Precautions during vaccination : ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಮೊದಲು ನೆನಪಿರಲಿ ಈ ವಿಷಯಗಳು; ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ!
ಇಲ್ಲಿಯವರೆಗೆ ಕೇವಲ 26 ಮಿಲಿಯನ್ ಜನರು ಲಸಿಕೆಯ ಎರಡನೇ ಡೋಸ್ ತೆಗೆದುಕೊಂಡಿದ್ದಾರೆ
ಭಾರತದಲ್ಲಿ ಪ್ರತಿದಿನ ಲಕ್ಷಾಂತರ ಜನರಿಗೆ ಕರೋನಾ ವೈರಸ್ ತಗುಲುತ್ತಿದೆ. ಇಂದಿನ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೊರೋನಾ ಲಸಿಕೆ ಹಾಕುವ ಅಭಿಯಾನ ಪ್ರಾರಂಭವಾಗಿದೆ. 130 ಕೋಟಿಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ, ಇಲ್ಲಿಯವರೆಗೆ ಕೇವಲ 26 ಮಿಲಿಯನ್ ಜನರು ಲಸಿಕೆಯ ಎರಡನೇ ಡೋಸ್ ತೆಗೆದುಕೊಂಡಿದ್ದಾರೆ, ಆದರೆ ಸುಮಾರು 12 ಕೋಟಿ ಜನರು ಒಂದನೇ ಡೋಸ್ ಲಸಿಕೆ ತೆಗೆದುಕೊಂಡಿದ್ದಾರೆ. ಜುಲೈ ವೇಳೆಗೆ ಸುಮಾರು 25 ಕೋಟಿ ಜನರಿಗೆ ಕೊರೊನಾವೈರಸ್ ಲಸಿಕೆ ಹಾಕಿಸುವ ಗುರಿ ಭಾರತ ಹೊಂದಿದೆ.
ಕೊರೋನಾ ಲಸಿಕೆ ಹಾಕಿಸಿಕೊಳ್ಳುವ ಲಸಿಕೆ ಕೇಂದ್ರದಲ್ಲಿ ಭಾರಿ ಜನಸಮೂಹವಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ಆರೋಗ್ಯ ಅಧಿಕಾರಿಗಳು ಕೋವಿಡ್‌ನ ಲಸಿಕೆ ಪಡೆಯಲು ಬರುವ ಜನಸಮೂಹವು ಸೂಪರ್‌ಸ್ಪ್ರೆಡರ್(Superspreader) ಆಗಬಾರದು ಎಂಬ ಆತಂಕವನ್ನು ವ್ಯಕ್ತಪಡಿಸಿದೆ, ಇದರಿಂದಾಗಿ ರೋಗದ ವೇಗ ಮತ್ತಷ್ಟು ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡು ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.
ಇದನ್ನೂ ಓದಿ : Immunity Booster : ಬೆಳಗಿನ ಚಹಾದಲ್ಲಿ ಈ ಎರಡನ್ನು ಬೆರೆಸಿ ಸೇವಿಸಿದರೆ ಹೆಚ್ಚುತ್ತದೆ ರೋಗ ನಿರೋಧಕ ಶಕ್ತಿ..!
ನೀವು ಲಸಿಕೆ ಪಡೆದಾಗ ಈ ವಿಷಯಗಳನ್ನು ನೆನಪಿನಲ್ಲಿರಲಿ :
1. ಡಬಲ್ ಮಾಸ್ಕ್ ಧರಿಸಿ((Double mask))- ಈ ಸಮಯದಲ್ಲಿ ಲಸಿಕೆ ಕೇಂದ್ರದಲ್ಲಿ ಹೆಚ್ಚು ಜನಸಂದಣಿ ಸೇರುವುದು ನೆನಪಿರಲಿ, ಆದ್ದರಿಂದ ವೈರಸ್ ಸೋಂಕನ್ನು ತಪ್ಪಿಸಲು, ಡಬಲ್ ಮಾಸ್ಕ್ ಧರಿಸಿ. ಒಳಗೆ ಎನ್ -95 ಮುಖವಾಡ ಮತ್ತು ಹೊರಗಿನಿಂದ ಬಟ್ಟೆ ಮಾಸ್ಕ ಹಾಕಿಕೊಳ್ಳಿ.
ಇದನ್ನೂ ಓದಿ : Corona Vaccine Side Effect : ಕೊರೋನಾ ಲಸಿಕೆಯ ಅಡ್ಡಪರಿಣಾಮಗಳಿಂದ ರಕ್ಷಿಸಿಕೊಳ್ಳಲು ಇಲ್ಲಿದೆ 5 ಆಹಾರಗಳು..!
2. ಹ್ಯಾಂಡ್ ಗ್ಲೌಸ್ ಸಹ ಧರಿಸಿ - ಲಸಿಕಾ ಕೇಂದ್ರಕ್ಕೆ ಹೋದಾಗ ಎಲ್ಲಂದ್ರಲ್ಲಿ ಮುಟ್ಟಿ ನಂತರ ನಿಮ್ಮ ಮುಖ, ಕಣ್ಣು, ಮೂಗು ಮತ್ತು ಬಾಯಿಯನ್ನು ಮುತ್ತಿಕೊಳುವುದರಿಂದ ವೈರಸ್ ನಿಮ್ಮ ದೇಹಕ್ಕೆ ಪ್ರವೇಶಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹ್ಯಾಂಡ್ ಗ್ಲೌಸ್(wear gloves) ಧರಿಸುವುದು ಬಹಳ ಮುಖ್ಯ.
ಇದನ್ನೂ ಓದಿ : Home Remedies: ಕೊರೊನಾ ಸೋಂಕಿನ ನಂತರ ಕಳೆದುಕೊಂಡ ವಾಸನೆ ಗ್ರಹಿಕೆಯ ಶಕ್ತಿ ಮತ್ತು ರುಚಿ ಮರಳಿ ಪಡೆಯುವುದು ಹೇಗೆ?
3. ಕೈಕುಲುಕಬೇಡಿ - ಲಸಿಕೆ ಕೇಂದ್ರದಲ್ಲಿ ನಿಮಗೆ ತಿಳಿದಿರುವ ಯಾರನ್ನಾದರೂ ನೀವು ಭೇಟಿಯಾದರೆ, ಅವರಿಗೆ ಕೈಕುಲುಕುವುದು(Avoid handshake) ಅಥವಾ ತಬ್ಬಿಕೊಳ್ಳುವುದನ್ನು ಮಾಡಬೇಡಿ. ದೂರದಿಂದ ಹೈ-ಹಲೋ ಅಥವಾ ಹಲೋ ಮಾಡಿ. ಅಲ್ಲದೆ, ಲಸಿಕೆ ಸಾಲಿನಲ್ಲಿ ನಿಂತಿರುವಾಗ, ಜನರು ಹಿಂದಕ್ಕೆ ಮತ್ತು ಮುಂದಕ್ಕೆ ನಿಂತಿರುವ ಜನರೊಂದಿಗೆ ಮಾತನಾಡಬೇಡಿ.
ಇದನ್ನೂ ಓದಿ : Cloves Benefits : ಪುರುಷರು ಪ್ರತಿದಿನ 2 ಲವಂಗ ಸೇವಿಸಿ : ಮುಂದೆ ನೋಡಿ ಅದರ ಪ್ರಯೋಜನ!
4. ಸ್ಯಾನಿಟೈಜರ್ ಬಳಸಿ- ಹ್ಯಾಂಡ್ ಗ್ಲೌಸ್ ಧರಿಸಿದ ನಂತರವೂ ಗ್ಲೌಸ್ ಮೇಲೆ ಸ್ಯಾನಿಟೈಜರ್ ಅನ್ನು ಬಳಸುವ ಮೂಲಕ ಕೈಗಳನ್ನು ಸ್ವಚ್ಛವಾಗಿರಿಸಿಕೊಳ್ಳಿ (Use sanitizer) ಇದರಿಂದ ಸೋಂಕು ತಗಲುವದಿಲ್ಲ.
5. ಮಾಸ್ಕ್ ಮುಟ್ಟಬೇಡಿ - ವೈದ್ಯರ ಪ್ರಕಾರ, ಮಾಸ್ಕ್ ಧರಿಸಿದ ನಂತರ ಅನೇಕ ಜನರು ಮಾಸ್ಕ್ ಹೊರ ಮೇಲ್ಮೈಯನ್ನು ತಮ್ಮ((Dont touch the mask)) ಕೈಗಳಿಂದ ಪದೇ ಪದೇ ಮುತ್ತಿಕೊಳ್ಳುತ್ತಾರೆ. ಇದನ್ನು ಮಾಡಬೇಡಿ ಏಕೆಂದರೆ ಮಾಸ್ಕ್ ಹೊರ ಮೇಲ್ಮೈಯಲ್ಲಿ ಸೋಂಕಿತ ವೈರಸ್ ಇರಬಹುದು.
ಇದನ್ನೂ ಓದಿ : ಪ್ರತಿನಿತ್ಯ ಈ ರೀತಿ ಸೇವಿಸಿದರೆ ಅರಿಶಿನ ನಿಯಂತ್ರಣದಲ್ಲಿರುತ್ತದೆ ಶುಗರ್ ಲೆವೆಲ್
6. ವ್ಯಾಕ್ಸಿನೇಷನ್ ಕೇಂದ್ರಕ್ಕೆ ಹೋಗುವ ಮೊದಲು, ಚಹಾ ಮತ್ತು ಕಾಫಿ ಕುಡಿದು ಮನೆಯಿಂದ ಏನಾದರೂ ತಿಂದ ನಂತರ ಹೊರಗೆ ಹೋಗಿ. ವ್ಯಾಕ್ಸಿನೇಷನ್ಗಾಗಿ ಸಾಲಿನಲ್ಲಿ ನಿಂತಾಗ ಏನನ್ನೂ ತಿನ್ನುವುದು ಅಥವಾ ಕುಡಿಯುವುದನ್ನು ಮಾಡಬೇಡಿ. ಯಾವುದೇ ಸಂದರ್ಭದಲ್ಲಿ ನಿಮ್ಮ ಮಾಸ್ಕ್ ಮುಖದಿಂದ ತೆಗೆದುಹಾಕಬೇಡಿ.
ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.