ನವದೆಹಲಿ : ಸ್ವತಃ ಕೊರೋನಾ ವ್ಯಾಕ್ಸಿನ್ (Corona Vaccine) ತೆಗೆದುಕೊಳ್ಳದೆ ತೀವ್ರ ಟೀಕೆಗೆ ಗುರಿಯಾಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ಕಡೆಗೂ ವ್ಯಾಕ್ಸಿನ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಎರಡನೇ ಹಂತದ ಕೊರೋನಾ ಲಸಿಕೆ (Vaccine) ಹಂಚಿಕೆ ವೇಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ಲಸಿಕೆ ಪಡೆಯಲು ನಿಶ್ಚಯಿಸಿದ್ದಾರೆ. ಅದೇ ಎರಡನೇ ಹಂತದಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು (Chief Ministers) ಕೂಡ ಲಸಿಕೆ ಪಡೆಯಲಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ - COVID-19 Vaccine : ಪ್ರಪಂಚವು ನೈತಿಕ ವೈಫಲ್ಯದಿಂದ ದುರಂತದ ಅಂಚಿನಲ್ಲಿದೆ - WHO


ಜಗತ್ತಿನಾದ್ಯಂತ ಜನರಿಗೆ ಆತ್ಮವಿಶ್ವಾಸ ತುಂಬಲು ಜನ ನಾಯಕರಾದವರು ಕೊರೋನಾ ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ. ಅಮೆರಿಕಾದ ನೂತನ ಅಧ್ಯಕ್ಷ ಜೊ ಬೈಡೆನ್ (Jio Biden), ಉಪಾಧ್ಯಕ್ಷೆ ಕಮಲಾ‌ ಹ್ಯಾರೀಸ್ (Kamala Harris), ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ (Bories Johanson) ಸೇರಿದಂತೆ ಹಲವರು ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದರು. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತ್ರ ಪಲಾಯನ ಗೈದಿದ್ದರು. ಇದರಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಈ‌ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಮೋದಿ ಎರಡನೇ ಹಂತದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.


ಜನವರಿ 16ನೇ ತಾರೀಖಿನಂದು ಆರಂಭಗೊಂಡಿರುವ ಮೊದಲ ಹಂತದ ಕೊರೋನಾ ಲಸಿಕೆ (Corona Vaccine) ಹಾಕುವ ಕಾರ್ಯಕ್ರಮ ಜನವರಿ 28ರವರೆಗೂ ನಡೆಯಲಿದೆ. ಆದರೆ ಈವರೆಗೆ ಎರಡನೇ ಹಂತದ ಲಸಿಕೆ ಹಾಕುವ ಕಾರ್ಯಕ್ರಮದ ದಿನಾಂಕ ನಿಗಧಿಯಾಗಿಲ್ಲ.


ಮೊದಲ ಹಂತದಲ್ಲಿ ದೇಶಾದ್ಯಂತ ಒಟ್ಟು 3,006 ಕೇಂದ್ರಗಳನ್ನು ನಿರ್ಮಿಸಿ ಲಸಿಕೆ ವಿತರಣೆ ಮಾಡಲಾಗುತ್ತಿದೆ. ಎಲ್ಲಾ ಕೇಂದ್ರಗಳ ಜೊತೆ ಆನ್‌ಲೈನ್‌ ಮೂಲಕ ಸಂಪರ್ಕಿಸುವ ವ್ಯವಸ್ಥೆಯನ್ನೂ ರೂಪಿಸಲಾಗಿದೆ. ಪ್ರತಿ ಕೇಂದ್ರದಲ್ಲಿಯೂ ಪ್ರತಿ ದಿನ ಸಮಾರು 100  ಫಲಾನುಭವಿಗಳಿಗೆ ಲಸಿಕೆ ಹಾಕಲಾಗುತ್ತಿದೆ.


ಇದನ್ನೂ ಓದಿ - ಲಸಿಕೆ ಪಡೆದ ಬಳಿಕ Manipal Hospital ಚೇರಮನ್ ಡಾ. ಸುದರ್ಶನ್ ಬಲ್ಲಾಳ್ ಪ್ರತಿಕ್ರಿಯೆ ಏನು?


ಆಸ್ಟ್ರಾ ಜೆನೆಕಾ (Astrazeneca) ಮತ್ತು ಆಕ್ಸ್‌ಫರ್ಡ್‌ ಯುನಿವರ್ಸಿಟಿ (Oxford University) ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಹಾಗೂ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (Serum Institute Of India) ಪ್ರಯೋಗ ನಡೆಸುತ್ತಿರುವ ಕೋವಿಶೀಲ್ಡ್‌ (Covishield) ಹಾಗೂ ಹೈದರಾಬಾದ್‌ನ ಭಾರತ್‌ ಬಯೊಟೆಕ್‌ (Bharath Biotech) ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ (Indian Council Of Medical Research) ಅಭಿವೃದ್ಧಿ ಪಡಿಸಿರುವ (Covaxine) ಲಸಿಕೆಗಳನ್ನು ವಿತರಿಸಲಾಗುತ್ತಿದೆ. 


ಮೊದಲ ಹಂತದಲ್ಲಿ ನೀಡಲೆಂದೇ 1.65 ಕೋಟಿ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ (Covaxine) ಡೋಸ್‌ಗಳನ್ನು ಖರೀದಿಸಲಾಗಿದೆ. 1 ಕೋಟಿ ಆರೋಗ್ಯ ಕಾರ್ಯಕರ್ತರು, 2 ಕೋಟಿ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ. ಎರಡನೇ ಹಂತದಲ್ಲಿ 50 ವರ್ಷ ದಾಟಿದವರಿಗೆ ನೀಡಲಾಗುತ್ತದೆ. ಆನಂತರ, 50 ವರ್ಷದೊಳಗಿನ ಇತರ ಕಾಯಿಲೆಗಳಿರುವವರಿಗೆ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.