ಪ್ರಸವಾ ನಂತರವು ತಾಯಿ ಮಗುವಿಗೆ ಜನ್ಮ ನೀಡಿದ ನಂತರದ ಸಮಯವನ್ನು ಸೂಚಿಸುತ್ತದೆ.  ಹೆಚ್ಚಿನ ಮಹಿಳೆಯರು ಮಗು ಜನಿಸಿದ ಕೆಲವು ದಿನಗಳ ನಂತರ ದುಃಖ ಮತ್ತು ಒಂಟಿತನವನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ಇದನ್ನು ಬೇಬಿ ಬ್ಲೂಸ್ ಎಂದು ಕರೆಯಲ್ಪಡುತ್ತದೆ. ಈ ಹಂತವು ಸಾಮಾನ್ಯವಾಗಿದ್ದು, ಸಾಮಾನ್ಯವಾಗಿ ಹೆರಿಗೆಯ ನಂತರ ಕಣ್ಮರೆಯಾಗಲಿದೆ. ಆದರೆ  ಬೇಬಿ ಬ್ಲೂಸ್ 2 ವಾರಗಳಿಗಿಂತ ಹೆಚ್ಚು ಕಾಲ ಇದ್ದರೆ, ನೀವು ಪ್ರಸವಾ ನಂತರದ ಖಿನ್ನತೆಯಿಂದ ಬಳಲುತ್ತಿರುವ ಸಾಧ್ಯತೆಯಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮುಂಜಾನೆ ವಾಕಿಂಗ್ ನಂತರ ಮಾಡದಿರಿ ಈ ತಪ್ಪುಗಳನ್ನು!


ಹೊಸ ತಾಯಂದಿರಿಗೆ ಪ್ರಸವಾ ನಂತರದ ಮಾನಸಿಕ ಆರೋಗ್ಯ ರಕ್ಷಣೆ ಅತ್ಯಗತ್ಯ. ಆದಾಗ್ಯೂ ಇದು ಆಗಾಗ್ಗೆ ನಿರ್ಲಕ್ಷಿಸಲ್ಪಡುವ ಒಂದು ಅಂಶವಾಗಿದೆ. ಹೆರಿಗೆಯ ನಂತರ ಮಹಿಳೆಯರ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಅಗತ್ಯದ ಬಗ್ಗೆ ಸಾಕಷ್ಟು ಮಾತನಾಡದ ಕಾರಣ, ಹೊಸ ತಾಯಂದಿರು ಈ ಅವಧಿಯಲ್ಲಿ ನಕಾರಾತ್ಮಕ ಆಲೋಚನೆಗಳನ್ನು ಹೊಂದಿರುತ್ತಾರೆ. ಅವರು ತಮ್ಮ ಸಂಗಾತಿಗಳು, ಪ್ರೀತಿ ಪಾತ್ರರು ಮತ್ತು ಕುಟುಂಬದಿಂದ ತಮ್ಮ ಭಾವನೆಗಳನ್ನು ಮರೆಮಾಚುವ ಮೂಲಕ ಮೌನವಾಗಿ ನರಳುತ್ತಾರೆ. ಇದು ಅವರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಹೊಸ ತಾಯಂದಿರು ತಮ್ಮ ದೈಹಿಕ ಆರೋಗ್ಯದ ಮೇಲೆ ಗಮನ ಕೇಂದ್ರೀಕರಿಸಿದಂತೆ ತಮ್ಮ ಪ್ರಸವಾ ನಂತರದ ಮಾನಸಿಕ ಆರೋಗ್ಯದ ಮೇಲೆ ಗಮನ ಹರಿಸಲು ಪ್ರಾರಂಭಿಸುವ ಸಮಯ ಇದಾಗಿದೆ.


ಹೊಸ ತಾಯಂದಿರು ಪ್ರಸವಾ ನಂತರ ತಮ್ಮ ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳುವುದು ಹೇಗೆ?


ಸ್ವಯಂ ಕಾಳಜಿ ಮತ್ತು ಸ್ವ-ಪ್ರೀತಿಯನ್ನು ಅಭ್ಯಾಸ ಮಾಡಿ: ಇದನ್ನು ಮಾಡುವುದು ಸುಲಭವಾಗಿದ್ದರೂ, ಹೊಸ ತಾಯಂದಿರು ಕೆಲ  ಸಮಯದವರೆಗೆ ವಿರಾಮ ತೆಗೆದುಕೊಳ್ಳುವ ಮೂಲಕ ಸ್ವಯಂ-ಆರೈಕೆಯನ್ನು ಅಭ್ಯಾಸ ಮಾಡಲು ಸಕ್ರಿಯವಾಗಬೇಕು. ಓದುವುದು, ಸಂಗೀತ ಕೇಳುವುದು, ಅಥವಾ ವ್ಯಾಯಾಮದಂತಹ ಆಸಕ್ತಿದಾಯದ  ವಿಷಯಗಳನ್ನು ಆನಂದಿಸಲು ಮಗುವಿನಿಂದ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬೇಕು. ಇದು ನಿಮ್ಮ ಮನಸ್ಥಿತಿಯನ್ನು ಉತ್ತಮವಾಗಿಸುತ್ತದೆ ಹಾಗೂ ನಿಮ್ಮ ದೇಹವು ಹೆರಿಗೆಯಿಂದ ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಪುಟ್ಟ ಮಗುವಿಗೆ ಜನ್ಮ ನೀಡಿದ್ದಕ್ಕಾಗಿ ನೀವು ನಿಮ್ಮ ದೇಹವನ್ನು ಶ್ಲಾಘಿಸಬೇಕು ಮತ್ತು ಸಂತಸ ಪಡಬೇಕು. ನಿಮ್ಮನ್ನು ನೀವು ಮುದ್ದಾಡಿಕೊಳ್ಳುವ ಮಗುವಿನ ಜನ್ಮ ನೀಡಿರುವುದನ್ನು ಪುರಸ್ಕರಿಸಬೇಕು. ಒಳ್ಳೆಯ ಆಲೋಚನೆಗಳನ್ನು ಪಡೆಯಲು ಮಸಾಜ್ ತೆಗೆದುಕೊಳ್ಳಬೇಕು.


ಚೆನ್ನಾಗಿ ನಿದ್ರೆ ಮಾಡಿ ಮತ್ತು ಆರೋಗ್ಯಕರ ಆಹಾರ ಸೇವಿಸಿ: ಮಗುವನ್ನು ಪಡೆದ ನಂತರ ಉತ್ತಮ ರಾತ್ರಿಯ ನಿದ್ರೆಯನ್ನು ಪಡೆಯುವುದು ಸುಲಭವಲ್ಲ ಏಕೆಂದರೆ ನೀವು ರಾತ್ರಿಯಲ್ಲಿ ಮಗುವಿಗೆ ಹಾಲುಣಿಸಬೇಕಾಗುತ್ತದೆ. ನಿದ್ರೆಯ ಕೊರತೆಯಿಂದಾಗಿ, ಹೊಸ ತಾಯಂದಿರು  ಬೇಸರವನ್ನು ಅನುಭವಿಸುತ್ತಾರೆ. ಇದನ್ನು ಪಡೆಯಲು ಪ್ರೀತಿಪಾತ್ರರು ಮತ್ತು ಕುಟುಂಬದವರು ಮುಂದೆ ಬರಬೇಕು ಮತ್ತು ಮಗುವನ್ನು ನೋಡಿಕೊಳ್ಳುವ ಮೂಲಕ ಹೊಸ ತಾಯಂದಿರ ಹೊರೆಯನ್ನು ಹಂಚಿಕೊಳ್ಳಲು ಸಹಾಯ ಮಾಡಬೇಕು. ಒಮೆಗಾ 3 ಕೊಬ್ಬಿನಾಮ್ಲಗಳಂತಹ ಆರೋಗ್ಯಕರ ಆಹಾರವನ್ನು ಸೇವಿಸುವುದು ದೈಹಿಕ ಬದಲಾವಣೆಯಿಂದ ಶೀಘ್ರ ಚೇತರಿಸಿಕೊಳ್ಳಲು ಸಹಾಯ ಮಾಡವ ಜೊತೆಗೆ ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ. 
 
ನಿಮ್ಮನ್ನು ಅರ್ಥಮಾಡಿಕೊಳ್ಳುವ ಯಾರೊಂದಿಗಾದರೂ ಮಾತನಾಡಿ: ನಿಮ್ಮನ್ನು ಮತ್ತು ನಿಮ್ಮ ನೋವನ್ನು ಅರ್ಥಮಾಡಿಕೊಳ್ಳುವ ಜನರನ್ನು ನೀವು ಹುಡುಕಬೇಕು. ನಿಮ್ಮ ಹೋರಾಟಗಳ ಬಗ್ಗೆ ಅವರೊಂದಿಗೆ ಪಾರದರ್ಶಕವಾಗಿರಲು ಪ್ರಯತ್ನಿಸಿ, ಮತ್ತು ಆಶಾದಾಯಕವಾಗಿ, ಅವರು ಆ ಸವಾಲುಗಳನ್ನು ನಿವಾರಿಸಲು ನಿಮಗೆ ಸಹಾಯ ಮಾಡಬಹುದು. ನೀವು ಅನುಭವಿಸುತ್ತಿರುವ ಭಾವನೆಗಳು ಸಾಮಾನ್ಯ ಎಂದು ನೆನಪಿಡಿ. ಅವುಗಳನ್ನು ಎಲ್ಲರಿಂದಲೂ ಮರೆಮಾಚುವ ಅಗತ್ಯವಿಲ್ಲ. ನೀವು ನಂಬುವ ಜನರ ಮೇಲೆ ವಿಶ್ವಾಸವಿಡುವುದು ನಿಮಗೆ ಮಾನ್ಯವಾಗಿದೆ ಎಂದು ಭಾವಿಸುವಂತೆ ಮಾಡುತ್ತದೆ.  


ನಿಮ್ಮ ಬಗ್ಗೆ ದಯೆ ತೋರಿ: ನಿಮ್ಮ ಬಗ್ಗೆ ನೀವು ತುಂಬಾ ಕಠಿಣವಾಗಿರಬೇಡಿ. ನಿಮ್ಮ ದೇಹವು ಬಹಳಷ್ಟು ಯಾತನೆಯನ್ನು ಅನುಭವಿಸಿದೆ, ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಅವಾಸ್ತವಿಕ ಸೌಂದರ್ಯ ಮಾನದಂಡದೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳುವುದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಹೊಸ ದೇಹ ಮತ್ತು ಜೀವನವನ್ನು ಸ್ವೀಕರಿಸಲು ಮತ್ತು ಪ್ರಶಂಸಿಸಲು ನಿಮ್ಮ ಸಮಯವನ್ನು ತೆಗೆದುಕೊಳ್ಳಿ. 


ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸದಿದ್ದರೆ ಏನಾಗುತ್ತದೆ?


ಹೊಸ ತಾಯಂದಿರು ತಮ್ಮ ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸಿದರೆ, ಅದು ಪ್ರಸವಾ ನಂತರದ ಖಿನ್ನತೆಯಂತಹ ಹೆಚ್ಚು ತೀವ್ರವಾದ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಪ್ರಸವಾ ನಂತರದ ಖಿನ್ನತೆಯು ಅವರನ್ನು ಬೇಸರ, ಕಿರಿಕಿರಿ, ಹತಾಶೆ ಮತ್ತು ಅತಿರೇಕದ ಭಾವನೆಗೆ ಒಳಗಾಗುವಂತೆ ಮಾಡುತ್ತದೆ. ಮಗುವಿನ ಅಗತ್ಯಗಳ ಬಗ್ಗೆ ಗಮನ ಹರಿಸದಿದ್ದಕ್ಕಾಗಿ ಅವರು ತಪ್ಪಿತಸ್ಥರೆಂದು ಭಾವಿಸುತ್ತಾರೆ, ಇದು ಅವರ ಖಿನ್ನತೆಯನ್ನು ಮತ್ತಷ್ಟು ಹದಗೆಡಿಸುತ್ತದೆ. ತಾಯಂದಿರಲ್ಲಿ ಪ್ರಸವಾ ನಂತರದ ಖಿನ್ನತೆಯು ನವಜಾತ ಶಿಶುವಿನ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮಗುವು ನಡವಳಿಕೆಯ ಸಮಸ್ಯೆಗಳನ್ನು ಅನುಭವಿಸಬಹುದು, ಭಾಷಾ ಬೆಳವಣಿಗೆಯಲ್ಲಿ ವಿಳಂಬವಾಗಬಹುದು ಮತ್ತು ಉದ್ವೇಗ ಮತ್ತು ಕಿರಿಕಿರಿಯನ್ನು ಅನುಭವಿಸಬಹುದು.  ಇದಲ್ಲದೆ, ಮಗುವು ಒತ್ತಡವನ್ನು ನಿಭಾಯಿಸುವ ಮತ್ತು ಅವರ ಬಾಲ್ಯದುದ್ದಕ್ಕೂ ಸಾಮಾಜಿಕ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಸಮಸ್ಯೆಗಳನ್ನು ಸಹ ಹೊಂದಿರಬಹುದು. 


ಇದನ್ನೂ ಓದಿ: Mother's Day special: ಪ್ರತಿಯೊಬ್ಬ ತಾಯಿಯೂ ಸೇವಿಸಬೇಕಾದ ಆರೋಗ್ಯಕರ ಆಹಾರ


ಟೇಕ್ ಅವೇಸ್: ಮಗುವನ್ನು ಪಡೆದ ನಂತರ ಬಲವಾದ ಭಾವನೆಗಳನ್ನು ಅನುಭವಿಸುವುದು ಸಾಮಾನ್ಯವಾಗಿದೆ. ಆದರೆ ಪ್ರಸವಾ ನಂತರದ ಖಿನ್ನತೆಯು ಅಲ್ಲ. ಈ ಭಾವನೆಗಳೊಂದಿಗೆ ವ್ಯವಹರಿಸಲು ನಿಮಗೆ ಕಷ್ಟವಾಗುತ್ತಿದ್ದರೆ, ನೀವು ವೃತ್ತಿಪರ ಸಹಾಯವನ್ನು ಪಡೆಯಬೇಕು.


-ಡಾ. ಭಾರತಿ ರಮೇಶ್, ಹಿರಿಯ ಸಮಾಲೋಚಕರು - ಪ್ರಸೂತಿ ಮತ್ತು ಸ್ತ್ರೀರೋಗತಜ್ಞರು, ಮದರ್ ಹುಡ್ ಆಸ್ಪತ್ರೆ, ಬನಶಂಕರಿ, ಬೆಂಗಳೂರು


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.