Corona Vaccine Side Effect : ಕೊರೋನಾ ಲಸಿಕೆಯ ಅಡ್ಡಪರಿಣಾಮಗಳಿಂದ ರಕ್ಷಿಸಿಕೊಳ್ಳಲು ಇಲ್ಲಿದೆ 5 ಆಹಾರಗಳು..!

ಲಸಿಕೆ ಹಾಕಿಸಿಕೊಂಡ ನಂತರ ಜ್ವರ ಬರುವುದು, ದೇಹದಲ್ಲಿ ನೋವು 

Last Updated : Apr 30, 2021, 06:11 PM IST
  • ಮೇ 1 ರಿಂದ 18 ರಿಂದ 44 ವರ್ಷದೊಳಗಿನ ಎಲ್ಲರಿಗೂ ಕೊರೋನಾ ಲಸಿಕೆ
  • ಲಸಿಕೆ ಹಾಕಿಸಿಕೊಂಡ ನಂತರ ಜ್ವರ ಬರುವುದು, ದೇಹದಲ್ಲಿ ನೋವು
  • ಅಡ್ಡಪರಿಣಾಮಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ಕೆಲವು ಟಿಪ್ಸ್
Corona Vaccine Side Effect : ಕೊರೋನಾ ಲಸಿಕೆಯ ಅಡ್ಡಪರಿಣಾಮಗಳಿಂದ ರಕ್ಷಿಸಿಕೊಳ್ಳಲು ಇಲ್ಲಿದೆ 5 ಆಹಾರಗಳು..! title=

ಮೇ 1 ರಿಂದ 18 ರಿಂದ 44 ವರ್ಷದೊಳಗಿನ ಎಲ್ಲರಿಗೂ ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಪ್ರಾಂಭ. ಆದರೆ ಲಸಿಕೆಯಿಂದ ಕೆಲವು ಅಡ್ಡಪರಿಣಾಮಗಳು ಬೀರುತ್ತಿವೆ ಎಂದು ಹೇಳಲಾಗುತ್ತಿದೆ. ಲಸಿಕೆ ಹಾಕಿಸಿಕೊಂಡ ನಂತರ ಜ್ವರ ಬರುವುದು, ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ. ಈ ಎಲ್ಲ ಅಡ್ಡಪರಿಣಾಮಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ಕೆಲವು ಟಿಪ್ಸ್.

ಹೋವರ್ಡ್ ವಿಶ್ವವಿದ್ಯಾಲಯದ ಪೌಷ್ಟಿಕ ತಜ್ಞ ಡಾ.ಉಮಾ ನಾಯ್ಡು ಅವರು  ಇನ್ಸ್ಟಾಗ್ರಾಮ್ನಲ್ಲಿ  ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಕರೋನಾ ಲಸಿಕೆಯ ಅಡ್ಡಪರಿಣಾಮ(Corona Vaccine Side Effect)ಗಳನ್ನು ತಡೆಗಟ್ಟಲು ಯಾವ ಆಹಾರ ಸೇವಿಸಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ : Home Remedies: ಕೊರೊನಾ ಸೋಂಕಿನ ನಂತರ ಕಳೆದುಕೊಂಡ ವಾಸನೆ ಗ್ರಹಿಕೆಯ ಶಕ್ತಿ ಮತ್ತು ರುಚಿ ಮರಳಿ ಪಡೆಯುವುದು ಹೇಗೆ?

ಹಸಿರು ತರಕಾರಿಗಳು : ನಮ್ಮ ಆಹಾರದಲ್ಲಿ ಹಸಿರು ಸೊಪ್ಪು ತರಕಾರಿಗಳನ್ನು ಸೇವಿಸಬೇಕು  ಎಂದು ಡಾ.ಉಮಾ ನಾಯ್ಡು ಹೇಳಿದ್ದಾರೆ. ಹಸಿ ತರಕಾರಿಗಳಲ್ಲಿ(Green Vegetables) ಹೆಚ್ಚಿನ ಪ್ರಮಾಣದ ಆಂಟಿ-ಆಕ್ಸಿಡೆಂಟ್ ಕಂಡುಬರುತ್ತದೆ, ಇದು ದೇಹದಲ್ಲಿನ ಸೋಂಕನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ : Cloves Benefits : ಪುರುಷರು ಪ್ರತಿದಿನ 2 ಲವಂಗ ಸೇವಿಸಿ : ಮುಂದೆ ನೋಡಿ ಅದರ ಪ್ರಯೋಜನ!

ಹಸಿರು ತರಕಾರಿಗಳ ಸೂಪ್ : ಹಸಿರು ತರಕಾರಿಗಳ ಸೂಪ್ ತಯಾರಿಸಿ ಸೇವಿಸುವುದರಿಂದ ದೇಹಕ್ಕೆ ರೋಗ ನಿರೋಧಕ ಶಕ್ತಿ(Immunity) ಹೆಚ್ಚಾಗುತ್ತದೆ. ಇದಲ್ಲದೆ, ಈ ಸೂಪ್‌ಗಳಲ್ಲಿ ವಿವಿಧ ಮಸಾಲೆ ಪದಾರ್ಥಗಳನ್ನು ಸಹ ಬಳಸಲಾಗುತ್ತದೆ, ಈ ಕಾರಣದಿಂದಾಗಿ ಈ ಸೂಪ್‌ಗಳನ್ನು ಸೇವಿಸುವ ಮೂಲಕ ಸೋಂಕಿನ ವಿರುದ್ಧ ಹೋರಾಡಲು ಸಹ ಸಹಾಯವಾಗುತ್ತದೆ.

ಇದನ್ನೂ ಓದಿ : ಪ್ರತಿನಿತ್ಯ ಈ ರೀತಿ ಸೇವಿಸಿದರೆ ಅರಿಶಿನ ನಿಯಂತ್ರಣದಲ್ಲಿರುತ್ತದೆ ಶುಗರ್ ಲೆವೆಲ್

ಈರುಳ್ಳಿ ಮತ್ತು ಬೆಳ್ಳುಳ್ಳಿ : ಪ್ರೋಬಯಾಟಿಕ್‌ಗಳು ಈರುಳ್ಳಿ ಮತ್ತು ಬೆಳ್ಳುಳ್ಳಿ(Onion and Garlic)ಯಲ್ಲಿ ಕಂಡುಬರುತ್ತವೆ, ಇದನ್ನು ಆಡು ಭಾಷೆಯಲ್ಲಿ ಉತ್ತಮ ಬ್ಯಾಕ್ಟೀರಿಯಾ ಎಂದೂ ಕರೆಯುತ್ತಾರೆ. ಇವು ನಮ್ಮ ದೇಹಕ್ಕೆ ಅತ್ಯಂತ ಪ್ರಯೋಜನಕಾರಿ. ಆದ್ದರಿಂದ ನೀವು ಸೇವಿಸುವ ಆಹಾರದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಸಿ.

ಇದನ್ನೂ ಓದಿ : Is Hoarse Voice Corona Symptom?: ಗಂಟಲು ಹಿಡಿಯುವುದು ಕೂಡ ಕೊರೊನಾ ಲಕ್ಷಣವೇ? ನಿರ್ಲಕ್ಷಿಸಬೇಡಿ ತಕ್ಷಣ ಟೆಸ್ಟ್ ಮಾಡಿಸಿ

ಅರಿಶಿನ : ಅರಿಶಿನ(Turmeric)ವು ಸೋಂಕು ನಿರೋಧಕ ಮತ್ತು ಒತ್ತಡ ನಿರೋಧಕ ಗುಣಗಳನ್ನು ಹೊಂದಿದೆ. ಈ ಸಹಾಯದಿಂದ ಇದು ದೇಹಕ್ಕೆ ತುಂಬಾ ಸಹಾಯಕಾರಿಯಾಗಿದೆ.

ಬೆರಿ ಹಣ್ಣು : ಉರಿಯೂತದ ಸಮಸ್ಯೆಗಳಿಗೆ ನೀಲಿ ಬೆರಿ ಹಣ್ಣು ಬಹಳ ಉತ್ತಮವಾಗಿದೆ. ಇದು ದೇಹವನ್ನು ಸೋಂಕಿನಿಂದ ರಕ್ಷಿಸುತ್ತದೆ. ನೀಲಿ ಬೆರಿಯಲ್ಲಿ ಆಂಟಿ-ಆಕ್ಸಿಡೆಂಟ್ ಅಂಶ ಕಂಡುಬರುತ್ತದೆ ಮತ್ತು ದೇಹದಲ್ಲಿ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ : ಆಕ್ಸಿಮೀಟರ್ ಖರೀದಿಸುವ ಮುನ್ನ ಈ 8 ವಿಚಾರಗಳನ್ನು ತಿಳಿದುಕೊಳ್ಳಿ

ಈ ಮೇಲಿನ ಐದು ಆಹಾರಗಳನ್ನು ನಿಮ್ಮ ಊಟದಲ್ಲಿ ಸೇವಿಸುವುದರಿಂದ. ನಿಮ್ಮ ದೇಹವು ಕೊರೋನಾ ಲಸಿಕೆಯ ಅಡ್ಡಪರಿಣಾಮಗಳ ವಿರುದ್ಧ ಹೋರಾಡುತ್ತದೆ. ವಿಶೇಷವೆಂದರೆ, ಮೇಲೆ ತಿಳಿಸಿದ ಎಲ್ಲಾ ಆಹಾರಗಳು ನಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ಸಿಗುತ್ತವೆ. ಆದ್ದರಿಂದ, ಇಂದಿನಿಂದಲೇ ನಿಮ್ಮ ಆಹಾರದಲ್ಲಿ ಮೇಲಿನವುಗಳನ್ನು ಸೇವಿಸಿ.

ಇದನ್ನೂ ಓದಿ : Ayurvedic Medicine To Cure Corona: Corona ಸೋಂಕಿನ ಸಾಮಾನ್ಯ-ಮಧ್ಯಮ ಲಕ್ಷಣಗಳಿಗೆ ಪರಿಣಾಮಕಾರಿ ಈ ಆಯುರ್ವೇದ ಔಷಧಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News