Boiled Potato Health Benefits: ಪ್ರತಿ ಭಾರತೀಯರ ಅಡುಗೆ  ಮನೆಯಲ್ಲಿ ಆಲೂಗಡ್ಡೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಆಲೂಗಡ್ಡೆಯನ್ನು ಎಲ್ಲಾ ರೀತಿಯ ತರಕಾರಿಗಳೊಂದಿಗೆ ಬೇಯಿಸಲಾಗುತ್ತದೆ. ಆದರೆ ಆಲೂಗಡ್ಡೆಯ ಅತಿಯಾದ ಸೇವನೆಯು ಬೊಜ್ಜಿಗೆ ಕಾರಣವಾಗುತ್ತದೆ ಎಂದು ಹಲವರು ನಂಬುತ್ತಾರೆ. ಹಾಗಾಗಿ, ಕೆಲವರಿಗೆ ಆಲೂಗಡ್ಡೆ ನೆಚ್ಚಿನ ತರಕಾರಿಯಾದರೂ ಅದನ್ನು ಕಡಿಮೆ ತಿನ್ನುತ್ತಾರೆ.  ಆಲೂಗೆಡ್ಡೆಯನ್ನು ವಿಶೇಷ ರೀತಿಯಲ್ಲಿ ಬೇಯಿಸಿ ಸೇವಿಸುವುದರಿಂದ ನಿಮ್ಮ ತೂಕವು ಹೆಚ್ಚಾಗುವುದಿಲ್ಲ ಎಂದು ನಿಮಗೆ ತಿಳಿದಿದೆಯೇ?


COMMERCIAL BREAK
SCROLL TO CONTINUE READING

ಬೇಯಿಸಿದ ಆಲೂಗಡ್ಡೆಯ 4 ಪ್ರಯೋಜನಗಳು:
ಬೇಯಿಸಿದ ಆಲೂಗಡ್ಡೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಬೇಯಿಸಿದ ಆಲೂಗಡ್ಡೆ ಸೇವನೆಯು ತೂಕವನ್ನು ಕಡಿಮೆ (Weight Loss) ಮಾಡಲು ಸಹಕಾರಿ ಎಂದು ತಿಳಿದರೆ ನಿಮಗೆ ಅಚ್ಚರಿ ಆಗಬಹುದು. ಬೇಯಿಸಿದ ಆಲೂಗಡ್ಡೆ ಪೊಟ್ಯಾಸಿಯಮ್, ರಂಜಕ, ಬಿ-ಕಾಂಪ್ಲೆಕ್ಸ್ ಜೀವಸತ್ವಗಳು ಮತ್ತು ವಿಟಮಿನ್-ಸಿಗಳ ನಿಧಿಯಾಗಿದೆ. ಇದಲ್ಲದೆ, ಇದು ಕಡಿಮೆ ಕ್ಯಾಲೋರಿ ಮತ್ತು ಕೊಬ್ಬಿನಂಶವನ್ನು ಹೊಂದಿದೆ. ಬೇಯಿಸಿದ ಆಲೂಗಡ್ಡೆಯನ್ನು ಸೇವಿಸುವುದರಿಂದ ದೇಹಕ್ಕೆ ಶಕ್ತಿ ಬರುತ್ತದೆ. ಇಂದು ನಾವು ಬೇಯಿಸಿದ ಆಲೂಗಡ್ಡೆಯ ಕೆಲವು ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.


ಇದನ್ನೂ ಓದಿ- Potato Juice: ಕೊಲೆಸ್ಟ್ರಾಲ್ ಕಡಿಮೆ ಮಾಡಲು ಆಲೂಗಡ್ಡೆ ರಸವನ್ನು ಈ ರೀತಿ ತಯಾರಿಸಿ


ಬೇಯಿಸಿದ ಆಲೂಗಡ್ಡೆಯ ಪ್ರಯೋಜನಗಳು:
1. ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ:

ಬೇಯಿಸಿದ ಆಲೂಗಡ್ಡೆಯಲ್ಲಿ ಕೊಬ್ಬಿನ ಪ್ರಮಾಣ ತುಂಬಾ ಕಡಿಮೆ. ಇದರ ಸಿಪ್ಪೆಯಲ್ಲಿಯೂ ಹಲವು ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಸಿಪ್ಪೆಯೊಂದಿಗೆ ಇದನ್ನು ತಿನ್ನುವುದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.


2. ಜೀವಸತ್ವಗಳ ಸಮೃದ್ಧ ಮೂಲ:
ಬೇಯಿಸಿದ ಆಲೂಗಡ್ಡೆ (Boiled Potato) ವಿಟಮಿನ್ ಬಿ ಮತ್ತು ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ಪ್ರತಿದಿನ ಒಂದು ಬೇಯಿಸಿದ ಆಲೂಗಡ್ಡೆಯನ್ನು ಸೇವಿಸುವುದರಿಂದ ದೇಹವು ವಿಟಮಿನ್ ಬಿ-6 ಅನ್ನು ಪಡೆಯುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್-ಸಿ ಕೂಡ ಇದೆ.


ಇದನ್ನೂ ಓದಿ- Weight Loss Tips: ಕೇವಲ 3 ತಿಂಗಳಿನಲ್ಲಿ ಹೊಟ್ಟೆ ಕರಗಿಸಲು ಸಿಂಪಲ್ ಟಿಪ್ಸ್


3. ಫಾಸ್ಫರಸ್ ಸಮೃದ್ಧವಾಗಿದೆ:
ಬೇಯಿಸಿದ ಆಲೂಗಡ್ಡೆಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಬೇಯಿಸಿದ ಆಲೂಗಡ್ಡೆ ಸುಮಾರು 25 ಪ್ರತಿಶತ ಹೆಚ್ಚು ಮೆಗ್ನೀಸಿಯಮ್ ಅನ್ನು ಹೊಂದಿರುತ್ತದೆ. ಇದರಲ್ಲಿ ಫೋಲೇಟ್ ಕೂಡ ಸಮೃದ್ಧವಾಗಿದೆ, ಆದ್ದರಿಂದ ಇದು ಗರ್ಭಾವಸ್ಥೆಯಲ್ಲಿ ಮಗುವಿನ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎನ್ನಲಾಗುತ್ತದೆ.


4. ಬಾಯಿ ಹುಣ್ಣುಗಳಿಗೆ ಪ್ರಯೋಜನಕಾರಿ:
ಬಾಯಿಯಲ್ಲಿ ಹುಣ್ಣು ಸಮಸ್ಯೆಗೆ ಆಲೂಗಡ್ಡೆ ತುಂಬಾ ಪ್ರಯೋಜನಕಾರಿ, ಆದ್ದರಿಂದ ಆಲೂಗಡ್ಡೆಯನ್ನು ಖಂಡಿತವಾಗಿ ಸೇವಿಸಿ. ಆಲೂಗಡ್ಡೆಯ ಸೇವನೆಯು ನಿಮ್ಮ ಮೆದುಳನ್ನು ಆರೋಗ್ಯವಾಗಿಡಲು ಸಹ ಸಹಾಯ ಮಾಡುತ್ತದೆ. ದೇಹದಲ್ಲಿನ ಗ್ಲೂಕೋಸ್ ಮಟ್ಟ, ಆಮ್ಲಜನಕ, ಹಾರ್ಮೋನುಗಳು, ಅಮೈನೋ ಆಮ್ಲಗಳು ಮತ್ತು ಕೊಬ್ಬಿನಾಮ್ಲಗಳ ಪೂರೈಕೆ ಮತ್ತು ಒಮೆಗಾ -3 ನಂತಹ ಅಂಶಗಳಿಂದ ಸಮೃದ್ಧವಾಗಿರುವ ಕಾರಣ ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಹೇಳಲಾಗುತ್ತದೆ.


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.