Pm narendra modi favorite fruit : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಇಷ್ಟದ ಹಣ್ಣುಗಳಲ್ಲಿ ಒಂದಾದ ಈ ಹಣ್ಣು ಪೌಷ್ಟಿಕಾಂಶಗಳಿಂದ ತುಂಬಿದ್ದು, ಆರೋಗ್ಯಕ್ಕೆ ಹಲವಾರು ಉತ್ತಮ ಪ್ರಯೋಜನಗಳನ್ನು ಹೊಂದಿದೆ. ಹಾಗಿದ್ರೆ, ಆ ಹಣ್ಣು ಯಾವುದು..? ಎಲ್ಲಿ ಸಿಗುತ್ತೆ..? ಅದರಲ್ಲಿ ಪೌಷ್ಟಿಕಾಂಶಗಳು ಯಾವುವು ಅಂತ ನೋಡೋಣ..


COMMERCIAL BREAK
SCROLL TO CONTINUE READING

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಹೆಚ್ಚಾಗಿ ಅವರು ಹಣ್ಣು ಹಂಪಲುಗಳನ್ನು ಸೇವಿಸುತ್ತಾರೆ. ಹಣ್ಣುಗಳ ಪೈಕಿ ಅವರಿಗೆ ಕಫಲ್‌ ಫ್ರುಟ್‌ ತುಂಬಾ ಇಷ್ಟ. ಕಫಲ್‌ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಉತ್ತರಾಖಂಡದಲ್ಲಿ ಬೆಳೆಯುವ ಕಫಲ್‌ ಹಣ್ಣು, ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಈ ಹಣ್ಣಿನಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. 


ಇದನ್ನೂ ಓದಿ:ಬಾಳೆಹಣ್ಣಿನ ಜೊತೆ ತುಪ್ಪ ಬೆರೆಸಿ ಖಾಲಿ ಹೊಟ್ಟೆಗೆ ಸೇವಿಸಿದ್ರೆ ಈ ಕಾಯಿಲೆಯಿಂದ ಸಿಗುವುದು ಮುಕ್ತಿ!


ಕಫಲ್ ಹಣ್ಣಿನ ಪ್ರಯೋಜನಗಳು : ಕಫಲ್ ಒಂದು ರುಚಿಕರವಾದ ಪೌಷ್ಟಿಕಾಂಶಯುಕ್ತ ಹಣ್ಣು. ಈ ಹಣ್ಣು ಹೆಚ್ಚಾಗಿ ಭಾರತ, ಶ್ರೀಲಂಕಾ ಮತ್ತು ನೇಪಾಳದಲ್ಲಿ ಕಂಡು ಬರುತ್ತಿದೆ. ಇದು ಹೆಚ್ಚಾಗಿ ಸುಮಾರು 1500-2000 ಮೀಟರ್ ಎತ್ತರದಲ್ಲಿ ಬೆಳೆಯುತ್ತದೆ. ನೋಡೋಕೆ ಚಿಕ್ಕದಾಗಿದ್ದು, ಕೆಂಪು ಬಣ್ಣದಲ್ಲಿರುತ್ತದೆ. 


ಕಫಲ್ ಹಣ್ಣಿನ ಆರೋಗ್ಯ ಪ್ರಯೋಜನಗಳು


1. ನರಗಳು ಮತ್ತು ಸ್ನಾಯುಗಳ ಸರಿಯಾದ ಕಾರ್ಯನಿರ್ವಹಣೆ : ಈ ಕಫಲ್ ಹಣ್ಣನ್ನು ತಿನ್ನುವುದರಿಂದ, ದೇಹದ ನರಗಳು ಮತ್ತು ಸ್ನಾಯುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಇದು ಪೊಟ್ಯಾಸಿಯಮ್ನಲ್ಲಿ ಸಮೃದ್ಧವಾಗಿದೆ.


2. ಹೃದಯದ ಕಾರ್ಯವನ್ನು ಸುಧಾರಿಸುತ್ತದೆ: ಕಫಲ್ ಹಣ್ಣು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ, ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ.


ಇದನ್ನೂ ಓದಿ:Health Tips: ಬಿಪಿ ನಿಯಂತ್ರಣಕ್ಕೆ ಈ ಸಿಂಪಲ್‌ ಸಲಹೆ ಪಾಲಿಸಿರಿ


3. ಮಾನಸಿಕ ಕಾಯಿಲೆಗಳನ್ನು ಪರಿಶೀಲಿಸಿ: ಕಾಫಲ್ ಮರದ ತೊಗಟೆಯೂ ಸಹ ಬಹಳ ಉಪಯುಕ್ತವಾಗಿದ್ದು, ಇದು ಮಾನಸಿಕ ಕಾಯಿಲೆಗಳು ಮತ್ತು ಅಲರ್ಜಿಗಳನ್ನು ಗುಣಪಡಿಸುತ್ತದೆ. 


4. ಅಸ್ತಮಾಗೆ ತುಂಬಾ ಒಳ್ಳೆಯದು: ಅಸ್ತಮಾ ಇರುವವರು ಕಫಲ್ ಹಣ್ಣನ್ನು ಸೇವಿಸುವುದರಿಂದ ಸರಳವಾಗಿ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. 


5. ಕೆಮ್ಮು, ಹುಣ್ಣುಗಳು: ಈ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಕೆಮ್ಮು, ಹುಣ್ಣು, ರಕ್ತಹೀನತೆ, ಜ್ವರಗಳಂಹ ಮತ್ತಿತರ ಸಮಸ್ಯೆಗಳು ಗುಣಮುಖವಾಗುತ್ತವೆ.


6. ಹಲ್ಲುನೋವು ನಿವಾರಣೆ: ಕಫಲ್ ಹಣ್ಣನ್ನು ಸೇವಿಸುವುದರಿಂದ ಕಿವಿನೋವು ಮತ್ತು ಹಲ್ಲುನೋವು ನಿವಾರಣೆಯಾಗುತ್ತದೆ. 


7. ಜೀರ್ಣಕ್ರಿಯೆಯಲ್ಲಿ ಸಹಾಯ: ಈ ಹಣ್ಣು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆ ಹಾಗೂ ಗ್ಯಾಸ್ ಸಮಸ್ಯೆ ನಿವಾರಿಸುತ್ತದೆ. 


8. ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ: ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಈ ಕಫಲ್ ಹಣ್ಣನ್ನು ತಿನ್ನುವುದರಿಂದ ಮುಕ್ತಿ ಪಡೆಯಬಹುದು. 


9. ಮಧುಮೇಹ: ಮಧುಮೇಹ ಇರುವವರು ಈ ಕಫಲ್ ಹಣ್ಣನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. 


10. ಚರ್ಮ ಮತ್ತು ಕೂದಲಿಗೆ ಒಳ್ಳೆಯದು: ಕಫಲ್ ಹಣ್ಣು ತ್ವಚೆ ಮತ್ತು ಕೂದಲನ್ನು ಆರೋಗ್ಯವಾಗಿರಿಸುತ್ತದೆ. ಇದನ್ನು ಸೇವಿಸುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.