾ ಬೀಜಗಳ ಅದ್ಭುತ ಆರೋಗ್ಯ ಪ್ರಯೋಜನಗಳು
ನಿಂಬೆ ಹುಲ್ಲು : ಚಹಾದ ರುಚಿಯನ್ನು ಹೆಚ್ಚಿಸಲು ನಿಂಬೆ ಹುಲ್ಲನ್ನು ಹೆಚ್ಚಾಗಿ ಬಳಸಲಾಗುತ್ತದೆ. ಈ ಗಿಡವನ್ನು ಬೆಳೆಸಲು ಕಷ್ಟಪಡುವ ಅಗತ್ಯವಿಲ್ಲ. ಇದನ್ನು ಕಡಿಮೆ ಜಾಗದಲ್ಲಿ ಬೆಳೆಯಬಹುದು. ಈ ಲೆಮನ್ ಗ್ರಾಸ್ ನಮ್ಮ ಆರೋಗ್ಯಕ್ಕೆ ಮಾತ್ರವಲ್ಲ.. ಕೀಟಗಳನ್ನು ಹಿಮ್ಮೆಟ್ಟಿಸಲು ಕೂಡ ಉಪಯುಕ್ತವಾಗಿದೆ.
ರೋಸ್ಮರಿ : ಸೊಳ್ಳೆಗಳು, ನೊಣಗಳು ಮತ್ತು ಇತರ ಕೀಟಗಳನ್ನು ಹಿಮ್ಮೆಟ್ಟಿಸಲು ರೋಸ್ಮರಿ ಸಸ್ಯಗಳು ಬಹಳ ಪರಿಣಾಮಕಾರಿ. ರೋಸ್ಮರಿ ಒಂದು ಸಸ್ಯವಾಗಿದೆ. ಇದರ ವಾಸನೆಯು ನೊಣ ಮತ್ತು ಸೊಳ್ಳೆಗಳನ್ನು ಮನೆಯಿಂದ ದೂರವಿಡುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.