Pure Veg Fleet Mode On Zodato: ನೀವು ಕೂಡ ಶುದ್ಧ ಶಾಕಾಹಾರಿಗಳಾಗಿದ್ದು, ಮಾಂಸಾಹಾರಿ ಆಹಾರವನ್ನು ನೀಡುವ ಯಾವುದೇ ಸ್ಥಳದಲ್ಲಿ ತಿನ್ನುವುದನ್ನು ತಪ್ಪಿಸಲು ಬಯಸುತ್ತಿದ್ದರೆ, ಈ ಸಂತಸದ ಸುದ್ದಿ ಕೇವಲ ನಿಮಗಾಗಿ. ಜೊಮಾಟೊ ಸಹ-ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ ಅವರು ಮಂಗಳವಾರ ತಮ್ಮ ವೇದಿಕೆಯಲ್ಲಿ 'ಪ್ಯೂರ್ ವೆಜ್ ಫ್ಲೀಟ್' ಮತ್ತು 'ಪ್ಯೂರ್ ವೆಜ್ ಮೋಡ್' ಗೆ ಚಾಲನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಈ ಪ್ಯೂರ್ ವೆಜ್ ಮೋಡ್ನಲ್ಲಿ, ಕೇವಲ ಪ್ಯೂರ್ ವೇಜ್ ರೆಸ್ಟೋರೆಂಟ್ ಗಳನ್ನು ಮಾತ್ರ ಪಟ್ಟಿಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಮಾಂಸಾಹಾರಿ ಆಹಾರವನ್ನು ಸರ್ವ್ ಮಾಡುವ ರೆಸ್ಟೋರೆಂಟ್ಗಳನ್ನು ಈ ಮೋಡ್ನಿಂದ ಹೊರಗಿಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. (Technology News In Kannada)
ಈ ಪ್ಯೂರ್ ವೆಜ್ ಮೋಡ್ ಮತ್ತು ಪ್ಯೂರ್ ವೆಜ್ ಫ್ಲೀಟ್ ಅನ್ನು ಯಾವುದೇ ನಿರ್ದಿಷ್ಟ ಧರ್ಮ ಅಥವಾ ರಾಜಕೀಯ ಪಕ್ಷಕ್ಕೆ ಸೇವೆ ಸಲ್ಲಿಸಲು ತರಲಾಗಿಲ್ಲ ಎಂದು ಗೋಯಲ್ ಹೇಳಿದ್ದಾರೆ. ಪ್ಯೂರ್ ವೆಜ್ ರೆಸ್ಟೋರೆಂಟ್ಗಳಿಂದ ಆಹಾರವನ್ನು ಆರ್ಡರ್ ಮಾಡಲು ಬಯಸುವ ಜನರಿಗೆ ಮಾತ್ರ ಇದು ವಿಶೇಷ ಸೇವೆಯನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ. (zomato started new section for pure veg people)
ಸಸ್ಯಾಹಾರಿ ಜನರಿಗಾಗಿ ಈ ಸೇವೆ
ಆಹಾರವನ್ನು ಹೇಗೆ ಬೇಯಿಸಲಾಗುತ್ತದೆ ಮತ್ತು ಅದನ್ನು ಅವರಿಗೆ ಹೇಗೆ ತಲುಪಿಸಲಾಗುತ್ತದೆ ಎಂದು ಗೋಯಲ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಥ್ರೆಡ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ-Infosys: ನಾಲ್ಕು ತಿಂಗಳ ಮೊಮ್ಮಗನಿಗೆ 240 ಕೋಟಿ ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ ನಾರಾಯಣ ಮೂರ್ತಿ
ಪ್ಯೂರ್ ವೇಜ್ ಮೋಡ್ ಎಂದರೇನು?
Zomato ನ ಪ್ಯೂರ್ ವೆಜ್ ಫ್ಲೀಟ್ ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್ಗಳಿಂದ ಮಾತ್ರ ಆರ್ಡರ್ಗಳನ್ನು ತಲುಪಿಸಲಿದೆ. ಇದರರ್ಥ ಮಾಂಸಾಹಾರಿ ಆಹಾರ ಅಥವಾ ಮಾಂಸಾಹಾರಿ ರೆಸ್ಟೋರೆಂಟ್ಗಳು ನೀಡುವ ಸಸ್ಯಾಹಾರಿ ಆಹಾರವು ನಮ್ಮ 'ಶುದ್ಧ ಸಸ್ಯಾಹಾರಿ ಫ್ಲೀಟ್'ಗೆ ಮೀಸಲಾದ ಹಸಿರು ವಿತರಣಾ ಬಾಕ್ಸ್ಗಳ ಒಳಗೆ ಎಂದಿಗೂ ಹೋಗುವುದಿಲ್ಲ ಎಂದು ಗೋಯಲ್ ಹೇಳಿದ್ದಾರೆ.
ಇದನ್ನೂ ಓದಿ-Modi Government ಅದ್ಭುತ ಯೋಜನೆ, ಮಹಿಳೆಯರ ಖಾತೆಗೆ ಬರುತ್ತವೆ 5 ಲಕ್ಷ ರೂ!
ಕೇಕ್ ವಿತರಣೆಗೂ ಪ್ರತ್ಯೇಕ ಫ್ಲೀಟ್ ಬರಲಿದೆ
ಮುಂಬರುವ ದಿನಗಳಲ್ಲಿ, ವಿವಿಧ ಗ್ರಾಹಕರ ಅಗತ್ಯತೆಗಳಿಗೆ ಅನುಗುಣವಾಗಿ ವಿಶೇಷ ಫ್ಲೀಟ್ ಅನ್ನು ಸೇರಿಸಲು ಕಂಪನಿಯು ಯೋಜಿಸುತ್ತಿದೆ ಎಂದು ಜೊಮಾಟೊ ಹೇಳಿದೆ. ಕಂಪನಿಯು ಹೈಡ್ರಾಲಿಕ್ ಬ್ಯಾಲೆನ್ಸರ್ಗಳೊಂದಿಗೆ ವಿಶೇಷ ಕೇಕ್ ಡೆಲಿವರಿ ಫ್ಲೀಟ್ನೊಂದಿಗೆ ಬರಲಿದೆ ಎಂದು ಗೋಯಲ್ ಹೇಳಿದ್ದಾರೆ, ಇದು ಡೆಲಿವರಿ ಸಮಯದಲ್ಲಿ ಕೇಕ್ ಹಾಳಾಗುವುದನ್ನು ತಡೆಯುತ್ತದೆ. ಮುಂದಿನ ಕೆಲ ವಾರಗಳಲ್ಲಿ ಈ ಸೇವೆಯನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುವುದು ಎಂದು ಗೋಯಲ್ ಹೇಳಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ