Poppy Health Benefits: ಗಸಗಸೆ ಬೀಜಗಳು ಆರೋಗ್ಯಕ್ಕೆ ಪ್ರಯೋಜನಕಾರಿ. ಫೈಬರ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ, ಸತು ಮತ್ತು ವಿಟಮಿನ್ ಬಿ 6 ಮತ್ತು ಇ ಯಲ್ಲಿ ಸಮೃದ್ಧವಾಗಿರುವ ಗಸಗಸೆಯು ಅನೇಕ ರೋಗಗಳಿಂದ ರಕ್ಷಿಸುತ್ತದೆ. ನರಗಳ ಕಾಯಿಲೆ, ಮಧುಮೇಹ, ಹೃದಯ ಕಾಯಿಲೆಗಳಂತಹ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ತೊಡೆದುಹಾಕಲು ಗಸಗಸೆ ಉಪಯುಕ್ತ.


COMMERCIAL BREAK
SCROLL TO CONTINUE READING

ಮೆದುಳಿನ ದಕ್ಷತೆ: ಮೆದುಳಿಗೆ ನರಗಳು ಮತ್ತು ರಕ್ತ ಕಣಗಳ ಹರಿವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಗಸಗಸೆ ಹೊಂದಿದೆ. ಮಿದುಳಿನ ನರ ಕೋಶಗಳು ಉತ್ತೇಜಿತಗೊಂಡಂತೆ, ಮೆದುಳಿನ ದಕ್ಷತೆಯು ಹೆಚ್ಚಾಗುತ್ತದೆ. ಹಾಗಾಗಿ ಗಸಗಸೆಯನ್ನು ಹಾಲಿನಲ್ಲಿ ಕುದಿಸಿ ತಿನ್ನುವುದರಿಂದ ಮಕ್ಕಳಿಗೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ವಯಸ್ಕರು ಗಸಗಸೆ ಬೀಜದ ಹಾಲನ್ನು ಸೇವಿಸುವುದರಿಂದ ಪ್ರಯೋಜನ ಪಡೆಯುತ್ತಾರೆ.


ಇದನ್ನೂ ಓದಿ: Virat Kohli: ಅಕಾಯ್ ಹುಟ್ಟುತ್ತಿದ್ದಂತೆ ಭಾರತ ತೊರೆದು ಈ ದೇಶದಲ್ಲಿ ನೆಲೆಸಲು ವಿರಾಟ್ ನಿರ್ಧಾರ! ಕೊನೆಯಾಗುತ್ತಾ ಟೀಂ ಇಂಡಿಯಾದ ನಂಟು?


ಮೂಳೆಗಳ ಆರೋಗ್ಯ: ಗಸಗಸೆಯಲ್ಲಿ ಕ್ಯಾಲ್ಸಿಯಂ ಮತ್ತು ತಾಮ್ರ ಸಮೃದ್ಧವಾಗಿದೆ. ಮೂಳೆಗಳ ಆರೋಗ್ಯಕ್ಕೆ ಈ ಎರಡೂ ಪೋಷಕಾಂಶಗಳು ಮುಖ್ಯ. ಜೊತೆಗೆ ಮೂಳೆಗಳ ನಡುವಿನ ಸಂಯೋಜಕ ಅಂಗಾಂಶವನ್ನು ಬಲಪಡಿಸುತ್ತದೆ. ಇದರಿಂದ ಕೀಲು ನೋವಿನಿಂದ ಮುಕ್ತಿ ಪಡೆಯಬಹುದು.


ರಕ್ತ ಪರಿಚಲನೆ: ಗಸಗಸೆ ಬೀಜಗಳಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಹಾನಿಕಾರಕ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ದೇಹದಲ್ಲಿ ಉತ್ತಮ ಎಚ್‌ ಡಿ ಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಗಸಗಸೆ ಬೀಜಗಳಲ್ಲಿ ಕಬ್ಬಿಣದ ಅಂಶವೂ ಸಮೃದ್ಧವಾಗಿದೆ. ಆದ್ದರಿಂದ, ಇದು ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ.


ನಿದ್ರಾಹೀನತೆ: ನಿದ್ರಾಹೀನತೆಯಿಂದ ಬಳಲುತ್ತಿರುವವರು ರಾತ್ರಿಯಲ್ಲಿ ಗಸಗಸೆಯನ್ನು ಹೆಚ್ಚು ಸೇವಿಸಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಒತ್ತಡವನ್ನು ಕಡಿಮೆ ಮಾಡಲು, ಮನಸ್ಸನ್ನು ಶಾಂತಗೊಳಿಸಲು, ಆತಂಕವನ್ನು ಕಡಿಮೆ ಮಾಡಲು ಮತ್ತು ಶಾಂತ ನಿದ್ರೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.


ರೋಗನಿರೋಧಕ ಶಕ್ತಿ: ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ವಿಟಮಿನ್ ಸಿ ಯಷ್ಟೇ ಸತುವು ಮುಖ್ಯವಾಗಿದೆ. ಗಸಗಸೆ ಬೀಜಗಳಲ್ಲಿ ಸತುವು ಸಮೃದ್ಧವಾಗಿದ್ದು, ಇದನ್ನು ಆಗಾಗ ಸೇರಿಸುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.


ಥೈರಾಯ್ಡ್ ಸಮಸ್ಯೆ: ಥೈರಾಯ್ಡ್ ಗ್ರಂಥಿಗೆ ಸತುವು ಬಹಳ ಮುಖ್ಯವಾದ ಪೋಷಕಾಂಶವಾಗಿದೆ. ಇದು ಥೈರಾಯ್ಡ್ ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ. ಆದ್ದರಿಂದ, ಥೈರಾಯ್ಡ್ ಸಮಸ್ಯೆಯಿರುವ ಜನರು ಸತುವು ಸಮೃದ್ಧವಾಗಿರುವ ಗಸಗಸೆಯನ್ನು ಸೇವಿಸಬಹುದು.


ಬಾಯಿ ಹುಣ್ಣು: ಪದೇ ಪದೇ ಬಾಯಿ ಹುಣ್ಣುಗಳಿದ್ದಲ್ಲಿ ಗಸಗಸೆಯನ್ನು ಸೇವಿಸಬಹುದು. ಆಂಟಿಬ್ಯಾಕ್ಟೀರಿಯಲ್ ಮಾತ್ರವಲ್ಲದೆ, ಗಸಗಸೆ ಬೀಜಗಳು ದೇಹವನ್ನು ತಂಪಾಗಿಸುತ್ತವೆ.


ರಾತ್ರಿಯಲ್ಲಿ ಗಸಗಸೆಯನ್ನು ಪುಡಿಮಾಡಿ ಹಾಲಿನಲ್ಲಿ ಕುದಿಸಿ ಕುಡಿಯಿತಿರಿ. ಇದು ಆರೋಗ್ಯಕ್ಕೆ ಎಲ್ಲಾ ರೀತಿಯಲ್ಲೂ ಪ್ರಯೋಜನಕಾರಿಯಾಗಿದೆ.


ಇದನ್ನೂ ಓದಿ: ಶಾಕಾಹಾರಿಗಳಿಗೊಂದು ಸಂತಸದ ಸುದ್ದಿ ಪ್ರಕಟಿಸಿದ Zomato, ಬಿಡುಗಡೆಯಾಗಿದೆ ಹೊಸ ವೈಶಿಷ್ಟ್ಯ!


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE KANNADA NEWS ಈ ಮಾಹಿತಿಗೆ ಜವಾಬ್ದಾರರಾಗಿರುವುದಿಲ್ಲ.)


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ